More

    ವಿಜಯಾನಂದ ಟ್ರಾವೆಲ್ಸ್​ಗೆ ಟಾಟಾ ಬಸ್ ಹಸ್ತಾಂತರ: ಶಿವಾ ಸಂಕೇಶ್ವರ ಅವರಿಗೆ ಕೀ ನೀಡಿದ ಕೆ.ಗುರುಪ್ರಸಾದ್

    ಹುಬ್ಬಳ್ಳಿ: ಟಾಟಾ ಮೋಟಾರ್ಸ್ ಕಂಪನಿಯ 50 ಟಾಟಾ ಮ್ಯಾಗ್ನಾ ಸ್ಲೀಪರ್ ಬಸ್​ಗಳನ್ನು (ಎಲ್​ಪಿಒ 1822) ಪ್ರಯಾಣಿಕ ಸಾರಿಗೆಯಲ್ಲಿ ನಂಬಿಕೆ ಮತ್ತು ವಿಶ್ವಾಸ ಗಳಿಸಿರುವ ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್ ಖರೀದಿಸಿದೆ.

    ಹುಬ್ಬಳ್ಳಿಯಲ್ಲಿ ಶುಕ್ರವಾರ ಖಾಸಗಿ ಹೊಟೇಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕರಾದ ಶಿವಾ ಸಂಕೇಶ್ವರ ಅವರಿಗೆ ಟಾಟಾ ಮೋಟಾರ್ಸ್​ನ ಝೋನಲ್ ಮ್ಯಾನೇಜರ್ ಕೆ. ಗುರುಪ್ರಸಾದ್ ಸ್ಲೀಪರ್ ಬಸ್​ವೊಂದರ ಕೀ ಹಸ್ತಾಂತರಿಸಿದರು.

    50 ಬಸ್ ಖರೀದಿ: ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್ ಎಂಡಿ ಶಿವಾ ಸಂಕೇಶ್ವರ ಅವರು ಮಾತನಾಡಿ, ಟಾಟಾ ಸಮೂಹವು ದೇಶದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಉದ್ಯಮ ಜಗತ್ತಿನಲ್ಲಿ ರತನ್ ಟಾಟಾ ಅವರು ಖ್ಯಾತನಾಮರು. ಟಾಟಾ ಮೋಟಾರ್ಸ್ ಕಂಪನಿಯವರು ನಮ್ಮ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಸುಸಜ್ಜಿತ ಸ್ಲೀಪರ್ ಬಸ್​ಗಳನ್ನು ರೂಪಿಸಿದ್ದಾರೆ. ನಾವು ಈ ಸಂದರ್ಭದಲ್ಲಿ 50 ಬಸ್​ಗಳನ್ನು ಆರ್ಡರ್ ಮಾಡಿದ್ದು, ಇಂದು ಒಂದು ಬಸ್ ಹಸ್ತಾಂತರ ಮಾಡಿದ್ದಾರೆ ಎಂದು ಹೇಳಿದರು. ಹೊಸ ಮಾರ್ಗಗಳಲ್ಲಿ ಈ ಪ್ರಯಾಣಿಕ ಬಸ್​ಗಳನ್ನು ಓಡಿಸಲು ಉದ್ದೇಶಿಸಿದ್ದೇವೆ. ಟಾಟಾ ಜತೆ ನಮ್ಮ ಪ್ರಯಾಣವನ್ನು ಮುಂದುವರಿಸಲು ಇಷ್ಟ ಪಡುತ್ತೇವೆ. ಅವರು ಉತ್ತಮ ತಂಡವನ್ನು ಹೊಂದಿದ್ದು, ಅವರೊಂದಿಗೆ ಕೆಲಸ ಮಾಡುವುದು ಖುಷಿ ಕೊಟ್ಟಿದೆ ಎಂದರು.

    ವಿಜಯಾನಂದ ಟ್ರಾವೆಲ್ಸ್ ಪ್ರೖೆವೇಟ್ ಲಿಮಿಟೆಡ್​ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭು ಸಾಲಗೇರಿ ಮಾತನಾಡಿ, ವಿಜಯಾನಂದ ಟ್ರಾವೆಲ್ಸ್ ಕಳೆದ 25 ವರ್ಷಗಳಿಂದ ಪ್ರಯಾಣಿಕರ ನಂಬಿಕೆ ಹಾಗೂ ವಿಶ್ವಾಸ ಗಳಿಸಿದೆ. 6 ರಾಜ್ಯಗಳಲ್ಲಿ ವಿಜಯಾನಂದ ಬಸ್ ಸಂಚಾರವಿದ್ದು, ಇನ್ನು ದಕ್ಷಿಣ ಭಾರತದ ಬೇರೆ ರಾಜ್ಯಗಳು ಹಾಗೂ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲು ಉತ್ಸುಕರಾಗಿದ್ದೇವೆ. ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವಾ ಸಂಕೇಶ್ವರ ನೇತೃತ್ವದಲ್ಲಿ ಹೆಚ್ಚಿನ ಉತ್ಸಾಹದಿಂದ ಮುನ್ನುಗ್ಗುತ್ತಿದ್ದೇವೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

    ಟಾಟಾ ಮೋಟಾರ್ಸ್​ನ ಝೋನಲ್ ಮ್ಯಾನೇಜರ್ ಕೆ. ಗುರುಪ್ರಸಾದ್ ಮಾತನಾಡಿ, ಪ್ರತಿಷ್ಠಿತ ವಿಜಯಾನಂದ ಟ್ರಾವೆಲ್ಸ್ ಜತೆ ವ್ಯವಹಾರಿಕ ಸಂಬಂಧ ಹೊಂದುತ್ತಿರುವ ಈ ಸಂದರ್ಭವು ನಮಗೆ ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಕ್ಷಣವಾಗಿದೆ. ವಿಆರ್​ಎಲ್​ನಂಥ ದೊಡ್ಡ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುವ ಒಂದು ಉತ್ತಮ ಅವಕಾಶವಾಗಿದೆ. ವಿಜಯಾನಂದ ಟ್ರಾವೆಲ್ಸ್ ಮುನ್ನಡೆಸುತ್ತಿರುವ ಯುವ ಉದ್ಯಮಿ ಶಿವಾ ಸಂಕೇಶ್ವರ ಈ ಉದ್ಯಮದಲ್ಲಿ ಸಾಕಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದರು.

    ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಹೊಸ ಬಸ್ ವೀಕ್ಷಣೆ ಮಾಡಿದರು. ಟಾಟಾ ಮೋಟಾರ್ಸ್ ಮಾರಾಟ ವಿಭಾಗದ ತನ್ಮಯ ಚಕ್ರವರ್ತಿ, ಕರ್ನಾಟಕ ಸರ್ವಿಸ್ ಹೆಡ್ ವೆಂಕಟೇಶ, ಶ್ರೀಧರ ಕಟ್ಟಿ, ಶ್ರೀರಾಮ ಬಿದಡಿ, ಮಾಣಿಕಬಾಗ್ ಆಟೋಮೊಬೈಲ್ ಪ್ರೖೆವೇಟ್ ಲಿಮಿಟೆಡ್​ನ ನಿರ್ದೇಶಕರಾದ ಸಾರಂಗ ಷಾ, ಸಂಜೋತ ಷಾ, ಮಿಲಿಂದ ಷಾ, ಪ್ರಧಾನ ವ್ಯವಸ್ಥಾಪಕ ಪ್ರಭು ದಾನಪ್ಪಗೌಡರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಅನ್ವರ್ ಪಾಷ, ಟಾಟಾ ಮೋಟಾರ್ಸ್ ಬಾಡಿ ಸಲ್ಯೂಷನ್ಸ್ ಲಿಮಿಟೆಡ್​ನ ಆನಂದ ಜಗನ್ನಾಥನ್, ಮಿಲಿಂದ ಗಿರಗಾಂವಕರ್, ಮನೀಷ ಎಂ., ಅರವಿಂದ, ಸಂಪತ್, ಇತರರು ಇದ್ದರು.

    2000 ರೂ. ನೋಟು ಹಿಂಪಡೆತ: ಒಮ್ಮೆಗೆ 20 ಸಾವಿರ ರೂ. ಮಾತ್ರ ಬದಲಿಸಿಕೊಳ್ಳಲು ಅವಕಾಶ

    ಬಂಕ್​ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಧಗ್ಗನೆ ಹೊತ್ತಿಕೊಂಡ ಬೆಂಕಿ: ಪುತ್ರಿ ಸಾವು, ತಾಯಿ ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts