

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪತ್ನಿ ಸೋತಿದ್ದಕ್ಕೆ ಆಘಾತಗೊಂಡ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿಂತಾಮಣಿ ತಾಲೂಕಿನ ನಲ್ಲರಾಳಪಲ್ಲಿಯ ವಿಶ್ವನಾಥ್ ಮೃತರು. ಇವರ ಪತ್ನಿ ಚೈತ್ರಾ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದರು. ಗಂಡ-ಹೆಂಡತಿ ಇಬ್ಬರೂ ಬಿರುಸಿನ ಪ್ರಚಾರ ನಡೆಸಿದ್ದರು. ನಿನ್ನೆ(ಬುಧವಾರ) ಫಲಿತಾಂಶ ಪ್ರಕಟವಾಗಿದ್ದು, ಚೈತ್ರಾ ಸೋತರು.
ಚುನಾವಣೆಯಲ್ಲಿ ಪತ್ನಿಗೆ ಸೋಲಾಗಿದ್ದಕ್ಕೆ ತುಂಬಾ ನೊಂದುಕೊಂಡಿದ್ದ ವಿಶ್ವನಾಥ್, ಖಿನ್ನತೆಗೆ ಒಳಗಾಗಿದ್ದರು. ಬುಧವಾರ ರಾತ್ರಿ ಮನೆಯಲ್ಲಿ ಮಲಗಿದ್ದಲ್ಲೇ ಹೃದಯಾಘಾತವಾಗಿದ್ದು, ಮೃತಪಟ್ಟಿದ್ದಾರೆ.