ಶಾಲಾ-ಕಾಲೇಜು ಆರಂಭದ ಮೊದಲ ದಿನವೇ ವಿದ್ಯಾರ್ಥಿ ದುರ್ಮರಣ

Death
Published on

ತುಮಕೂರು: ಪ್ರಸಕ್ತ ಸಾಲಿನ ಶಾಲಾ-ಕಾಲೇಜು ಆರಂಭದ ದಿನವೇ ವಿದ್ಯಾರ್ಥಿಯೊಬ್ಬ ದುರ್ಮರಣಕ್ಕೀಡಾದ ಘಟನೆ ತಿಪಟೂರು ತಾಲೂಕಿನ ಹೆಡಗರಹಳ್ಳಿ ಸಂಭವಿಸಿದೆ.

ಕರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್​ನಲ್ಲಿ ಮುಚ್ಚಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಅಂದರೆ ಹೊಸ ವರ್ಷ(2021)ದ ಮೊದಲ ದಿನವಾದ ಶುಕ್ರವಾರ ಪುನಾರಂಭಗೊಂಡಿದೆ.

ಈ ಹಿನ್ನೆಲೆಯಲ್ಲಿ ತಿಪಟೂರಿನ ಸಿದ್ದರಾಮೇಶ್ವರ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿ ಶಶಾಂಕ್ (20) ಕಾಲೇಜಿಗೆ ಬರುತ್ತಿದ್ದ. ಮಾರ್ಗಮಧ್ಯೆ ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ ಶಶಾಂಕ್​ ಮೃತಪಟ್ಟಿದ್ದಾನೆ.

ಮೃತ ವಿದ್ಯಾರ್ಥಿಯು ಚನ್ನರಾಯಪಟ್ಟಣ ತಾಲೂಕಿನ ಚೀಚಗೊಂಡನಹಳ್ಳಿ ಗ್ರಾಮದವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net