More

    ವೆಬ್​ಸೈಟ್​ನಲ್ಲೇ ಸಿಗುತ್ತಿತ್ತು ಮತದಾರರ ಮಾಹಿತಿ; ಸೋತರೆ ಹಣ ವಾಪಸ್ ಎನ್ನುತ್ತಿದ್ದ ಸಂಸ್ಥೆ!

    ಬೆಂಗಳೂರು: ಕಂಪನಿಯೊಂದಕ್ಕೆ ಕೇವಲ 25 ಸಾವಿರ ರೂ. ಕೊಟ್ಟಾಗ ಮತದಾರರ ದತ್ತಾಂಶ ಮಾರಾಟ ಮಾಡುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯ ಕಂಪನಿಯ ಹೆಸರನ್ನು ಬಹಿರಂಗ ಪಡೆಸದೆ ಪೊಲೀಸರು ಗೌಪತ್ಯೆ ಕಾಪಾಡಿದ್ದಾರೆ. ಚಿಲುಮೆ ಸಂಸ್ಥೆಯ ರೀತಿಯಲ್ಲೇ ಈ ಕಂಪನಿಯೂ ಕೆಲಸ ಮಾಡುತ್ತಿತ್ತು ಎನ್ನಲಾಗಿದ್ದು ಮತದಾರರ ಸಂಪೂರ್ಣ ವಿವರವನ್ನು ಸಂಸ್ಥೆ ಸಂಗ್ರಹಿಸುತ್ತಿತ್ತು.

    ಕೇವಲ 25 ಸಾವಿರ ರೂ.ಗೆ ಸಿಗುತ್ತೆ ಮತದಾರರ ಮಾಹಿತಿ!

    ಪ್ರತ್ಯೇಕ ಆ್ಯಪ್ ಬಳಸಿ ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮತದಾರರು ಕಳೆದ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಿದ್ದರು, ಈ ಬಾರಿ ಯಾವ‌ ಪಕ್ಷಕ್ಕೆ ಬೆಂಬಲಿಸಲಿದ್ದಾರೆ, ಎಂಬ ಮಾಹಿತಿಯನ್ನು ಈ ಸಂಸ್ಥೆ ಕಲೆ ಹಾಕುತ್ತಿತ್ತು ಎನ್ನಲಾಗಿದ್ದು ಕಂಪನಿ ತನ್ನ ವೆಬ್​ಸೈಟ್‌ನಲ್ಲಿ ಮತದಾರರ ಮೊಬೈಲ್ ಸಂಖ್ಯೆ ಹಾಕುತ್ತಿತ್ತು. 25 ಸಾವಿರ ನೀಡಿದರೆ ಲಾಗ್ ಇನ್ ಐಡಿ ನೀಡುತ್ತಿತ್ತು.

    ವೆಬ್​ಸೈಟ್​ನಲ್ಲೇ ಸಿಗುತ್ತಿತ್ತು ಮತದಾರರ ಮಾಹಿತಿ; ಸೋತರೆ ಹಣ ವಾಪಸ್ ಎನ್ನುತ್ತಿದ್ದ ಸಂಸ್ಥೆ!

    ಈ ಸಂಸ್ಥೆಯ ಬಳಿ ಸುಮಾರು 6 ಲಕ್ಷದಷ್ಟು ಮತದಾರರ ಮಾಹಿತಿ ಇದೆ ಎನ್ನಲಾಗಿದ್ದು ಇದು ನಿರ್ದಿಷ್ಟ ಕ್ಷೇತ್ರದ ಮತದಾರರ ಪಟ್ಟಿಯೇ ಅಥವಾ ಬೇರೆ ಕ್ಷೇತ್ರದ್ದೂ ಇದೆಯಾ ಎನ್ನುವ ತನಿಖೆ ಮುಂದುವರೆದಿದೆ.

    ಸೋತರೆ ಹಣ ವಾಪಸ್!

    ಆಭ್ಯರ್ಧಿಗಳಿಗೆ ಈ ವೆಬ್ ಸೈಟ್ ತೆಗೆದ ತಕ್ಷಣ ಸ್ವಾಗತ ಎಂಬಾ ಸಂದೇಶ ಬರುತ್ತಿತ್ತು. 25 ಸಾವಿರ ರೂ. ಜತೆಗೆ 500 ಸೇವಾ ಶುಲ್ಕ ನೀಡಿದರೆ ಕ್ಷೇತ್ರದ ಮತದಾರರ ಮಾಹಿತಿ ನೀಡುತ್ತಿತ್ತು. ಮಾಹಿತಿ ಪಡೆದು ನಿಮ್ಮ ಚುನಾವಣೆಯಲ್ಲಿ ಜಯಶಾಲಿಯಾಗಿ ಎಂದು ಹೇಳುತ್ತಿತ್ತು. ಒಂದು ವೇಳೆ ಸೋತರೆ ಹಣ ವಾಪಸ್ ಎಂಬಾ ಪ್ರಣಾಳಿಕೆ ಮಾಡಿಕೊಂಡಿತ್ತು. ಈ ಬಗ್ಗೆ ಪಕ್ಷೇತರ ಅಭ್ಯರ್ಥಿಯೊಬ್ಬರು ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts