More

    ಕೋಟ್ಯಧಿಪತಿ ವರನಿಗಾಗಿ ಆನ್​ಲೈನ್ ​ಮೊರೆ..ಕುಳಿತಲ್ಲೇ ಖರ್ಚು ಮಾಡಿದ್ದು ಎಷ್ಟು ಲಕ್ಷ ಗೊತ್ತಾ? ಕಡೆಗೆ ಆಗಿದ್ದೇನು?

    ನವದೆಹಲಿ: ಭಾರತದಲ್ಲಿ ಮದುವೆ ಸಂಪ್ರದಾಯಬದ್ಧವಾಗಿ ನಡೆಯುವುದೇ ಹೆಚ್ಚು. ವರ ಅಥವಾ ವಧುವಿಗೆ ಜೀವನ ಸಂಗಾತಿಯನ್ನು ಪಾಲಕರು ಹುಡುಕಿ ಅರೇಂಜ್ಡ್ ಮ್ಯಾರೇಜ್‌ ಮಾಡುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗಾಗಿ ಸಮುದಾಯದ ಸದಸ್ಯರು ಅಥವಾ ವೃತ್ತಿಪರ ಮ್ಯಾಚ್‌ಮೇಕರ್‌ಗಳ ಮೂಲಕ ವಧು – ವರನನ್ನು ಪತ್ತೆಹಚ್ಚಲು ಕುಟುಂಬಗಳು ಹೆಚ್ಚಿನ ಪ್ರಯತ್ನ ಮಾಡುತ್ತವೆ. ಆದಾಗ್ಯೂ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ಜೀವನ ಸಂಗಾತಿಗಳ ಹುಡುಕಾಟ ಪ್ರಕ್ರಿಯೆ ರೂಪಾಂತರಗೊಂಡಿದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ.

    ಇದನ್ನೂ ಓದಿ: ‘ಮುಸ್ಲಿಮರು ಕಾಂಡೋಮ್‌ ಹೆಚ್ಚು ಬಳಸ್ತಾರೆ’: ಪ್ರಧಾನಿ ಮೋದಿಯವರ ‘ಹೆಚ್ಚು ಮಕ್ಕಳು’ ಹೇಳಿಕೆಗೆ ಓವೈಸಿ ಕೌಂಟರ್

    ಅದೇ ರೀತಿ ಇಲ್ಲೊಬ್ಬ ತಂದೆ ಮಗಳಿಗೆ ಶ್ರೀಮಂತ ವರನ ಅನ್ವೇಷಣೆಗೆ ಇಳಿದು ಕುಳಿತಲ್ಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ‘X'(ಎಕ್ಸ್) ಪೋಸ್ಟ್ ನಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ.

    ವೈವಾಹಿಕ ವೆಬ್​ಸೈಟ್‌ಗಳಲ್ಲಿ ಜೀವನ ಸಂಗಾತಿಯನ್ನು ಹುಡುಕುವುದಕ್ಕೆ ಶುಲ್ಕ ಕೇಳಲಾಗುತ್ತದೆ.  ಹೆಣ್ಣಿನ ತಂದೆ ಆನ್‌ಲೈನ್‌ನಲ್ಲಿ ಬ್ರೌಸ್ ಮಾಡುತ್ತ ತನ್ನ ಮಗಳಿಗೆ ಶ್ರೀಮಂತ ವರನನ್ನು ಹುಡುಕಲು ಬರೋಬ್ಬರಿ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.

    ಮದುವೆಯಾಗಲಿರುವ ಹುಡುಗಿಯ ಸ್ನೇಹಿತ ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಪೋಸ್ಟ್ ಮಾಡಿದ್ದಾನೆ. “200ಕೋಟಿ ರೂ.ಗೂ ಅಧಿಕ ವಹಿವಾಟು ಹೊಂದಿರುವ ಕುಟುಂಬದ ವರನನ್ನು ಹುಡುಕಲು ಹಠಕ್ಕೆ ಬಿದ್ದು 3 ಲಕ್ಷ ರೂ.ಗಳನ್ನು ಶುಲ್ಕವಾಗಿ ಪಾವತಿಸಿದ್ದಾನೆ. ಈ ಪೋಸ್ಟ್​ಗೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದು, 2,40,000 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

    ಶ್ರೀಮಂತ ವರನ ಅನ್ವೇಷಣೆಗೆ ಇಷ್ಟು ದೊಡ್ಡಮಟ್ಟದ ಶುಲ್ಕ ಪಾವತಿಸುವ ಉದ್ದೇಶವು ತೃಪ್ತಿ ತಂದಿದೆಯೇ? ನಿಮ್ಮ ಆಸೆ ಈಡೇರಿದೆಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಆದರೆ ನಮ್ಮ ಕುಟುಂಬದವರು ಹಲವು ಪ್ರೊಫೈಲ್ ಗಳನ್ನು ಪರಿಶೀಲಿಸಿ ತಿರಸ್ಕರಿಸಿದೆ ಎಂದು ಹುಡುಗಿ ತನ್ನ ಹಿಂದಿನ ಪೋಸ್ಟ್‌ಗೆ ಸೇರಿಸುತ್ತಾ ಆನ್‌ಲೈನ್‌ನಲ್ಲಿ ಸಂದೇಶವನ್ನು ಕಳುಹಿಸಿದ್ದಾಳೆ. “ಅಬ್ ತಕ್ ತೋ ನಹೀ (ಇನ್ನೂ ಇಲ್ಲ), 80ಕ್ಕೂ ಹೆಚ್ಚು ವರ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾಳೆ.

    ಹುಡುಗಿಯ ಸ್ರಾನೇಹಿತ ರಾಣಾ ಮಿಶ್ರಾ ಎಂಬಾತ ಈ ಪೋಸ್ಟ್​ ಮಾಡಿದ್ದು, ವಧು ಸುಂದರವಾಗಿದ್ದಾಳೆ ಮತ್ತು ಆಕೆಯ ಕುಟುಂಬವು ಶ್ರೀಮಂತ ಕುಟುಂಬಕ್ಕೆ ಸೇರಿದೆ ಎಂದು ಹೇಳಿದ್ದಾನೆ. ವಧು, ಆಕೆ ತಂದೆ ಮತ್ತು ಕುಟುಂಬದವರು ಇಂದೋರ್ ಮೂಲದವರು ಎಂದು ತಿಳಿದು ಬಂದಿದೆ.

    ಸೋನುಸೂದ್ ವಾಟ್ಸ್​ಆ್ಯಪ್ ಖಾತೆ ಮರುಸ್ಥಾಪನೆ: 61 ಗಂಟೆಗಳಲ್ಲಿ ಓದದ ಸಂದೇಶಗಳೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts