ದುಬೈ ಹಾಗೂ ಪಾಕಿಸ್ತಾನ ಮೂಲದ ಕರೆಗಳನ್ನು ಸ್ಥಳೀಯ ಕಾಲ್​ಗಳಾಗಿ ಮಾರ್ಪಡಿಸುತ್ತಿದ್ದ ಕಿಲಾಡಿ! ಉಗ್ರಗಾಮಿಗಳ ಸಂಪರ್ಕದ ಶಂಕೆ….

international calls
Published on

ಬೆಂಗಳೂರು: ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡುತ್ತಿದ್ದ ಖತರ್ನಾಕ್​ ಕಿಲಾಡಿಯೊಬ್ಬ ಹೆಬ್ಬಗೋಡಿಯ ಮನೆಯೊಂದರಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು.

ಕೇರಳ ಮೂಲದ ಮುಸ್ತಫಾ ಎನ್ನುವಾತ ಈ ಕೃತ್ಯ ನಡೆಸಿದ್ದಾನೆ. ಈತ ವಾಯ್ಸ್ಓವರ್ ಇಂಟರ್ನೆಟ್ ಪ್ರೋಟೋಕಾಲ್ ನಿಂದ ಕರೆ ಬದಲಾಯಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದ. ಹೆಬ್ಬಗೋಡಿಯ ಮನೆಯಿಂದ ಒಟ್ಟು 6 ಸಿಮ್ ಬಾಕ್ಸ್​ಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಂದು ಸಿಮ್ ಬಾಕ್ಸ್ ನಲ್ಲಿ ಏಕಕಾಲದಲ್ಲಿ 250 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಕರೆಗಳನ್ನು ಲೋಕಲ್ ಕಾಲ್​ಗಳಾಗಿ ಕನ್ವರ್ಟ್ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.

ಸದ್ಯ ಸಿಸಿಬಿ ಪೊಲೀಸರು ಆರೋಪಿ ಮುಸ್ತಫಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈತ ದುಬೈ ಹಾಗೂ ಪಾಕಿಸ್ತಾನದ ಕಾಲ್ ಗಳನ್ನ ಕನ್ವರ್ಟ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಈತ ಟೆರರಿಸಂನಲ್ಲೂ‌ ಕೈ ಆಡಿಸಿರುವ ಶಂಕೆ ಬಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net