More

    ಇನ್ನೂ ತೀರ್ಮಾನವಾಗದ ಸಚಿವ ಸಂಪುಟ: ಬೇಸರಗೊಂಡು ಸಿದ್ದು ಬಳಿ ಸುಳಿಯದ ಆಪ್ತರು!

    ಬೆಂಗಳೂರು: ಸಚಿವ ಸ್ಥಾನದ ಬಗ್ಗೆ ಈವರೆಗೂ ಯಾವುದೇ ತೀರ್ಮಾನ ಮಾಡದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಳಿ ಅವರ ಆಪ್ತರು ಯಾರು ಸುಳಿದಿಲ್ಲ. ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. 8 ಮಂದಿಯನ್ನು ಬಿಟ್ಟು ಸಚಿವರು ಯಾರು ಎಂಬುದನ್ನು ಇನ್ನು ತೀರ್ಮಾನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಿದ್ದು ಮೇಲೆ ಅಸಮಾಧಾನಗೊಂಡಿರುವಂತೆ ಕಾಣುತ್ತದೆ.

    ಸಿದ್ದರಾಮಯ್ಯ ಮನೆ ಬಳಿ ಆಪ್ತ ಶಾಸಕ ಮಹಾದೇವಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಭೈರತಿ ಸುರೇಶ್, ಬಸವರಾಜ್ ರಾಯರೆಡ್ಡಿ, ಶಿವರಾಜ್ ತಂಗಡಗಿ, ತುಕರಾಮ್, ಸಂತೋಷ್ ಲಾಡ್, ರಾಘವೇಂದ್ರ ಹಿಟ್ನಾಳ್, ರಿಜ್ವಾನ್ ಅರ್ಷದ್, ನಾರಾಯಣಸ್ವಾಮಿ, ಅಶೋಕ್ ಪಟ್ಟಣ, ಯುಟಿ ಖಾದರ್, ಪ್ರಕಾಶ್ ರಾಥೋಡ್ ಹಾಗೂ ಕೆ.ಎನ್. ರಾಜಣ್ಣ ಸೇರಿ ಹಲವರು ಸಿದ್ದರಾಮಯ್ಯರಿಂದ ದೂರ ಉಳಿದಿದ್ದಾರೆ.

    ಇದನ್ನೂ ಓದಿ: ಮಾನವರ ನಡುವೆ ಮೊದಲ ಚುಂಬನ ನಡೆದಿದ್ದು ಯಾವಾಗ? ಬಹಿರಂಗವಾಯ್ತು ಅಚ್ಚರಿಯ ಉತ್ತರ!

    ಪದಗ್ರಹಣ ಕಾರ್ಯಕ್ರಮಕ್ಕೆ ಬರೋದು ಡೌಟು

    ನಿನ್ನೆ, ಮೊನ್ನೆಯೆಲ್ಲ ಸಚಿವ ಸ್ಥಾನದ ಆಕಾಂಕ್ಷಿಗಳು ಸಿದ್ದರಾಮಯ್ಯ ಭೇಟಿಗೆ ಬಂದಿದ್ದರು. ಆದರೆ ಇಂದು ಇನ್ನೂ ಸಿದ್ದರಾಮಯ್ಯ ಮನೆ ಕಡೆ ಮುಖ ಮಾಡಿಲ್ಲ. ಮೇಲಿನ ಎಲ್ಲ ಶಾಸಕರು ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ತಮಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಇನ್ನೂ ನಿರ್ಧಾರ ಮಾಡದಿರುವ ಕಾರಣ ಬೇಸರಗೊಂಡು ತಮ್ಮ ನಾಯಕನ ಬಳಿ ಸುಳಿದಿಲ್ಲ ಎಂದು ಹೇಳಲಾಗುತ್ತಿದೆ. ಇಂದು ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಸಿಎಂ, ಡಿಸಿಎಂ ಹಾಗೂ 8 ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಇವರುಗಳೆಲ್ಲ ಬರುವುದು ಅನುಮಾನ ಎನ್ನಲಾಗಿದೆ.

    ನಿನ್ನೆ ಮಧ್ಯಾಹ್ನದಿಂದ ಸಚಿವರ ಆಯ್ಕೆಗೆ ಭಾರೀ ಕಸರತ್ತು ನಡೆಯಿತು. ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ನಿವಾಸದಲ್ಲಿ ತಡರಾತ್ರಿ ಎರಡು ಗಂಟೆಯವರೆಗೆ ಹೈವೋಲ್ಟೇಜ್​ ಸಭೆ ನಡೆಯಿತು. ಜಾತಿವಾರು, ಹಿರಿತನದ ಆಧಾರ ಮೇಲೆ ಸಚಿವರನ್ನು ಆಯ್ಕೆ ಮಾಡಲಾಗಿದೆ. ಒಂದೇ ಬಾರಿಗೆ 28 ಸಚಿವರ ಆಯ್ಕೆಗೆ ಪ್ರಯತ್ನ ನಡೆಯಿತಾದರೂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಒಮ್ಮತ ಮೂಡಲಿಲ್ಲ. ಇದರಿಂದ ಸಭೆ ಮೇಲೆ ಸಭೆ ನಡೆಸಬೇಕಾಯಿತು. ಆದರೂ ಸಹಮತ ಮೂಡದ ಹಿನ್ನೆಲೆಯಲ್ಲಿ ಕೈ ಹೈಕಮಾಂಡ್ ಹೈರಾಣಾಯಿತು.

    ಅಂತಿಮವಾಗಿ ಎಂಟು ಸಚಿವರಿಗೆ ಮಾತ್ರ ಉಭಯ ನಾಯಕರು ಒಪ್ಪಿಗೆ ನೀಡಿದರು. ಇಂದು ಕೇವಲ ಎಂಟು ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಚಿವ ಸಂಪುಟ ವಿಚಾರವಾಗಿ ಆರಂಭದಲ್ಲೆ ಸಿದ್ದು- ಡಿಕೆಶಿ ನಡುವೆ ಜಟಾಪಟಿ ಉಂಟಾಗಿದೆ. ಎರಡು ಪವರ್ ಸೆಂಟರ್ ನಡುವೆ ಶೀತಲ ಸಮರ ಏರ್ಪಟ್ಟಿದ್ದು, ಮುಂದೆ ಇದು ಸರ್ಕಾರ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

    ಈಗ ಆಯ್ಕೆಯಾಗಿರುವ ಎಂಟು ಸಚಿವರು ಯಾರು?

    * ಎಂ. ಬಿ. ಪಾಟೀಲ್ (ಲಿಂಗಾಯತ)
    * ಡಾ. ಜಿ. ಪರಮೇಶ್ವರ್ (ದಲಿತ ಬಲ)
    * ಪ್ರಿಯಾಂಕ ಖರ್ಗೆ (ದಲಿತ ಬಲ)
    * ಕೆ.ಎಚ್. ಮುನಿಯಪ್ಪ (ದಲಿತ ಎಡ)
    * ಕೆ. ಜೆ. ಜಾರ್ಜ್ (ಕ್ರಿಶ್ಚಿಯನ್)
    * ಸತೀಶ್ ಜಾರಕಿಹೊಳಿ (ಪರಿಶಿಷ್ಠ ಪಂಗಡ) (ವಾಲ್ಮಿಕಿ)
    * ಜಮೀರ್ ಅಹ್ಮದ್ ಖಾನ್ (ಮುಸ್ಲಿಂ)
    * ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ)

    ಇದನ್ನೂ ಓದಿ: ವಿಜಯಾನಂದ ಟ್ರಾವೆಲ್ಸ್​ಗೆ ಟಾಟಾ ಬಸ್ ಹಸ್ತಾಂತರ: ಶಿವಾ ಸಂಕೇಶ್ವರ ಅವರಿಗೆ ಕೀ ನೀಡಿದ ಕೆ.ಗುರುಪ್ರಸಾದ್

    ಮೊದಲ ಸಚಿವ ಸಂಪುಟಕ್ಕೆ ಕೇವಲ ಎಂಟು ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಒಟ್ಟು ಆರು ಸಮುದಾಯಕ್ಕೆ ಅವಕಾಶ ನೀಡಲಾಗಿದೆ. ಐದು ಸಮುದಾಯಕ್ಕೆ ತಲಾ ಒಂದೊಂದು ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ. ದಲಿತ ಸಮುದಾಯಕ್ಕೆ ಮೂರು ಸ್ಥಾನ, ಅದರಲ್ಲಿ ದಲಿತ ಬಲ ಸಮುದಾಯಕ್ಕೆ ಎರಡು ಹಾಗೂ ದಲಿತ ಎಡ ಸಮುದಾಯಕ್ಕೆ ಒಂದು ಸಚಿವ ಸ್ಥಾನ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಪದಗ್ರಹಣ ಸಮಾರಂಭಕ್ಕೆ ರೈಲಿನಲ್ಲಿ ಆಗಮಿಸಿದ ಶಾಸಕ: ಸರಳತೆ ಮೆರೆದ ದರ್ಶನ್ ಪುಟ್ಟಣ್ಣಯ್ಯ

    ಸಿದ್ದು, ಡಿಕೆಶಿ ಜತೆ 8 ಸಚಿವರಿಂದ ಪ್ರಮಾಣ ವಚನ: ಮೊದಲ ಸಚಿವ ಸಂಪುಟದಲ್ಲಿ 6 ಸಮುದಾಯಕ್ಕೆ ಅವಕಾಶ

    ರಾರಾಜಿಸಿದ “ಸಿದ್ದರಾಮಯ್ಯ ಎಂಬ ನಾನು” ಪೋಸ್ಟರ್; ಈ ಸಿನಿಮಾ ನಿಜಕ್ಕೂ ಬಿಡುಗಡೆ ಆಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts