ವರ್ಷದ ಮೊದಲ ದಿನವೇ ಭೀಕರ ಅಪಘಾತ, ದಂಪತಿ ಸ್ಥಳದಲ್ಲೇ ಸಾವು

accident
Published on

ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಹೊಸ ವರ್ಷದ ಮೊದಲ ದಿನವೇ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ದಂಪತಿ ದುರ್ಮರಣಕ್ಕೀಡಾಗಿದ್ದಾರೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಒಡೆರಾಯನಹಳ್ಳಿಯ ಸಿದ್ದಮ್ಮ ಮತ್ತು ಹಾಲೇಶಪ್ಪ ದಂಪತಿ ಬೈಕ್​ನಲ್ಲಿ ಹೋಗುತ್ತಿದ್ದರು. ರಾಜನಹಳ್ಳಿಯ 22 ಕೆರೆ ಏತನೀರಾವರಿ ಸಮೀಪದ ಸೇತುವೆ ಮೇಲೆ ಬೈಕ್​ ಚಲಿಸುತ್ತಿತ್ತು. ಹಿಂಬದಿಯಿಂದ ಬಂದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿರಿ ಶಾಲಾ-ಕಾಲೇಜು ಆರಂಭದ ಮೊದಲ ದಿನವೇ ವಿದ್ಯಾರ್ಥಿ ದುರ್ಮರಣ

ಅಪಘಾತದಲ್ಲಿ ಸೇತುವೆ ಮೇಲಿಂದ ಕೆಳಗೆ ಬಿದ್ದು ಸಿದ್ದಮ್ಮ(45) ಪ್ರಾಣಬಿಟ್ಟರು. ತಲೆಗೆ ಪೆಟ್ಟಾಗಿ ಹಾಲೇಶಪ್ಪ(52) ಕೂಡ ಸ್ಥಳದಲ್ಲೇ ಕೊನೆಯುಸಿರೆಳೆದರು. ಬೈಕ್​ ನಜ್ಜುಗುಜ್ಜಾಗಿತ್ತು. ಅಪಘಾತದ ಭೀಕರತೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಸಿದ್ದಮ್ಮ ಮತ್ತು ಹಾಲೇಶಪ್ಪ ದಂಪತಿ ಇಬ್ಬರೂ ಬೈಕ್​ನಲ್ಲಿ ರಾಣೆಬೆನ್ನೂರಿಗೆ ತೆರಳುತ್ತಿದ್ದರು. ಹರಿಹರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net