More

    ನೀಟ್ ಪರೀಕ್ಷೆಯಲ್ಲಿಯೂ ಔಟ್ ಆಫ್ ಸಿಲಬಸ್ ಪ್ರಶ್ನೆ?

    ಬೆಂಗಳೂರು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಗಳಿಗೆ ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಯಶಸ್ವಿಯಾಗಿ ನಡೆದಿದೆ. ಆದರೆ, ಭೌತಶಾಸದಲ್ಲಿ 1 ಪ್ರಶ್ನೆಯನ್ನು ಪಠ್ಯಕ್ರಮ ಹೊರತಾದ ಪ್ರಶ್ನೆ ನೀಡಲಾಗಿದೆ ಎಂದು ಹಲವು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಾಜ್ಯದ 31 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 1.54 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.20ರವರೆಗೆ ಪರೀಕ್ಷೆ ನಡೆದಿದೆ.
    ಎಂದಿನಂತೆ ಕಟ್ಟುನಿಟ್ಟಿನ ವಸ ಸಂಹಿತೆ ಜಾರಿಯಲ್ಲಿದ್ದ ಕಾರಣ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ಸಾಕಷ್ಟು ಸರ್ಕಸ್ ಮಾಡಬೇಕಾಯಿತು.

    ಈಗಾಗಲೇ ನಿರ್ದೇಶನ ನೀಡಿದ್ದರೂ ಕೆಲವು ವಿದ್ಯಾರ್ಥಿಗಳು ತುಂಬು ತೋಳಿನ ಅಂಗಿಗಳನ್ನು ಧರಿಸಿದ್ದರು. ಹಾಗೆಯೇ, ಸಣ್ಣ ಪುಟ್ಟ ಓಲೆ, ಸರಗಳು, ಬ್ರಾಸ್‌ಲೇಟ್‌ಗಳನ್ನು ಭದ್ರತಾ ಸಿಬ್ಬಂದಿಯು ತೆಗೆಯುವಂತೆ ಸೂಚಿಸಿದರು. ಈ ವೇಳೆ ಅಸಹನೆಯಿಂದ ಮತ್ತು ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಅವುಗಳನ್ನು ತೆಗೆದಿಟ್ಟು ಕೇಂದ್ರದೊಳಗೆ ಪ್ರವೇಶ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts