

ಬೆಳಗಾವಿ: ಇಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಬೆಳಗಾವಿಯ ಧರ್ಮನಾಥ್ ಭವನದಲ್ಲಿ ಪ್ರಧಾನಿ ವರ್ಚುವಲ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಬೂತ್, ಸಮಿತಿ ಮತ್ತು ಪೇಜ್ ಪ್ರಮುಖರು, ನಳಿನ್ ಕುಮಾರ್ ಕಟೀಲ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವೇದವ್ಯಾಸ್ ಕಾಮತ್ ಮುಂತಾದವರು ಭಾಗಿಯಾಗಿದ್ದರು.
ಬೂತ್ ಮಟ್ಟದಲ್ಲಿ ಮತದಾರರನ್ನು ಸೆಳೆದು ಮತಗಟ್ಟೆಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಯಕರ್ತರಲ್ಲಿ ವರ್ಚುವಲ್ ಕಾರ್ಯಕ್ರಮದ ಮೂಲಕನೇರವಾಗಿ ಮಾತಾಡಿ ಮತ್ತಷ್ಟು ಹುರಿದುಂಬಿಸಲು ಮೋದಿ ಪ್ಲ್ಯಾನ್ ಮಾಡಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕಾರ್ಯಕರ್ತರಿಗೆ ಪ್ರಧಾನಿ ಇಂದು ಭಾಷಣದ ಮೂಲಕ ಟಾನಿಕ್ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, " ಕರ್ನಾಟಕದಲ್ಲಿ ಲೋಕತಂತ್ರದ ಉತ್ಸವ ನಡೆಯುತ್ತಿದೆ. ಕರ್ನಾಟಕದ ಬಿಜೆಪಿ ಜಗತ್ತಿಗೆ ಪ್ರಜಾಪ್ರಭುತ್ವದ ಸೂತ್ರಗಳನ್ನು ಹೇಳಿದ ಬಸವಣ್ಣನ ನಾಡಿನವರು. ಹೀಗಾಗಿ ಈ ಚುನಾವಣೆಯಲ್ಲಿ ಡಬಲ್ ಗೌರವವಿದೆ
ಬೂತ್ನಲ್ಲಿ ಗೆದ್ದರೆ ನಾವೂ ರಾಜ್ಯದಲ್ಲೂ ಗೆಲ್ಲಬಹುದು. ಕಳೆದ ದಿನಗಳಲ್ಲಿ ನಾನು ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದಾಗ ಕರ್ನಾಟಕದ ಜನರು ಆಶಿರ್ವದಿಸಿದ್ದಾರೆ. ಇದೇ ರೀತಿಯ ಆಶಿರ್ವಾದ ಕರ್ನಾಟಕದ ಬಿಜೆಪಿ ನಾಯಕರ ಮೇಲೂ ಇದೆ" ಎಂದು ಹೇಳಿದರು.
ವಿರೂಪಾಕ್ಷಪ್ಪ ಶಿವಮೊಗ್ಗ "ನನ್ನ ಬೂತ್ ಗೆಲ್ಲಿಸಿ ಪಾರ್ಟಿಯ ಗೆಲುವನ್ನು ಪಕ್ಕಾ ಮಾಡಬೇಕು ಎಂದಿದ್ದೇನೆ. ಮುಂದಿನ 10 ದಿನಗಳಲ್ಲಿ ನಾವು ಪ್ರತಿ ಬೂತ್ ಗೆಲ್ಲಿಸಲು ನಾವು ಏನು ಮಾಡಬೇಕು?
ಉ: ಗೆಲ್ಲಬೇಕಾದರೆ ವಿಜಯದಲ್ಲಿ ಗೆಲುವನ್ನು ನಂಬುವ 10 ಪುರುಷರು ಹಾಗೂ 10 ಮಹಿಳೆಯರ ಪ್ರಬಲ ಸಂಘಟನೆ ನಡೆಸಿ. ನಿಮ್ಮ ಡೈರಿಯಲ್ಲಿ ಕರ್ನಾಟಕ ಹಾಗೂ ದೇಶದಲ್ಲಿ ಬಿಜೆಪಿ ಯಾವ ರೀತಿ ಅಭಿವೃದ್ಧಿ ಮಾಡಿದೆ ಎನ್ನುವ ಮಾಹಿತಿ ಪ್ರತಿಯೊಬ್ಬರ ಡೈರಿಯಲ್ಲಿ ಇರಬೇಕು. ಈ ಮಾಹಿತಿಯನ್ನು ಗ್ರಾಮೀಣ ಜನರಿಗೂ ತಲುಪಿಸಿ. ಬೂತ್ನ ಜನರ ಮನಸ್ಸನ್ನು ಗೆದ್ದಾಗ ಸುಲಭವಾಗಿ ಪ್ರತಿಯೊಂದು ಬೂತ್ ಗೆಲ್ಲಬಹುದು. ಎಂದಿದ್ದಾರೆ. ಇದೇ ರೀತಿ ಅನೇಕ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಪ್ರೋತ್ಸಾಹಿಸಿದ್ದಾರೆ.