More

    ನ್ಯಾಯಾಲಯಕ್ಕೆ ಹಾಜರಾಗಲು ಅರಣ್ಯಾಧಿಕಾರಿಗೆ ನೋಟಿಸ್​

    ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯಲ್ಲಿ 1,30,000 ಮಾವಿನ ಮರಗಳ ಮಾರಣ ಹೋಮ ಮಾಡಿದ ವಿಚಾರಕ್ಕೆ ಸಂಬಂದಿಸಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಬಿ.ಆರ್​.ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್​ ಮೆಹ್ತಾ ಅವರು ಮಂಗಳವಾರ ನೋಟಿಸ್​ ನೀಡಿದ್ದಾರೆ.

    ನ್ಯಾಯಾಲಯದ ರಿಟ್​ ಅರ್ಜಿ ಸಂಖ್ಯೆ 19171/2023 ಪ್ರಕರಣ ಸಂಬಂಧ 2023ರ ಅ.29ರಂದು ಅರಣ್ಯಾಧಿಕಾರಿಗಳಿಗೆ ಮಧ್ಯತರ ಆದೇಶ ನೀಡಿ ಯಾವುದೇ ಮರ ಕಡಿಯಬಾರದು ಎಂದು ನ್ಯಾಯಾಲಯ ಸೂಚಿಸಿತ್ತು. ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಹಾಗೂ ಸಹೊದ್ಯೋಗಿ ಅನಿಲ್​ಕುಮಾರ್​ ಮತ್ತು ಇತರರು ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಉಪ್ಪರಪಲ್ಲಿ ಮತ್ತು ಇತರ ಗ್ರಾಮಗಳಲ್ಲಿ ದೌರ್ಜನ್ಯದಿಂದ ಜೆಸಿಬಿ ಯಂತ್ರಗಳ ಮೂಲಕ 1,30,000 ಮಾವಿನ ಮರಗಳ ಮಾರಣಹೋಮ ಮಾಡಿದ್ದರು. ಆದೇಶ ಉಲ್ಲಂಘನೆ ಮಾಡಿರುವುದು ಹೊರನೋಟಕ್ಕೆ ಸಾಬೀತಾಗಿರುವುದರಿಂದ ಅರಣ್ಯಾಧಿಕಾರಿ ಏಡುಕೊಂಡಲು ಮತ್ತು ಇತರರು ಸರ್ವೊಚ್ಛ ನ್ಯಾಯಾಲಯದ ಮುಂದೆ ಹಾಜರಾಗಲು ಸುಪ್ರೀಂ ನೋಟಿಸ್​ ನೀಡಿದೆೆ.
    ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಸಂಜಯ್​ ನುಲಿ ಮತ್ತು ಎಂ.ಶಿವಪ್ರಕಾಶ್​ ವಾದ ಮಂಡಿಸಿದರು.

    ರೈತರಿಂದ ಸಂತಸ:
    ಮುಳಬಾಗಿಲು: ಅರಣ್ಯಾಧಿಕಾರಿ ಏಡುಕೊಂಡಲು ಅವರ ದಬ್ಬಾಳಿಕೆಯಿಂದಾಗಿ 1.30 ಲಕ್ಷ ಮರಗಳ ಮಾರಣಹೋಮ ಮಾಡಿದ್ದಕ್ಕೆ ಸವೋರ್ಚ್ಚ ನ್ಯಾಯಾಲಯದಿಂದ ನೋಟಿಸ್​ ಜಾರಿ ಮಾಡಿರುವುದು ರೈತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಂಯುಕ್ತ ಹೋರಾಟ ಸಮಿತಿಯ ಸಂಚಾಲಕರಾದ ತಾಲೂಕಿನ ಹೆಬ್ಬಣಿ ಎಂ.ಗೋಪಾಲ್​ , ಪಿ.ಆರ್​.ನಾರಾಯಣಸ್ವಾಮಿ, ಅಬ್ಬಣಿ ಶಿವಪ್ಪ, ಕೋಟಿಗಾನಹಳ್ಳಿ ಗಣೇಶಗೌಡ ಸಂತಸವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts