ಹಂಗಾಮಿ ಸ್ಪೀಕರ್​ ಆಗಿ ಕಾಂಗ್ರೆಸ್​ನ ಹಿರಿಯ ನಾಯಕ ಆರ್.ವಿ ದೇಶಪಾಂಡೆ ನೇಮಕ

RV Deshpande
Published on

ಬೆಂಗಳೂರು: ಹಂಗಾಮಿ ಸ್ಪೀಕರ್ ಆಗಿ ಕಾಂಗ್ರೆಸ್​ನ ಹಿರಿಯ ನಾಯಕ ಆರ್.ವಿ ದೇಶಪಾಂಡೆ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಕರ್ನಾಟಕದ ಮಾನ್ಯ ರಾಜ್ಯಪಾಲರು ಭಾರತದ ಸಂವಿಧಾನದ ಅನುಚ್ಛೇದ 180(1) ಹಾಗೂ 188ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದನದಿಂದ ಸಭಾಧ್ಯಕ್ಷರು ಆಯ್ಕೆಯಾಗುವವರೆಗೆ ವಿಧಾನ ಸಭಾಧ್ಯಕ್ಷರ ಕರ್ತವ್ಯವನ್ನು ನಿರ್ವಹಿಸಲು ವಿಧಾನಸಭೆಯ ಸದಸ್ಯರಾದ ಆರ್.ವಿ. ದೇಶಪಾಂಡೆ ಅವರನ್ನು ಅವರನ್ನು ಮೇ 22ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.

RV Deshpande Appointed as Acting Speaker

ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ಮತ್ತು ಸ್ಪೀಕರ್​ ಆಯ್ಕೆ ಸಂಬಂಧ ಸೋಮವಾರದಿಂದ ಮೂರು ದಿನಗಳ ಕಾಲ ವಿಧಾನಸಭಾ ಅಧಿವೇಶವನ್ನು ಕರೆಯಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನವಾಗಿದೆ.

ಸ್ಪೀಕರ್​ ಆಯ್ಕೆಯಾಗುವವರೆಗೆ ಶಾಸಕರ ಪ್ರಮಾಣವಚನ ಬೋಧನೆಯು ಹಂಗಾಮಿ ಸ್ಪೀಕರ್​ ನೇತೃತ್ವದಲ್ಲಿ ನಡೆಯಲಿದೆ. ಇದೇ ಅಧಿವೇಶನದಲ್ಲಿ ನೂತನ ಸ್ಪೀಕರ್​ ಆಯ್ಕೆ ಪ್ರಕ್ರಿಯೆಯು ಸಹ ನಡೆಯಲಿದೆ. ಮೇ 23ಕ್ಕೆ ಹಿಂದಿನ ವಿಧಾನಸಭೆ ಅಂತಿಮಗೊಳ್ಳಲಿದ್ದು, ಅಷ್ಟರೊಳಗೆ ನೂತನ ಶಾಸಕರ ಪ್ರಮಾಣವಚನ ಪೂರ್ಣಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net