More

    ಪ್ರಣಾಳಿಕೆಯಲ್ಲಿ ಮೂಲಭೂತ ಶಿಕ್ಷಣಕ್ಕೆ ಒತ್ತು ನೀಡದ ಬಿಜೆಪಿ: ಬಸವರಾಜ ಗುರಿಕಾರ

    ಗದಗ: ಭಾರತೀಯ ಜನತಾ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸಂವಿಧಾನದ ವಿಧಿ 21A ಅಡಿಯಲ್ಲಿ ಮೂಲಭೂತ ಹಕ್ಕಾಗಿರುವ ಶಿಕ್ಷಣದ ಮೂಲಭೂತ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂದು ಕೆಪಿಸಿಸಿ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಶಿಕ್ಷಣದ ಹಕ್ಕನ್ನು ಕನಿಷ್ಠ 12ನೇ ತರಗತಿಯ ಬಗ್ಗೆ ವಿಸ್ತರಿಸುವ ಬಗ್ಗೆಯಾಗಲಿ, ಖಾಲಿ ಇರುವ 12 ಲಕ್ಷ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಗುಣಮಟ್ಟವನ್ನು ಖಾತರಿಪಡಿಸುವ ಬಗ್ಗೆಯಾಗಲಿ, ಪೂರ್ವ-ಪ್ರಾಥಮಿಕ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ಗುರುತಿಸುವ ಮೂಲಕ ವಿಧಿ 45 ನ್ನು ಜಾರಿಗೊಳಿಸುವ ಬಗ್ಗೆಯಾಗಲಿ, ಮಕ್ಕಳು ಮತ್ತು ಪಾಲಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಾಗಲಿ ಅಥವಾ ಕನಿಷ್ಠ ಪಕ್ಷ ಸಾರ್ವಜನಿಕ ಶಿಕ್ಷಣವನ್ನು ಬಲವರ್ಧನೆಗೊಳಿಸುವ ಮೂಲಕ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ನೆರೆ ಹೊರೆಯ ಸಮಾನ ಶಾಲೆಯನ್ನಾಗಿ ಪರಿವರ್ತಿಸುವ ಯಾವ ಪ್ರಸ್ತಾವನೆಯೂ ಇಲ್ಲ ಎಂದು ಆರೋಪಿಸಿದರು.

    ಶಾಲಾ ಶಿಕ್ಷಣ ಕ್ಷೇತ್ರಕ್ಕೆ ಅಥವಾ ಸಾರ್ವಜನಿಕ ಶಿಕ್ಷಣವನ್ನು ಬಲವರ್ಧನೆಗೊಳಿಸುವ ಯಾವ ಪ್ರಸ್ತಾಪವೂ ‘ಮೋದಿಯವರ ಗ್ಯಾರಂಟಿ ಬತ್ತಳಿಕೆಯಲ್ಲಿಲ್ಲ. ಸಾರ್ವಜನಿಕ ಶಾಲಾ ಶಿಕ್ಷಣ ಬಲವರ್ಧನೆಗೆ ಸಂಬಂದಿಸಿದಂತೆ ಬಿಜೆಪಿ ಶೂನ್ಯ ಕೊಡುಗೆ ನೀಡಿದೆ‌ ಕಳೆದ 10 ವರ್ಷಗಳಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ದಯನೀಯವಾಗಿ ಸೋತಿರುವ ಕೇಂದ್ರ ಸರ್ಕಾರವು , ಕನಿಷ್ಠ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಗ್ಯಾರಂಟಿ ನೀಡಬಹುದಿತ್ತು

    ಮಕ್ಕಳ ಸಂವಿಧಾನಾತ್ಮಕ ಮೂಲಭೂತ ಹಕ್ಕನ್ನು ಕಸಿಯುವ ಮೂಲಕ ಶಿಕ್ಷಣದ ಮೂಲಭೂತ ಹಕ್ಕನ್ನೇ ಗೌಣವಾಗಿಸಲು ಮುಂದಾಗಿರುವ ಈ ಸಂದರ್ಭದಲ್ಲಿ, 26.52 ಕೋಟಿ ಮಕ್ಕಳ ಪಾಲಕರ ಮತ್ತು ಅವರ ಕುಟುಂಬದ ಸದಸ್ಯರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ಈ ಬಾರಿಯ ಚುನಾವಣೆ ಸಂವಿಧಾನದ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು ಕಾಂಗ್ರೆಸ್ ಗೆ ಮತ ನೀಡಬೇಕು ಎಂದರು.

    ಎಸ್.ಎನ್. ಬಳ್ಳಾರಿ, ಕೆ.ಎಫ್. ಹಲ್ಯಾಳ, ಮಹಾಂತೇಶ ಹುಲ್ಲೂರು ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts