More

    ರಾಜ್ಯದ ಗತವೈಭವ ಮರುಕಳಿಸುವಂತೆ ಕೆಲಸ ಮಾಡುತ್ತೇವೆ: ಎಂ.ಬಿ.ಪಾಟೀಲ್

    ಬೆಂಗಳೂರು: ರಾಜ್ಯದ ಜನತೆ ಅಭೂತಪೂರ್ವ ಬಹುಮತ ನೀಡಿ ಆರ್ಶಿವಾದ ಮಾಡುವ ಮೂಲಕ ಅತಂತ್ರ ಪರಿಸ್ಥಿತಿ ಬರಬಹುದು ಎಂಬ ವಿಚಾರವನ್ನು ಸುಳ್ಳಾಗಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈಗ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ರಾಜ್ಯವನ್ನು ಸುಸ್ಥಿರವಾಗಿ ಅಭೀವೃದ್ಧಿ ಮಾಡಲು ನಮ್ಮ ಪಕ್ಷ ಕೆಲಸ ಮಾಡಲಿದೆ. ಕಳೆದ 4 ವರ್ಷಗಳಲ್ಲಿ ರಾಜ್ಯದ ಆಡಳಿತ ಹದಗೆಟ್ಟಿದೆ. ಮುಂದಿನ 5 ವರ್ಷದಲ್ಲಿ ರಾಜ್ಯದ ಅಭಿವೃದ್ಧಿ ಸಲುವಾಗಿ ಹಲವು ಯೋಜನೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ‌ ಮಾಡಲಾಗುತ್ತದೆ. ಈ ಹಿಂದೆ ನಮ್ಮ ನಾಯಕರು ಮಾಡಿರುವ ಒಳ್ಳೆಯ ಕೆಲಸಗಳನ್ನು ಮತ್ತೆ ತರುವ ಮೂಲಕ ರಾಜ್ಯದ ಗತವೈಭವ ಮರುಳಿಸಬೇಕಿದೆ ಎಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಎಂ.ಬಿ.ಪಾಟೀಲ್ ಹೇಳಿದರು.

    ಇದನ್ನೂ ಓದಿ: ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ… ನನಗೆ ಯಾವುದೇ ಅಸಮಾಧಾನ ಇಲ್ಲ: ಡಾ.ಜಿ.ಪರಮೇಶ್ವರ್

    ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ!

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 24 ಜನ ಶಾಸಕರು ಮಾತ್ರ ಸಚಿವರಾಗಲು ಸಾಧ್ಯ. ಸದ್ಯ 10 ಜನ ಪ್ರಮಾಣ ವಚನ ಸ್ವೀಕರಿಸಲಿದ್ದೇವೆ. ಈಗಾಗಲೇ ಗೃಹ ಸಚಿವನಾಗಿ, ಜಲಸಂಪನ್ಮೂಲ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಈಗ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಮೂಲಕ ಜನರಿಗೆ ಒಳ್ಳೆಯದಾಗುವಂತೆ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹಣಕಾಸು ವ್ಯವಸ್ಥೆ ಸರಿ ಮಾಡಬೇಕಿದೆ!

    ಮುಸ್ಲಿಂ, ಎಸ್​ಟಿ ಜನಾಂಗ, ಲಿಂಗಾಯತರು ಸೇರಿದಂತೆ ಪ್ರತಿಯೊಬ್ಬರೂ ನಮಗೆ ಆಶಿರ್ವಾದ ಮಾಡಿದ್ದಾರೆ. ಕ್ಯಾಬಿನೆಟ್ ಸಭೆ ಆಗುತ್ತಿದ್ದಂತೆ ನಮ್ಮ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ತೀರ್ಮಾನ ಆಗುತ್ತದೆ. ಅದರ ಬಗ್ಗೆ ನಾನು ಈಗ ಮಾತನಾಡಲು ಸಾಧ್ಯವಿಲ್ಲ. 5 ವರ್ಷ ರಾಜ್ಯದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ‌ ಮಾಡಲಾಗುತ್ತದೆ. ರಾಜ್ಯದ ಹಣಕಾಸು ವ್ಯವಸ್ಥೆ ತೀರಾ ಹದಗೆಟ್ಟಿದೆ ಎಂದು ಹೇಳಿದರು.

    ಇದನ್ನೂ ಓದಿ: ಇನ್ನೂ ತೀರ್ಮಾನವಾಗದ ಸಚಿವ ಸಂಪುಟ: ಬೇಸರಗೊಂಡು ಸಿದ್ದು ಬಳಿ ಸುಳಿಯದ ಆಪ್ತರು!

    ಪಕ್ಷದ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುವುದರಿಂದ ಯಾವುದೇ ಗೊಂದಲ ಇಲ್ಲ. ಹಿರಿತನ ನೋಡಿ ಸ್ಥಾನಮಾನ ಕೊಡಲಾಗುತ್ತದೆ. ನಮ್ಮ‌ಇಚ್ಛೆಯ ಖಾತೆಯನ್ನು ತಿಳಿಸುತ್ತೇವೆ, ಕೊಡುವುದು ಸಿಎಂ ಅವರ ಪರಮಾಧಿಕಾರ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts