More

    ಆರ್​ಸಿಬಿ-ಚೆನ್ನೈ ನಡುವಿನ ಪಂದ್ಯ ಮಳೆಯಿಂದ ಕಡಿತಗೊಂಡರೆ ಪ್ಲೇಆಫ್‌ ಲೆಕ್ಕಾಚಾರವೇನು?

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಹೈವೋಲ್ಟೇಜ್​ ನಾಕೌಟ್​ ಪಂದ್ಯ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಎರಡು ತಂಡಗಳ ಸೆಣಸಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂದು ಹೇಳಲಾಗಿದ್ದು, ಅಭಿಮಾನಿಗಳು ಪಂದ್ಯ ಮುಗಿಯುವವರೆಗೂ ಮಳೆ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಸಿಎಸ್​ಕೆ ಪ್ಲೇಆಫ್​ ಪ್ರವೇಶಿಸುತ್ತದೆ. ಆದರೆ, ಮಳೆಯಿಂದಾಗಿ ಓವರ್​ಗಳು ಕಡಿತಗೊಂಡಲ್ಲಿ ಎದುರಾಳಿ ತಂಡದ ವಿರುದ್ಧ ಎಷ್ಟು ರನ್​ಗಳ ಅಥವಾ ಓವರ್​ಗಳ ಅಂತರದಲ್ಲಿ ಆರ್​ಸಬಿ ಗೆಲ್ಲಬೇಕಿದೆ ಎಂಬುದರ ಲೆಕ್ಕಾಚಾರ ಹೊರಬಿದ್ದಿದೆ.

    ಇದನ್ನೂ ಓದಿ: ಅವರಿಬ್ಬರ ನಡುವೆ ಏನಿತ್ತು ಎಂದು ನಮಗೆ ಚೆನ್ನಾಗಿ ಗೊತ್ತು: ನಟಿ ಪವಿತ್ರಾ ಜಯರಾಮ್​ ಪುತ್ರಿ

    ಒಂದು ವೇಳೆ ಮಳೆ ಬಾರದೆ ಆರ್​ಸಿಬಿ ಮೊದಲು ಬ್ಯಾಟ್​ ಮಾಡಿದ್ದಲ್ಲಿ ಎದುರಾಳಿ ತಂಡದ ವಿರುದ್ಧ 18 ರನ್​ಗಳ ಜಯ ಸಾಧಿಸಬೇಕಿದೆ. ಒಂದು ವೇಳೆ ಟಾರ್ಗೆಟ್​ ಚೇಸ್​ ಮಾಡಿದ್ದಲ್ಲಿ 200ಕ್ಕೂ ಅಧಿಕ ಮೊತ್ತವನ್ನು 18.1 ಓವರ್​ಗಳಲ್ಲಿ ಗುರಿಯನ್ನು ಬೆನ್ನತ್ತಿ ಪ್ಲೇಆಫ್​ ಪ್ರವೇಶಿಸಬಹುದಾಗಿದೆ. ಒಂದು ವೇಳೆ ಮಳೆಯಿಂದ ಏನಾದರೂ ಓವರ್​ಗಳು ಕಡಿತಗೊಂಡು ಆರ್​ಸಿಬಿ ಮೊದಲು ಬ್ಯಾಟ್​ ಮಾಡಿದ್ದಲ್ಲಿ ಎದುರಾಳಿ ತಂಡದ ವಿರುದ್ಧ 18 ಹಾಗೂ ಅದಕ್ಕಿಂತ ಹೆಚ್ಚಿನ ರನ್​ಗಳ ಜಯ ಸಾಧಿಸಬೇಕಿದ. ಒಂದು ವೇಳೆ ಟಾರ್ಗೆಟ್​ ಚೇಸ್​ ಮಾಡಿದ್ದಲ್ಲಿ ಕನಿಷ್ಠ ಎಂದರೂ 18ಕ್ಕಿಂತ ಹೆಚ್ಚಿನ ಎಸೆತಗಳನ್ನು ಬಾಕಿ ಇರುವಂತೆಯೇ ಗೆಲ್ಲಬೇಕಿದೆ.

    See also  ಕಾಂಗ್ರೆಸ್​ ಅಭ್ಯರ್ಥಿ ಮೃಣಾಲ್​ ಪರ ಹಣ ಹಂಚಿಕೆ ಆರೋಪ; ಪರಾಜಿತ ಅಭ್ಯರ್ಥಿ ಸೇರಿದಂತೆ ಐವರು ಅರೆಸ್ಟ್​

    ಒಂದು ವೇಳೆ ಆರ್​ಸಿಬಿ ಚೆನ್ನೈ ವಿರುದ್ಧ ಗೆದ್ದಲ್ಲಿ ಪ್ಲೇಆಫ್​ ಪ್ರವೇಶಿಸಿದ ನಾಲ್ಕನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಂದು ವೇಳೆ ನಾಲ್ಕನೇ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದಲ್ಲಿ ಆರ್​ಸಿಬಿಗೆ ಎರಡನೇ ಸ್ಥಾನಕ್ಕೇರುವ ಅವಖಾಶವನ್ನು ಹೊಂದಿದ್ದು, ಮೇ 19ರಂದು ನಡೆಯಲಿರುವ ಡಬಲ್​ ಹೆಡರ್​ ಪಂದ್ಯದಲ್ಲಿ ಪಂಜಾಬ್​ ಎದುರು ಸನ್​ರೈಸರ್ಸ್​ ಹಾಗೂ ಕೋಲ್ಕತ ಎದುರು ರಾಜಸ್ಥಾನ ರಾಯಲ್ಸ್​ ಹೀನಾಯವಾಗಿ ಸೋಲಬೇಕಿದೆ. ಒಂದು ವೇಳೆ ಇದು ಆದಲ್ಲಿ ಆರ್​ಸಿಬಿಗೆ ಪ್ಲೇಆಫ್​ನಲ್ಲಿ ಎರಡು ಅವಕಾಶಗಳು ದೊರೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts