2000 ರೂ. ನೋಟು ಹಿಂಪಡೆತ: ಒಮ್ಮೆಗೆ 20 ಸಾವಿರ ರೂ. ಮಾತ್ರ ಬದಲಿಸಿಕೊಳ್ಳಲು ಅವಕಾಶ

Pink note
Published on

ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್​ ಹಿಂಪಡೆದಿದೆ. ಮಾತ್ರವಲ್ಲ, ಈಗಾಗಲೇ ಅದನ್ನು ನೀಡುವುದನ್ನು ಬ್ಯಾಂಕ್​ಗಳಲ್ಲಿ ನಿಲ್ಲಿಸಲಾಗಿದ್ದು, ಈಗ ಹಿಂಪಡೆತದ ಬಳಿಕ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶವನ್ನೂ ಕಲ್ಪಿಸಲಾಗಿದೆ.

ಎರಡು ಸಾವಿರ ರೂಪಾಯಿಯ ನೋಟುಗಳನ್ನು ಬದಲಿಸಿಕೊಡುವ ಪ್ರಕ್ರಿಯೆ ಇದೇ ಮೇ 23ರಿಂದ ಎಲ್ಲ ಬ್ಯಾಂಕ್​ಗಳಲ್ಲಿ ಮತ್ತು ಆರ್​​ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲೂ ಆರಂಭವಾಗಲಿದೆ. ನೋಟುಗಳನ್ನು ಬದಲಿಸಿಕೊಳ್ಳಲು 2023ರ ಸೆ.30ರ ವರೆಗೆ ಅವಕಾಶವಿದೆ.

ಎರಡು ಸಾವಿರ ರೂ. ನೋಟುಗಳನ್ನು ಬದಲಿಸಿಕೊಳ್ಳಲು ಒಂದು ಮಹತ್ವದ ಷರತ್ತು ವಿಧಿಸಲಾಗಿದೆ. ಸಾರ್ವಜನಿಕರು ಒಮ್ಮೆಗೆ ಹತ್ತು ನೋಟುಗಳನ್ನಷ್ಟೇ ಬದಲಿಸಿಕೊಳ್ಳಬಹುದು. ಅಂದರೆ ಒಂದು ಸಲಕ್ಕೆ 20 ಸಾವಿರ ರೂಪಾಯಿಯಷ್ಟು ಮಾತ್ರ 2 ಸಾವಿರ ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಬ್ಯಾಂಕ್​ನಲ್ಲಿ ಕಾರ್ಯದೊತ್ತಡ ಉಂಟಾಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net