More

    ಮೂವರು ಮಕ್ಕಳ ಸಾವಿನ ಪ್ರಕರಣ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ಥಳ ಪರಿಶೀಲನೆ, ಗರಿಷ್ಠ ಪರಿಹಾರಕ್ಕೆ ಸೂಚನೆ

    ವಿಜಯಪುರ: ಒಂಟೆ ಜೊತೆ ಆಟವಾಡುತ್ತಲೇ ಬೆನ್ನಟ್ಟಿಕೊಂಡು ಹೋಗಿ ನೀರಿಗೆ ಬಿದ್ದಿದ್ದ ಮೂವರು ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಘಟನಾ ಸ್ಥಳಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನಗರದ ಇಂಡಿ ರಸ್ತೆಯಲ್ಲಿರುವ ಮಹಾನಗರ ಪಾಲಿಕೆ ವ್ಯಾಪ್ತಿಯ ನೀರು ಸಂಸ್ಕರಣಾ ಘಟಕದಲ್ಲಿ ಮೇ 13 ರಂದು ಗಚ್ಚಿನಕಟ್ಟಿ ಕಾಲನಿಯ ಮೂವರು ಮಕ್ಕಳು ಬಿದ್ದು ಅಸುನೀಗಿದ್ದರು. ತನ್ನಿಮಿತ್ತ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರಾದ ಶಶಿಧರ ಕೊಸಂಬೆ ಹಾಗೂ ಶೇಖರಗೌಡ ರಾಮತನಾಳ ಭೇಟಿ ನೀಡಿ ಘಟಕದಲ್ಲಿನ ರಕ್ಷಣಾ ವ್ಯವಸ್ಥೆಯ ಸ್ಥಿತಿಗತಿಗಳನ್ನು ಪರಿಶೀಲಿಸಿ, ಮೃತಪಟ್ಟ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದರು.
    ಯುಜಿಡಿ ಮಲಿನ ನೀರು ಸಂಸ್ಕರಣಾ ಘಟಕದಲ್ಲಿ ಖುದ್ಧು ಪರೀಶೀಲನೆ ನಡೆಸಿದ ಆಯೋಗದ ಸದಸ್ಯ ಕೋಸಂಬೆ ಹಾಗೂ ರಾಮತನಾಳ ಅವರು, ಮುಖ್ಯರಸ್ತೆಗೆ ಹೊಂದಿಕೊಂಡಿರುವ ಘಟಕದ ಸುತ್ತಲೂ ಯಾವುದೇ ತಂತಿಬೇಲಿ, ತಡೆಗೋಡೆ ನಿರ್ಮಿಸದಿರುವುದು, ಕನಿಷ್ಠ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಹಾಗೂ ಸೂಕ್ತ ಸಿಬ್ಬಂದಿ ನಿಯೋಜಿಸದ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೂರು ಮಕ್ಕಳ ಸಾವಿಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂದು ಗರಂ ಆದರು.

    ಈ ವೇಳೆ ಸ್ಥಳದಲ್ಲಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಒಂದು ವಾರದಲ್ಲಿ ಸಂಸ್ಕರಣಾ ಘಟಕದ ಸುತ್ತಲೂ ತಂತಿ ಬೇಲಿ ಹಾಗೂ ಗೇಟ್ ಹಾಕಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಸೂಕ್ತ ಸಿಬ್ಬಂದಿ ನಿಯೋಜಿಬೇಕು. ಮೃತ ಮಕ್ಕಳ ಕುಟುಂಬಕ್ಕೆ ಪಾಲಿಕೆಯಿಂದ ತ್ವರಿತ ಹಾಗೂ ಗರಿಷ್ಠ ಆರ್ಥಿಕ ಪರಿಹಾರ ನೀಡಬೇಕೆಂದು ಸೂಚನೆ ನೀಡಿದ್ದೇನೆ. ವಾರದ ಒಳಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಆಯೋಗ ಶಿಘಾರಸ್ಸು ಮಾಡಲಿದೆ. ಅಲ್ಲದೇ ಈ ಕುರಿತು ಸರ್ಕಾರಕ್ಕೂ ವರದಿ ಸಲ್ಲಿಸಲಾಗುತ್ತದೆ. ಅಲ್ಲದೇ ಪ್ರಕರಣ ಕುರಿತು ಮಕ್ಕಳ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆಯೋಗ ಬದ್ಧವಾಗಿದೆ ಎಂದು ತಿಳಿಸಿದರು.

    ಆಯೋಗದ ಇನ್ನೋರ್ವ ಸದಸ್ಯ ಶೇಖರಗೌಡ ರಾಮತನಾಳ ಮಾತನಾಡಿ, ಸ್ಥಳೀಯರ ಒತ್ತಾಯ ಹಾಗೂ ಮಕ್ಕಳ ಸಾವಿನ ಘಟನೆ ಗಮನಿಸಿದರೆ ನಗರದ ಮಧ್ಯಭಾಗದಲ್ಲಿರುವ ಈ ಯುಜಿಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಬೇರೆಡೆ ಸ್ಥಳಾಂತರ ಮಾಡುವುದು ಸೂಕ್ತ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಚರ್ಚಿಸಲು ಸೂಚಿಸುತ್ತೇವೆ ಎಂದರು.

    ಮೃತ ಮಗು ಮಿಹಿರ್‌ನ ತಂದೆ ಶ್ರೀಕಾಂತ ಜನಗೌಳಿ ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮೂವರು ಮಕ್ಕಳ ಸಾವಿ ಪ್ರಕರಣ ಇಡಿ ನಾಗರಿಕ ಸಮಾಜ ತಲೆ ತಗ್ಗಿಸುವಂತವುದು. ಪಾಲಿಕೆ ವತಿಯಿಂದ ಗರಿಷ್ಠಮಟ್ಟದ ಆರ್ಥಿಕ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆಯೋಗ ಸದಾ ನಿಮ್ಮೊಂದಿಗಿರುತ್ತದೆ ಎಂದು ಕುಟುಂಬ ಸದಸ್ಯರಿಗೆ ಸೂಕ್ತ ನ್ಯಾಯ ಕೊಡಿಸುವ ಭರವಸೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts