More

    ಬಂಕ್​ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಧಗ್ಗನೆ ಹೊತ್ತಿಕೊಂಡ ಬೆಂಕಿ: ಪುತ್ರಿ ಸಾವು, ತಾಯಿ ಪರಿಸ್ಥಿತಿ ಗಂಭೀರ

    ತುಮಕೂರು: ಪೆಟ್ರೋಲ್ ಬಂಕ್​ನಲ್ಲಿ ಕ್ಯಾನ್​ಗೆ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಧಗ್ಗನೆ ಬೆಂಕಿ ಹೊತ್ತಿಕೊಂಡು ಪುತ್ರಿ ಸಾವಿಗೀಡಾಗಿದ್ದರೆ, ತಾಯಿಯ ಪರಿಸ್ಥಿತಿ ಗಂಭೀರವಾಗಿದೆ. ತುಮಕೂರು ಜಿಲ್ಲೆಯಲ್ಲಿ ಇಂಥದ್ದೊಂದು ಅಗ್ನಿ ಆಕಸ್ಮಿಕ ಸಂಭವಿಸಿದೆ.

    ಶಿರಾ ತಾಲ್ಲೂಕಿನ ಜವನಹಳ್ಳಿ ನಿವಾಸಿಯಾದ ರತ್ಮಮ್ನ (46) ಗಂಭೀರವಾಗಿ ಗಾಯಗೊಂಡಿದ್ದು, ಈಕೆಯ ಪುತ್ರಿ ಭವ್ಯ (18) ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾಳೆ. ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಗ್ರಾಮ ಪೆಟ್ರೋಲ್‌ ಬಂಕ್​ನಲ್ಲಿ ಬುಧವಾರ ಈ ಘಟನೆ ನಡೆದಿತ್ತು.

    ಇದನ್ನೂ ಓದಿ: ಮೋದಿಯಿಂದ ಮತ್ತೊಂದು ನೋಟ್ ಬ್ಯಾನ್​; ಬಿಜೆಪಿಗೆ ಕ್ಲ್ಯಾರಿಟಿಯೇ ಇಲ್ಲ: ಸಿದ್ದರಾಮಯ್ಯ

    ದ್ವಿಚಕ್ರ ವಾಹನದಲ್ಲಿ ಕ್ಯಾನ್ ಇರಿಸಿಕೊಂಡು ಬಂಕ್​ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾಗ ಧಗ್ಗನೆ ಬೆಂಕಿ ಹೊತ್ತಿಕೊಂಡಿತ್ತು. ಆಗ ಭವ್ಯ ಮೈಗೆ ಬೆಂಕಿ ತಗುಲಿದ್ದು, ನಂತರ ತಾಯಿಗೂ ತಗುಲಿತ್ತು. ತಕ್ಷಣ ವಾಹನ ಬಿಟ್ಟು ಓಡುತ್ತಿದ್ದಂತೆ ಕ್ಯಾನ್​ ಬಿದ್ದು ಪೆಟ್ರೋಲ್ ಚೆಲ್ಲಿದ್ದರಿಂದ ಬೆಂಕಿ ದೊಡ್ಡ ಪ್ರಮಾಣದಲ್ಲಿ ಹೊತ್ತಿಕೊಂಡಿತ್ತು.

    ಇದನ್ನೂ ಓದಿ: 2000 ರೂ. ಮುಖಬೆಲೆಯ ನೋಟು ಹಿಂಪಡೆದ ಆರ್​ಬಿಐ: ಇದ್ದವರು ಏನು ಮಾಡಬೇಕು?

    ಬೆಂಕಿ ತಗುಲಿ ಒದ್ದಾಡುತ್ತಿದ್ದ ಭವ್ಯ ಮತ್ತು ಆಕೆಯ ತಾಯಿಯನ್ನು ಸ್ಥಳೀಯರ ಸಹಾಯದಿಂದ ಕೂಡಲೇ ಶಿರಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭವ್ಯ ಸಾವಿಗೀಡಾಗಿದ್ದು, ಗಾಯಾಳು ತಾಯಿ ರತ್ನಮ್ಮಗೆ ಚಿಕಿತ್ಸೆ ಮುಂದುವರಿದಿದೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಹೊತ್ತಿಕೊಂಡ ದೃಶ್ಯ ಬಂಕ್​ನಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    2000 ರೂ. ನೋಟು ಹಿಂಪಡೆತ: ಒಮ್ಮೆಗೆ 20 ಸಾವಿರ ರೂ. ಮಾತ್ರ ಬದಲಿಸಿಕೊಳ್ಳಲು ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts