More

    ದ.ಕನ್ನಡ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡದ ಪೂರ್ವಸಿದ್ಧತೆ ಸಭೆ

    ಮಂಗಳೂರು: ಪ್ರವಾಹ ರಕ್ಷಣಾ ತಂಡ ಸಿದ್ಧಪಡಿಸಿ, ಸಾಮಗ್ರಿಗಳಾದ ಆಸ್ಕಾ ಲೈಟ್, ಲೈಫ್ ಜಾಕೆಟ್, ಲೈಫ್ ಬಾಯ್,ಬೋಟ್ ಮತ್ತು ಹಗ್ಗಗಳನ್ನು ಸರಿಯಾಗಿದೆಯೇ ಎಂದು ಪರೀಕ್ಷಿಸಿ ಜಿಲ್ಲಾ ಕಚೇರಿಯಿಂದ ತುರ್ತು ಕರೆ ಬಂದಾಗ ಸಿದ್ಧ ಇರುವಂತೆ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಸೂಚಿಸಿದ್ದಾರೆ.


    ಗೃಹರಕ್ಷಕದಳದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರವಾಹರಕ್ಷಣಾ ತಂಡದ ಪೂರ್ವಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಅವರು ರಕ್ಷಣಾ ತಂಡದ ಸದಸ್ಯರಿಗೆ ಸೂಚನೆ ನೀಡಿದ್ದಾರೆ.


    ಕೇಂದ್ರ ಕಛೇರಿಯಿಂದ ನೀಡಲಾದ ಬೋಟ್‌ಗಳನ್ನು ಹಾಗೂ ಪ್ರವಾಹ ರಕ್ಷಣಾ ಸಾಮಗ್ರಿಗಳನ್ನು ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ ಅವರಿಗೆ ಹಸ್ತಾಂತರಿಸಿದರು. ತರಬೇತುದಾರ ಮಹೇಶ್, ಉಳ್ಳಾಲ ಘಟಕಾಧಿಕಾರಿ ಸುನಿಲ್, ಪಣಂಬೂರು ಘಟಕಾಧಿಕಾರಿ ಶಿವಪ್ಪ ನಾಯ್ಕ,ಸುರತ್ಕಲ್ ಘಟಕಾಧಿಕಾರಿ ರಮೇಶ್, ಗೃಹರಕ್ಷಕರಾದ ಸುನಿಲ್, , ಗಿರೀಶ್, ದಿವಾಕರ, ಜನಾರ್ದನ,ಸಂತೋಷ್, ಮಂಜುನಾಥ, ಜೀವನ್ ರಾಜ್ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts