More

    ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತ್ಯುತ್ತರ, ಬಿಜೆಪಿ ಸಾಧನೆಗಳ ಚರ್ಚೆಗೆ ಸದಾ ಸಿದ್ಧ ಎಂದ ವಿವೇಕಾನಂದ ಡಬ್ಬಿ

    ವಿಜಯಪುರ: ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲವೆಂದು ಕಾಂಗ್ರೆಸ್ಸಿಗರ ಟೀಕೆಗೆ ಖಡಕ್ ಆಗಿ ಉತ್ತರಿಸಿರುವ ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ, ಬಿಜೆಪಿ ಸಾಧನೆಗಳ ಚರ್ಚೆಗೆ ತಾವು ಸದಾ ಸಿದ್ಧ ಎಂದಿದ್ದಾರೆ.

    ಈಗಾಗಲೇ ಸಾಕಷ್ಟು ಬಾರಿ ಆಹ್ವಾನ ನೀಡಿದರೂ ಕಾಂಗ್ರೆಸ್ಸಿಗರು ಸ್ವೀಕರಿಸಿಲ್ಲ. ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಲು ಬಹಿರಂಗವಾಗಿ ಶಾಮಿಯಾನ ಹಾಕುವುದಾಗಿ ಹೇಳಿದ್ದೇವೆ. ಆದರೂ, ವೃಥಾ ಆರೋಪದಲ್ಲಿ ಕಾಂಗ್ರೆಸ್ಸಿಗರು ಕಾಲಹರಣ ಮಾಡುತ್ತಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಕಾಂಗ್ರೆಸ್ ಆಳ್ವಿಕೆಯಲ್ಲಿ ಕೇವಲ ನಾಲ್ಕು ನಗರಗಳಲ್ಲಿ ಮೆಟ್ರೋ ಸಂಚಾರ ಇತ್ತು, ಆದರೆ ಕೇವಲ 10 ವರ್ಷದ ಆಡಳಿತ ಅವಧಿಯಲ್ಲಿ 20 ನಗರರಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ. ಕಾಂಗ್ರೆಸ್‌ನ 70 ವರ್ಷಗಳ ಆಡಳಿತದಲ್ಲಿ 628 ವಿಶ್ವವಿದ್ಯಾಲಯಗಳು ಮಾತ್ರ ಆರಂಭಗೊಂಡವು. ಆದರೆ ಮೋದಿ ಅವರು ಕೇವಲ 10 ವರ್ಷಗಳಲ್ಲಿ 1168 ಹೊಸ ವಿಶ್ವವಿದ್ಯಾಲಯ ಸ್ಥಾಪಿಸಿ ಉನ್ನತ ಶಿಕ್ಷಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

    ಕಳೆದ ಏಳು ದಶಕಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶಾಲೆ, ಆರೋಗ್ಯ ಸೌಲಭ್ಯ ಕಲ್ಪಿಸುವ ಯಾವ ಮುಂದಾಲೋಚನೆಯೂ ಕಾಂಗ್ರೆಸ್ ಬಳಿ ಇರದಿರುವುದು ದುರ್ದೈವದ ಸಂಗತಿ ಎಂದರು.

    ಆದರೆ 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೋವಿಡ್ ದಾಳಿ ನಡೆಸಿದಾಗ ದಿಟ್ಟ ನಿರ್ಧಾರ ಕೈಗೊಂಡು ಜನರಲ್ಲಿ ಅಭಯ ತುಂಬಿದವರು ನರೇಂದ್ರ ಮೋದಿ. ಉಚಿತವಾಗಿ ಪ್ರತಿಬಂಧಕ ಲಸಿಕೆ ಹಂಚಿದರು, 20 ಲಕ್ಷ ಕೋಟಿ ರೂ.ಗಳಷ್ಟು ಪ್ಯಾಕೇಜ್ ನೀಡಿದರು ಎಂದರು.

    ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜಾಗತೀಕರಣ ನೀತಿ ಜಾರಿಗೊಂಡಿತು, ಆದರೆ ವಿಷಯದಲ್ಲಿ ಕಾಂಗ್ರೆಸ್ ಕೇವಲ ಆಮದು ಮಾಡುವುದಕ್ಕೆ ಮಾತ್ರ ಸೀಮಿತವಾಯಿತೇ ಹೊರತು ರಫ್ತು ಮಾಡುವುದಕ್ಕೆ ಯಾವ ಯೋಚನೆಯೂ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮೋದಿಜಿ ಆಡಳಿತದ ಕಾಲಘಟ್ಟದಲ್ಲಿ ಕೌಶಲಾಧಾರಿತ ಯೋಜನೆ ಅನ್ವಯ ರಫ್ತು ಉದ್ಯಮಕ್ಕೆ ಪ್ರೋತ್ಸಾಹ, ನವೋದ್ಯಮಗಳಿಗೆ ಆದ್ಯತೆ ನೀಡಿದರು ಎಂದು ಡಬ್ಬಿ ವಿವರಿಸಿದರು.

    ಧುರೀಣರಾದ ರಾಜೇಶ ತಾವಸೆ, ವಿಜಯ ಜೋಶಿ, ಶ್ರೀಕಾಂತ ಶಿಂಧೆ, ಸಂತೋಷ ವೆಂಕಪ್ಪಗೋಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts