More

  ಈ ವಿಷಯದಲ್ಲಿ ನಾನು ವಿರಾಟ್ ಕೊಹ್ಲಿ ಮತ್ತು ಧೋನಿ ಅವರನ್ನು ಫಾಲೋ ಮಾಡ್ತೀನಿ: ‘ಸಲಾರ್’​ ನಟಿ ಶ್ರೀಯಾ ರೆಡ್ಡಿ

  ಹೈದರಾಬಾದ್: ಟಾಲಿವುಡ್​ ರೆಬೆಲ್ ಸ್ಟಾರ್​ ಪ್ರಭಾಸ್​ ಮತ್ತು ಕನ್ನಡದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ‘ಸಲಾರ್’ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿ, ತದನಂತರ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಸ್ವೀಕರಿಸಿತು. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಟಿ ಶ್ರೀಯಾ ರೆಡ್ಡಿ ಇತ್ತೀಚಿನ ಸಂದರ್ಶನದಲ್ಲಿ ಭಾಗಿಯಾಗಿ, ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಆರ್​ಸಿಬಿಗೆ ಸಿಎಸ್​ಕೆ ಒಂದು ಟ್ರೋಫಿ ದಾನ ಮಾಡುವುದು ಸೂಕ್ತ; ಅಂಬಾಟಿ ರಾಯುಡು ಹೇಳಿಕೆಗೆ ಪಂಚಿಂಗ್ ಉತ್ತರ ಕೊಟ್ಟ ಮಾಜಿ ಆರ್‌ಸಿಬಿ ಆಟಗಾರ!

  ಚಿತ್ರೀಕರಣಕ್ಕೆ ಹೊರಡುವ ಮುನ್ನ ಕೆಲವು ಚಟುವಟಿಕೆಗಳನ್ನು ರೂಢಿಸಿಕೊಂಡಿರುವ ನಟಿ ಶ್ರೀಯಾ, “ದೈಹಿಕ ವ್ಯಾಯಾಮಗಳು ನಮ್ಮ ದೇಹಕ್ಕೆ ಬಹಳ ಮುಖ್ಯ. ಬೆಳಗ್ಗೆ 6 ಗಂಟೆಗೆ ನಾನು ಶೂಟಿಂಗ್ ಸೆಟ್​ನಲ್ಲಿ ಇರಬೇಕು ಎಂಬ ಮಾಹಿತಿ ಪಡೆಯುತ್ತಿದ್ದಂತೆ, ಆ ದಿನ 3 ಗಂಟೆಗೆ ನನ್ನ ಬೆಳಗ್ಗೆ ಶುರುವಾಗಿರುತ್ತದೆ. ಇದೊಂದು ರೀತಿ ನನಗೆ ಅಲರ್ಟ್​ ಟೋನ್​ ಆಗಿದೆ. ಇದನ್ನು ನಾನು ಶಿಸ್ತು ಎಂದು ಪರಿಗಣಿಸುತ್ತೀನಿ” ಎಂದಿದ್ದಾರೆ.

  “ಮನುಷ್ಯನಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ವಿಷಯದಲ್ಲಿ ನಾನು ವಿರಾಟ್ ಕೊಹ್ಲಿ ಮತ್ತು ಎಂ.ಎಸ್. ಧೋನಿ ಅವರನ್ನು ಫಾಲೋ ಮಾಡ್ತೀನಿ. ಯಾಕಂದ್ರೆ, ಫಿಟ್‌ನೆಸ್‌ ಕಾಪಾಡಿಕೊಳ್ಳುವುದರಲ್ಲಿ ಇವರಿಬ್ಬರು ನಿಜಕ್ಕೂ ಅತ್ಯುತ್ತಮ. ನೀವು ಯಾವುದೇ ಕ್ರೀಡಾಪಟುಗಳನ್ನು ಒಮ್ಮೆ ಇದರ ಬಗ್ಗೆ ಪ್ರಶ್ನಿಸಿದ್ರೆ, ಮಾನಸಿಕ ಆರೋಗ್ಯದ ಮಹತ್ವವೇನು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ” ಎಂದರು.

  ಇದನ್ನೂ ಓದಿ: ಮೈಸೂರು ಟ್ರಾವಲ್ಸ್ ಅಸೋಸಿಯೇಶನ್‌ ಗೆ ಸೇಫ್ ವೀಲ್ಹ್‌ನ ಬಿ.ಎಸ್.ಪ್ರಶಾಂತ್ ಅಧ್ಯಕ್ಷರಾಗಿ ಆಯ್ಕೆ

  “ಈ ರೀತಿ ನಾನು ನನ್ನ ಪಾತ್ರಗಳಿಗೆ ತಯಾರಿ ಮಾಡಿಕೊಳ್ಳುತ್ತೀನಿ. ಅದು ಯಾವುದೇ ಪಾತ್ರವಿರಲಿ. ಮಾನಸಿಕ ಆರೋಗ್ಯ ಸ್ಥೀಮಿತವಾಗಿಟ್ಟುಕೊಳ್ಳುವುದರಿಂದ ಎಂತಹ ಕಠಿಣ ಪರಿಸ್ಥಿತಿಗಳನ್ನು ಸಹ ಧೈರ್ಯದಿಂದ ಎದುರಿಸಬಹುದು. ನನಗಂತೂ ಇದು ಬಹಳ ಮುಖ್ಯವಾಗಿದ್ದು, ಕವಚದ ರೀತಿ ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

  ಲೀಗ್​ನಿಂದ ಹೊರಬಿದ್ದ MI​ಗೆ ನೀತಾ ಅಂಬಾನಿ ಕ್ಲಾಸ್​; ರೋಹಿತ್​, ಹಾರ್ದಿಕ್​ಗೆ ವಿಶೇಷ ಕಿವಿಮಾತು!

  ಇದೇ ನಮ್ಮ ಸೋಲಿಗೆ ಮುಖ್ಯ ಕಾರಣ… ತಂಡದ ಸಹ ಆಟಗಾರರನ್ನು ದೂರಿದ ರುತುರಾಜ್ ಗಾಯಕ್ವಾಡ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts