More

    ‘ಸ್ಮಾರ್ಟ್​’ ಹೌಸ್​ ಹ್ಯಾಪಿನೆಸ್​! ಡಿಜಿಟಲ್​ ಸೌಲಭ್ಯ ಅಳವಡಿಕೆಗೆ ಹೆಚ್ಚಿದ ಆಸಕ್ತಿ

    ಬೆಂಗಳೂರು: ಆಧುನಿಕ ಕಾಲಟ್ಟದಲ್ಲಿ ಡಿಜಿಟಲ್​ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದಂತೆ, ಸ್ಮಾರ್ಟ್​ ಕಟ್ಟಡ, ಸ್ಮಾರ್ಟ್​ ಮನೆ ನಿರ್ಮಾಣ ಹೆಚ್ಚಾಗುತ್ತಿದೆ. ಹೊಸದಾಗಿ ಮನೆ ನಿರ್ಮಿಸುತ್ತಿರುವವರು ಡಿಜಿಟಲ್​ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

    ದೇಶದ ಮಧ್ಯಮ ವರ್ಗದ ಮಂದಿ ಕೂಡ ಮನೆ ಕಟ್ಟುವಾಗ ಕನಿಷ್ಠ ಒಂದೆರಡು ಡಿಜಿಟಲ್​ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. 5ಜಿ ಇಂರ್ಟನೆಟ್​ ಸೇವೆ ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿದ್ದಂತೆ, ಸ್ಮಾರ್ಟ್​ ಮನೆಗಳ ನಿರ್ಮಾಣ ಸಂಖ್ಯೆ ಹೆಚ್ಚುವ ಸಾಧ್ಯತೆ ನಿಶ್ಚಿತ ಎನ್ನಲಾಗುತ್ತಿದೆ.

    ಅಗತ್ಯಕ್ಕೆ ತಕ್ಕಂತೆ ಡಿಜಿಟಲ್​ ಸೌಲಭ್ಯಗಳನ್ನು ಮನೆಗಳಲ್ಲಿ ಅಳವಡಿಸಿಕೊಳ್ಳಬಹುದು. ವಿದ್ಯುತ್​ ಹಾಗೂ ನೀರಿನ ಬಳಕೆ, ಮನರಂಜನೆ, ಸುರಕ್ಷತೆ, ಅಡುಗೆ ಮನೆ ಇತ್ಯಾದಿಗೆ ಸ್ಮಾರ್ಟ್​ ವ್ಯವಸ್ಥೆಗಳನ್ನು ಬಳಕೆ ಮಾಡಬಹುದು. ಇದರಿಂದ ಕೆಲಸದ ಹೊರೆಯೂ ಕಡಿಮೆಯಾಗುತ್ತದೆ. ಜತೆಗೆ ಮನೆಯಲ್ಲಿ ಅತ್ಯಾಧುನಿಕ ಸೌಲಭ್ಯ ಇದೆ ಎಂಬ ಹೆಗ್ಗಳಿಕೆಯನ್ನೂ ಗಳಿಸಬಹುದು. ಸ್ಮಾರ್ಟ್​ಫೋನ್ ಹಾಗೂ ವೈಫೈ ಸಂಪರ್ಕ ಹೊಂದಿದ್ದರೆ ಯಾವುದೇ ಅಡೆತಡೆಗಳಿಲ್ಲದೆ ಮನೆಗಳಲ್ಲಿ ಡಿಜಿಟಲ್​ ಸೌಲಭ್ಯಗಳನ್ನು ಅಳವಡಿಸಬಹುದು.

    ಅಡುಗೆ ಮನೆಯಲ್ಲಿ ಬಳಸುವ ಬಹುತೇಕ ವಸ್ತುಗಳು ಡಿಜಿಟಲ್​ ರೂಪ ಪಡೆದುಕೊಳ್ಳುತ್ತಿವೆ. ವಿದ್ಯುತ್​ ದೀಪ, ಫ್ಯಾನ್​, ಎಸಿ ನಿರ್ವಹಣೆ, ಸಿಸಿ ಕ್ಯಾಮರಾ ನಿರ್ವಹಣೆ ಇತ್ಯಾದಿಯನ್ನು ಕುಳಿತಲ್ಲಿಂದಲೇ ‘ಆನ್​&ಆಫ್​​’ ಮಾಡಲು ಸಾಧ್ಯವಿದೆ. ಜತೆಗೆ ಫ್ರಿಜ್​, ಮಿಕ್ಸರ್​ ಗೆಂಡರ್​, ಓವನ್​ ಇತ್ಯಾದಿಯನ್ನು ಕೂಡ ಮೊಬೈಲ್​ಗಳ ಮೂಲಕ ನಿರ್ವಹಿಸಬಹುದು. ಒಟ್ಟಾರೆಯಾಗಿ ಇಂದು ಮೊಬೈಲ್​ ಮೂಲಕ ಸಂಪೂರ್ಣ ಮನೆಯನ್ನು ನಿರ್ವಹಣೆ ಮಾಡಬಹುದು.

    ಟಚ್​ಲೆಸ್​ ಡೋರ್​ಬೆಲ್​

    ಪ್ರತಿಯೊಂದು ಮನೆಗಳಲ್ಲೂ ಬೆಲ್​ ಇದ್ದೇ ಇರುತ್ತದೆ. ಯಾರಾದರೂ ಬಂದರೆ ಮೊದಲು ಮುಖ್ಯದ್ವಾರದ ಬಳಿಯಿರುವ ಬೆಲ್​ ಬಾರಿಸುತ್ತಾರೆ. ಈ ವ್ಯವಸ್ಥೆ ನಿಧಾನವಾಗಿ ಹಳತೆನಿಸುತ್ತಿದ್ದು, ಡಿಜಿಟಲ್​ ಬೆಲ್​ ಬಳಕೆ ಹೆಚ್ಚುತ್ತಿದೆ. ವ್ಯಕ್ತಿಯೊಬ್ಬರು ಬಾಗಿಲಿನ ಬಳಿ ಬಂದು ನಿಲ್ಲುತ್ತಿದ್ದಂತೆ ಅಳವಡಿಸಿರುವ ಸೆನ್ಸರ್​ ಮೂಲಕ ಸಂದೇಶ ರವಾನೆಯಾಗುತ್ತದೆ. ಇದನ್ನು ಮೊಬೈಲ್​ ಮೂಲಕ ನಿಯಂತ್ರಿಸಬಹುದು.

    ಥರ್ಮೋಸ್ಟ್ಯಾಟ್​

    ದಿನದಿಂದ ದಿನಕ್ಕೆ ವಾತಾವರಣದಲ್ಲಿ ಬದಲಾವಣೆಯಾಗುತ್ತಿರುತ್ತದೆ. ಇದು ಮನೆಯೊಳಗೆ ಯಾವುದೇ ಬದಲಾವಣೆ ತರಬಾರದು ಎಂಬ ಕಾರಣಕ್ಕೆ ಥರ್ಮೋಸ್ಟ್ಯಾಟ್​​ಗಳನ್ನು ಅಳವಡಿಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಇದು ಮನೆಯೊಳಗೆ ಬೆಚ್ಚಗಿನ ಹಾಗೂ ತಂಪಿನ ವಾತಾವರಣ ಸೃಷ್ಟಿಸಲು ಸಹಾಯ ಮಾಡುತ್ತದೆ.

    ಹೈಟೆಕ್​ ಭದ್ರತೆ

    ಹೊಸದಾಗಿ ಮನೆ ನಿರ್ಮಿಸುತ್ತಿರುವವರು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮುಖ್ಯದ್ವಾರದಿಂದ ಹಿಡಿದು ಪ್ರತಿ ಹಂತದಲ್ಲೂ ಸ್ಮಾರ್ಟ್​ ಹೋಮ್​ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜತೆಗೆ ಡಿಜಿಟಲ್​ ಲಾಕರ್​ಗಳೂ ಮನೆಯಲ್ಲಿ ಬಳಕೆಯಾಗುತ್ತಿವೆ. ಇದರೊಂದಿಗೆ ಬಾಗಿಲುಗಳಿಗೆ ಕೀಗಳ ಬದಲಾಗಿ, ಫಿಂಗರ್​ ಪ್ರಿಂಟ್​ ತಂತ್ರಜ್ಞಾನ ಅಳವಡಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts