More

    ಮೊದಲ ಮತದಾನದ ಸಂಭ್ರಮ: ಸಕ್ಕರೆನಾಡಲ್ಲಿ ಹಕ್ಕು ಚಲಾಯಿಸಿದ ಯುವ ಮತದಾರರು

    ಮಂಡ್ಯ: ಸಂಸತ್ ಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದೆ. ಮಂಡ್ಯ ಲೋಕಸಭಾ ಕ್ಷೇತ್ರದ 14 ಅಭ್ಯರ್ಥಿಗಳ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಾಗಿದೆ. ಈ ಪೈಕಿ ಹೊಸ ಮತದಾರರೂ ಕೂಡ ಹುಮ್ಮಸ್ಸಿನಿಂದ ಸಂವಿಧಾನ ಬದ್ಧವಾಗಿ ತಮ್ಮ ಹಕ್ಕು ಚಲಾಯಿಸಿ ಬದ್ಧತೆ ಮೆರೆದಿದ್ದಾರೆ.
    ಮತದಾನದ ಬಗ್ಗೆ ಅಸಡ್ಡೆ ತೋರದೆ ಹಕ್ಕು ಚಲಾಯಿಸಿರುವ ಯುವಕ, ಯುವತಿಯರು ಪ್ರಜಾಪ್ರಭುತ್ವ ವ್ಯವಸ್ಥೆ ಕಟ್ಟುವ ನಿಟ್ಟಿನಲ್ಲಿ ತಾನು ಕೂಡ ತನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ. ಮತದಾನದ ಪ್ರಮಾಣ ಹೆಚ್ಚಿಸಲು ಅದರಲ್ಲೂ ಯುವ ಮತದಾರರನ್ನು ಮತದಾನದತ್ತ ಸೆಳೆಯಲು ಜಿಲ್ಲಾ ಸ್ವೀಪ್ ಸಮಿತಿಯು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ.
    ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 5,645 ಮತದಾರರಿದ್ದಾರೆ. ಕೆ.ಆರ್.ನಗರ ಕ್ಷೇತ್ರದಲ್ಲಿ 5,539, ಮದ್ದೂರಿನಲ್ಲಿ 5,522, ಮಂಡ್ಯದಲ್ಲಿ 5,362, ಶ್ರೀರಂಗಪಟ್ಟಣದಲ್ಲಿ 5,336, ನಾಗಮಂಗಲದಲ್ಲಿ 5,119, ಕೆ.ಆರ್.ಪೇಟೆಯಲ್ಲಿ 4,932 ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 4,885 ಸೇರಿ ಒಟ್ಟು 42,340 ಯುವ ಮತದಾರರು ತಮ್ಮ ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಇನ್ನು ಹೊಸ ಮತದಾರರು ತಮ್ಮ ಮೊದಲ ಮತದಾನದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

     

    ಮೊದಲ ಮತದಾನದ ಸಂಭ್ರಮ: ಸಕ್ಕರೆನಾಡಲ್ಲಿ ಹಕ್ಕು ಚಲಾಯಿಸಿದ ಯುವ ಮತದಾರರು

    ಕುತೂಹಲದಿಂದ ಕಾಯುತ್ತಿದ್ದೆ
    ಹೊಸದಾಗಿ ಮತದಾನ ಮಾಡುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ. ಈ ದಿನಕ್ಕಾಗಿ ತುಂಬಾ ಕುತೂಹಲದಿಂದ ಕಾಯುತ್ತಿದೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ದೇಶದ ಭದ್ರ ಬುನಾದಿಗೆ ಅಡಿಪಾಯ ಹಾಕುಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕ ಹಾಗೂ ಜನಪರ ಕಾಳಜಿಯಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.
    ಸೃಜನ್
    ಮದ್ದೂರು

    ಮೊದಲ ಮತದಾನದ ಸಂಭ್ರಮ: ಸಕ್ಕರೆನಾಡಲ್ಲಿ ಹಕ್ಕು ಚಲಾಯಿಸಿದ ಯುವ ಮತದಾರರು

    ಅತ್ಯಂತ ಸಂತಸದ ಕ್ಷಣ
    ನನಗಂತೂ ತುಂಬಾ ಖುಷಿ ಆಗಿದೆ. ಭಾರತದ ಪ್ರಜೆಯಾಗಿ ಮೊದಲ ಮತದಾನ ಮಾಡಿದೆ. ಉತ್ತಮ ಸಮಾಜ, ದೇಶ ನಿರ್ಮಾಣಕ್ಕೆ ಯುವ ಶಕ್ತಿ ಪಾತ್ರ ಬಲುದೊಡ್ಡದು ಎನ್ನುವುದು ನಿಜವಾಗಿ ತಿಳಿಯಿತು. ಯಾವುದೇ ಆಮಿಷ, ಭಯ ಇಲ್ಲದೆ ನಿರಾತಂಕವಾಗಿ ಮತ ಚಲಾಯಿಸಿದೆ. ಯುವ ಸಮೂಹ ಹೆಚ್ಚೆಚ್ಚು ಉತ್ಸಾಹಿಗಳಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಉತ್ತಮ ಸಮಾಜಕ್ಕೆ ಉತ್ತಮರ ಆಯ್ಕೆ ಅವಶ್ಯ. ಇದು ಯುವ ಮತದಾರರಿಂದ ಖಂಡಿತ ಸಾಧ್ಯ. ಇದು ಜೀವನದ ಅತ್ಯಂತ ಸಂತಸದ ಕ್ಷಣ.
    ಕೆ.ಮೋನಿಕಾ
    ಕಾಳೇನಹಳ್ಳಿ ಫಾರಂ ಹೌಸ್

    ಮೊದಲ ಮತದಾನದ ಸಂಭ್ರಮ: ಸಕ್ಕರೆನಾಡಲ್ಲಿ ಹಕ್ಕು ಚಲಾಯಿಸಿದ ಯುವ ಮತದಾರರು

    ಸಾಂವಿಧಾನಿಕ ಹಕ್ಕು
    ನನಗೆ ಮೊದಲ ಬಾರಿಗೆ ಸಾಂವಿಧಾನಿಕ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಿದ ಅನುಭವ ಖುಷಿ ತಂದಿದೆ. ಸುಭದ್ರ ದೇಶದ ಅಡಿಪಾಯಕ್ಕೆ ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿ. ನನ್ನ ಮತವನ್ನು ಯಾವುದೇ ಆಮಿಷಗಳಿಗೆ ಒಳಗಾಗದೇ ಉತ್ತಮ ಎನಿಸಿದ ಅಭ್ಯರ್ಥಿಗೆ ಸ್ವತಂತ್ರವಾಗಿ ಹಕ್ಕು ಚಲಾಯಿಸಿದ್ದೇನೆ.
    ಎಚ್.ವೈ.ಹರ್ಷಿತ್
    ಹಲಗೂರು

    ಮೊದಲ ಮತದಾನದ ಸಂಭ್ರಮ: ಸಕ್ಕರೆನಾಡಲ್ಲಿ ಹಕ್ಕು ಚಲಾಯಿಸಿದ ಯುವ ಮತದಾರರು

    ಜನಸೇವನ ಆಯ್ಕೆಗೆ ವೋಟ್
    ಜೀವನದಲ್ಲಿ ಮೊದಲ ಬಾರಿಗೆ ಜವಾಬ್ದಾರಿಯುತ ಪ್ರಜೆಯಾಗಿ ಸಂವಿಧಾನಿಕ ಹಕ್ಕು ಚಲಾಯಿಸಿದ ಹೆಮ್ಮೆ ನನ್ನಲಿದೆ. ಈ ಹಿಂದೆ ಮತದಾನದ ಬಗ್ಗೆ ಕೇಳಿ ತಿಳಿದುಕೊಳ್ಳತ್ತಿದ್ದ ನನಗೆ ಸ್ವತಃ ನಾನೇ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವ ಜನಸೇವಕನ ಆಯ್ಕೆಗೆ ಮತ ನೀಡಿದ ಖುಷಿ ತರಿಸಿದೆ. ಮತದಾನದ ಶಕ್ತಿಯ ತಿಳಿವಳಿಕೆ ತರಿಸಿದೆ. ನನ್ನಂತೆಯ ಇತರೆ ಯುವಜನರು ಸಹ ಮತ ಚಲಾಯಿಸಲು ಬಯಸುತ್ತೇನೆ.
    ಕೆ.ಎಸ್.ಪೂರ್ವಿಕಾ
    ಮಂಡ್ಯ ಕಲ್ಲಹಳ್ಳಿ

    ಮೊದಲ ಮತದಾನದ ಸಂಭ್ರಮ: ಸಕ್ಕರೆನಾಡಲ್ಲಿ ಹಕ್ಕು ಚಲಾಯಿಸಿದ ಯುವ ಮತದಾರರು

    ಅವಿಸ್ಮರಣೀಯ ದಿನ
    ಮೊದಲ ಬಾರಿಗೆ ಮತ ಚಲಾಯಿಸಲು ಅವಕಾಶ ಸಿಕ್ಕಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಅವಿಸ್ಮರಣೀಯ ದಿನ. ನನ್ನ ಹಕ್ಕು ಚಲಾಯಿಸುವ ಮೂಲಕ ನಮ್ಮನ್ನು ಆಳುವ ನಾಯಕರನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕಂತಾಗಿದೆ. ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಸಂವಿಧಾನದಲ್ಲಿ ನೀಡಲಾಗಿರುವ ಅವಕಾಶವನ್ನು ಪ್ರತಿಯೊಬ್ಬ ಮತದಾರರು ಸದ್ಬಳಕೆ ಮಾಡಿಕೊಳ್ಳಲಿ.
    ಎಸ್.ರುಚಿತಾ
    ಮಂಡ್ಯ ಅನ್ನಪೂರ್ಣೇಶ್ವರಿನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts