More

    ಖರ್ಗೆಗೆ ದಲಿತ ಕಾರ್ಯಕರ್ತ ಕಾಣಲ್ಲ

    ಚಿತ್ತಾಪುರ: ಒಂಬತ್ತು ಬಾರಿ ಗೆದ್ದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಮೋಷನಲ್ ಆಗಿ ಕಣ್ಣೀರು ಹಾಕಿದ್ದು, ಜನರಿಗಾಗಿ ಅಲ್ಲ, ಅವರ ಅಳಿಯನಿಗಾಗಿ. ಅವರ ಕಣ್ಣಿಗೆ ದಲಿತ ಕಾರ್ಯಕರ್ತ ಕಾಣುವುದಿಲ್ಲ. ಕಲಬುರಗಿ ಸೀಟ್ ದಲಿತ ಕಾರ್ಯಕರ್ತರಿಗೆ ನೀಡದೆ ಅಳಿಯನಿಗೆ ನೀಡಿ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
    ಪಟ್ಟಣದ ಬಾಪುರಾವ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದಿಂದ ಸೋಮವಾರ ಹಮ್ಮಿಕೊಂಡ ಜಿಲ್ಲಾ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಭಾರತ ಮಾತಾ ಕೀ ಜೈ ಅನ್ನೋಕ್ಕೆ ಖರ್ಗೆ ಅನುಮತಿ ಪಡೆಯಬೇಕು. ಸೋನಿಯಾ ಗಾಂಧಿ ಜೈ, ಪಾಕಿಸ್ತಾನ ಜಿಂದಾಬಾದ್ ಅನ್ನೋಕ್ಕೆ ಅನುಮತಿ ಬೇಕಿಲ್ಲ ಎಂದು ಹೇಳಿದರು.
    ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಎರಡು ಬಾರಿ ಸೋಲಿಸಿತು. ನೆಹರು ಮತ್ತು ಇಂದಿರಾ ತಮಗೆ ತಾವೇ ಭಾರತ ರತ್ನ ಪಡೆದರು. ಕಾಂಗ್ರೆಸ್ ಆಡಳಿತದಲ್ಲಿ ಹಲವು ಹಗರಣ ನಿತ್ಯ ಸುದ್ದಿಯಾಗುತ್ತಿದ್ದರೆ ಮೋದಿ ಆಡಳಿತದಲ್ಲಿ ಅಭಿವೃದ್ಧಿಯ ಯೋಜನೆ ಸುದ್ದಿ ಆಗುತ್ತಿವೆ ಎಂದು ಹೇಳಿದರು.
    ಯುಪಿಎ ಅವಧಿಯಲ್ಲಿ ಆಕಾಶ, ಪಾತಾಳ, ಭೂಮಿ ಮೂರು ಸೇರಿ ೨ಜಿ, ಕಲ್ಲಿದ್ದಲು, ಕಾಮನ್ವೆಲ್ತ್, ಬ್ಯಾಂಕಿAಗ್, ಆದರ್ಶ ವೆಲ್ಫೇರ್, ಷೇರು ಪೇಟೆ ಸೇರಿ ನಡೆದ ಹಗರಣಗಳ ಸಾಲುಗಳೇ ಇವೆ. ಮೋದಿ ಬಡವರ ಏಳಿಗೆಗೆ ದುಡಿಯುತ್ತಿದ್ದು, ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
    ಎಂಎಲ್‌ಸಿ ಡಾ.ಬಿ.ಜಿ.ಪಾಟೀಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಡಾ.ಉಮೇಶ ಜಾಧವ್ ಹೆಚ್ಚು ಜನಪರ ಕೆಲಸ ಮಾಡಿ ಅಭಿವೃದ್ಧಿ ಹೊಳೆ ಹರಿಸಿz್ದÁರೆ. ಈ ಬಾರಿ ಹೆಚ್ಚಿನ ಮತ ಹಾಕಿ ಮತ್ತೆ ಗೆಲ್ಲಿಸಿ ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಹೇಳಿದರು.
    ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ವಾಡಿಯಲ್ಲಿ ಶ್ರೀರಾಮ ಮೂರ್ತಿ ಮೆರವಣಿಗೆ ಅವಕಾಶ ನೀಡಲಿಲ್ಲ. ೧೦ಸಾವಿರ ಜನರು ಸೇರಿದ್ದರು. ಅನೇಕರ ವಿರುದ್ಧ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಅಭಿವೃದ್ಧಿ, ಶಾಂತಿ, ಸುವ್ಯವಸ್ಥೆಗಾಗಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
    ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ, ಚಿತ್ತಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ೨೦ ಸಾವಿರ ಮತಗಳ ಲೀಡ್ ಸಿಗುತ್ತದೆ. ಕಾರ್ಯಕರ್ತರ ವಿರುದ್ಧ ದಬ್ಬಾಳಿಕೆ, ಕೇಸ್‌ಗಳು ಕಾಂಗ್ರೆಸ್‌ನವರು ಹಾಕುತ್ತಿದ್ದು, ಅದಕ್ಕೆ ತಕ್ಕ ಪಾಠ ಮತಗಳ ಮೂಲಕ ಕಲಿಸಬೇಕು ಎಂದರು.
    ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ ತೆಗನೂರ ಮಾತನಾಡಿದರು. ಉಸ್ತುವಾರಿ ಶರಣಪ್ಪ ತಳವಾರ, ಬಿಜೆಪಿ ತಾಲೂಕಾಧ್ಯP್ಷÀ ರವೀಂದ್ರ ಸಜ್ಜನಶೆಟ್ಟಿ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ದೇವರಾಜ ತಳವಾರ, ಪ್ರಮುಖರಾದ ವಿಠಲ್ ವಾಲ್ಮೀಕಿ ನಾಯಕ್, ಬಸವರಾಜ ಬೆಣ್ಣೂರಕರ್, ಸೋಮಶೇಖರ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಅವಂಟಿ, ಭಾಗೀರಥಿ, ನೀಲಕಂಠ ಪಾಟೀಲ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts