

ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ನಡೆದು ಫಲಿತಾಂಶ ಪ್ರಕಟವಾದ ಅದರ ಎಫೆಕ್ಟ್ ಈ ಊರಿನವರಿಗೆ ಸಂಕಷ್ಟ ತಂದಿದೆ.
ಊರಿನ ಜನ ತನಗೆ ಮತ ಹಾಕಿಲ್ಲವೆಂದು ಕೋಪಗೊಂಡ ಪರಾಜಿತ ಅರ್ಥಿಯೊಬ್ಬ ರಸ್ತೆ ಬಂದ್ ಮಾಡಿ ದರ್ಪ ಮೆರೆದಿದ್ದಾನೆ. ಇಂತಹ ಘಟನೆ ಮಾಲೂರು ತಾಲೂಕಿನ ಅಗ್ರಹಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
ಚುನಾವಣೆಗೆ ಸ್ಪರ್ಧಿಸಿದ್ದ ಗಿರಿಗೌಡ ಎಂಬಾತ ಸೋಲು ಕಂಡಿದ್ದಾರೆ. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅಂದರೆ ನಿನ್ನೆ (ಬುಧವಾರ) ರಾತ್ರಿಯೇ ಅಗ್ರಹಾರ ಹೊಸಹಳ್ಳಿ ಗ್ರಾಮದಿಂದ ಹುಣಿಸೆದಿನ್ನೆಗೆ ಹೋಗುವ ರಸ್ತೆಯಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆದು ಗ್ರಾಮಸ್ಥರಿಗೆ ತೊಂದರೆ ಮಾಡಲಾಗಿದೆ.
ಸುಮಾರು 25 ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಬಂದ್ ಮಾಡಿ ಗಿರಿಗೌಡ ದರ್ಪ ತೋರುತ್ತಿದ್ದಾನೆ. ನಮಗೆ ನ್ಯಾಯ ಕೊಡಿ ಎಂದು ಗ್ರಾಮಸ್ಥರು ಅಳಲುತೋಡಿಕೊಂಡಿದ್ದಾರೆ.