ಬೈಕ್​ಗಳ ಮುಖಾಮುಖಿ ಡಿಕ್ಕಿ, ತಂದೆ-ಮಗ ಸೇರಿ ಮೂವರು ಸಾವು

accident
Published on

ಕೋಲಾರ: ಮಾಲೂರು ತಾಲೂಕಿನ ಹರಿಪುರ ಗೇಟ್ ಬಳಿ ಶುಕ್ರವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ತಂದೆ-ಮಗ ಸೇರಿ ಮೂವರು ದುರಂತ ಅಂತ್ಯ ಕಂಡಿದ್ದಾರೆ.

ನೊಸಗೆರೆಯ ಮುನಿರಾಜು (35), ಇವರ ಪುತ್ರ ಪ್ರವೀಣ್ (9) ಹಾಗೂ ಟೇಕಲ್​ನ ಅನಿಲ್(24) ಮೃತ ದುರ್ದೈವಿಗಳು. ಕುಪ್ಪಂನಿಂದ ಮಾಲೂರಿಗೆ ಪತ್ನಿ ಮತ್ತು ಮಗನೊಂದಿಗೆ ಮಾಲೂರು ಪಟ್ಟಣಕ್ಕೆ ಬೈಕ್​ನಲ್ಲಿ ಮುನಿರಾಜು ಆಗಮಿಸುತ್ತಿದ್ದರು. ಮಾಲೂರು ಪಟ್ಟಣದಿಂದ ಟೇಕಲ್​ನತ್ತ ಅನಿಲ್ ಕುಮಾರ್ ಕೂಡ ಬೈಕ್​ನಲ್ಲಿ ತೆರಳುತ್ತಿದ್ದರು. ಇದನ್ನೂ ಓದಿರಿ ವರ್ಷದ ಮೊದಲ ದಿನವೇ ಭೀಕರ ಅಪಘಾತ, ದಂಪತಿ ಸ್ಥಳದಲ್ಲೇ ಸಾವು

ಹರಿಪುರ ಗೇಟ್ ಬಳಿ ಈ ಎರಡೂ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಪ್ರವೀಣ್ ಸ್ಥಳದಲ್ಲೇ ಮೃತಪಟ್ಟರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮುನಿರಾಜು ಹಾಗೂ ಅನಿಲ್​ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ.

ಮುನಿರಾಜು ಪತ್ನಿ ಗಾಯಗೊಂಡಿದ್ದು, ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಬೈಕ್​ಗಳು ನಜ್ಜುಗುಜ್ಜಾಗಿವೆ. ಮಾಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net