ಈ ಬಾರಿ ಕಾಂಗ್ರೆಸ್​ ಗೆಲ್ಲಿಸಿ

dks
Published on

ಪೀಣ್ಯದಾಸರಹಳ್ಳಿ: ರಾಜ್ಯದಲ್ಲಿ ಈಗಾಗಲೆ ಜೆಡಿಎಸ್, ಬಿಜೆಪಿ ಆಡಳಿತ ನೋಡಿದ್ದೀರಿ, ಈ ಬಾರಿ ಕಾಂಗ್ರೆಸ್ ಅನ್ನು ಗೆಲ್ಲಿಸಿ, ನಾವು ಉತ್ತಮ ಆಡಳಿತ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಜಿ. ಧನಂಜಯ ಗೌಡ ಪರವಾಗಿ ದಾಸರಹಳ್ಳಿ ಕ್ಷೇತ್ರದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ನಿಮ್ಮಕಷ್ಟ-ಸುಖಕ್ಕೆ ಗ್ಯಾರಂಟಿ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ. ಉಚಿತ ವಿದ್ಯುತ್‌ ಪ್ರತಿ ಹೆಣ್ಣುಮಕ್ಕಳು ಹಾಗೂ ಪದವೀಧರರ ಬ್ಯಾಂಕ್‌ ಖಾತೆಗೆ ನೇರ ಹಣ ಜಮೆ ಮಾಡುವುದು ಸೇರಿ ಹಲವು ಯೋಜನೆಗಳನ್ನು ಕೈಗೊಂಡಿದೆ ಎಂದು ಭರವಸೆ ನೀಡಿದರು. ಅಭ್ಯರ್ಥಿ ಜಿ. ಧನಂಜಯ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಹಿಂದೆಂದೂ ಕಂಡಿರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ಸುಂಕದಕಟ್ಟೆ ನೀಲಗಿರಿ ಎರಡನೇ ಹಂತದವರೆಗೂ ಡಿಕೆಶಿ ಕೈಗೊಂಡ ರೋಡ್ ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕಾಂಗ್ರೆಸ್‌ ಮುಖಂಡರಾದ ಕೆ.ಸಿ. ಅಶೋಕ್, ಕೆ. ನಾಗಭೂಷಣ್‌, ಜಯಂತಿ ಭಗವಾನ್, ರಮೇಶ್‌ಗೌಡ, ಆರ್.ಕೆ. ಲಕ್ಷ್ಮೀ ಸಾಗರ್, ಜಗದೀಶ್‌ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net