

ಬೆಂಗಳೂರು: ಹೇಳಿಕೊಳ್ಳೋಕೆ ಈತ ಸಮಾಜದಲ್ಲಿ ಗಣ್ಯವಕ್ತಿ. ಆದ್ರೆ ಒಳಗೊಳಗೆ ಮಾಡೋದೆಲ್ಲ ನೀಚ ಕೆಲಸ, ಹೆಣ್ಣುಬಾಕ. ಬೇರೆ ಹೆಣ್ಮುಕ್ಳ ಜತೆ ಪೋಲಿ ಚಾಟ್ ಮಾಡ್ತಾನೆ. ಬೇರೆ ಸ್ತ್ರೀಯರ ಜತೆಗಿನ ರಾಸಲೀಲೆ ವಿಡಿಯೋ ಮಾಡಿಕೊಂಡು ಹಿಂಸಿಸುತ್ತಾನೆ... ಇದು 'ಮಲ್ಲು ಪ್ರೊಡ್ಯೂಸರ್' ದಿನಕರ್ನ ರಾಸಲೀಲೆ ಸ್ಟೋರಿ.
ಇವನ ಮೇನ್ ಟಾರ್ಗೆಟ್ ಫೇಸ್ಬುಕ್- ಇನ್ಸ್ಟಾಗ್ರಾಂನಲ್ಲಿರುವ ಸುಂದರ ಯುವತಿಯರು. ಸಿನಿಮಾದಲ್ಲಿ ನಟಿಸುವ ಆಸೆಯುಳ್ಳ ಮಹಿಳೆಯರು ಮತ್ತು ಯುವತಿಯರಿಗೆ ತಾನು ಸಿನಿಮಾ ಪ್ರೊಡ್ಯೂಸರ್, ನನ್ನ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡ್ತೀನಿ ಎಂದು ಸ್ನೇಹ ಬೆಳೆಸಿಳ್ಳುತ್ತಿದ್ದ. ಅವರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಮೆಸೇಜ್ಗಳನ್ನ ಕಳುಹಿಸುತ್ತಿದ್ದ. ಆ ಮೇಲ 'ಮಂಚಕ್ಕೆ ಬನ್ನಿ' ಎಂದು ಕರೆಯುತ್ತಿದ್ದ. ಇದೆಲ್ಲವನ್ನೂ ಪ್ರಶ್ನಿಸಿದ ಪತ್ನಿ ರೋಷಿಣಿಗೆ ಆತ ಟಾರ್ಚರ್ ಕೊಡ್ತಿದ್ದ. ಈ ವಿಚಾರವನ್ನು ನೀನು ಎಲ್ಲೂ ಹೇಳಂಗಿಲ್ಲ. ಹೇಳಿದ್ರೆ ಸುಮ್ನೆ ಬಿಡಲ್ಲ ಎಂದು ಧಮ್ಕಿ ಹಾಕ್ತಿದ್ದ... ಹೀಗೆಂದು ನೊಂದ ರೋಷಿಣಿ ಅಳಲು ತೋಡಿಕೊಂಡಿದ್ದಾರೆ. ಸಿನಿಮಾ ನಿರ್ದೇಶಕಿ ಹಾಗೂ ಫಿಲ್ಮಿ ಫ್ಯಾಷನ್ ಡಿಸೈನರ್ ಆಗಿರುವ ರೋಷಿಣಿಯೇ ತನ್ನ ಗಂಡನ ರಾಸಲೀಲೆಯನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದು. ನ್ಯಾಯ ಕೊಡಿಸುವಂತೆ 'ದಿಗ್ವಿಜಯ ನ್ಯೂಸ್' ಮೊರೆ ಹೋಗಿದ್ದಾರೆ.
ಪತ್ನಿ ಇದ್ರೂ ಹಲವರ ಜತೆ ಮಲಯಾಳಂ ಸಿನಿಮಾ ನಿರ್ಮಾಪಕ ದಿನಕರ್ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆ ಜತೆಗಿನ ರಾಸಲೀಲೆಯ ವಿಡಿಯೋವನ್ನೂ ದಿನಕರ್ ಮೊಬೈಲ್ನಲ್ಲಿ ಮಾಡಿಕೊಂಡಿದ್ದ. ಈ ವಿಡಿಯೋ ಬಗ್ಗೆ ಸಂತ್ರಸ್ತ ಮಹಿಳೆ ರೇಖಾ ಎಂಬಾಕೆ ದಿನಕರ್ ಪತ್ನಿ ರೋಷಿಣಿಗೆ ತಿಳಿಸಿದ್ದಾರೆ. ನಿನ್ನ ಗಂಡನಿಂದ ಕಿರುಕುಳ ಜಾಸ್ತಿ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ ರೋಷಿಣಿಗೆ ದಿನಕರ್ ಮನಸೋಇಚ್ಛೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸೆಪ್ಟೆಂಬರ್ನಲ್ಲಿ ಮನೆ ಬಿಟ್ಟು ಹೋದವನು ಇದುವರೆಗೂ ಆತ ಎಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕಿಲ್ಲ. ಇದನ್ನೂ ಓದಿರಿ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?
'ಮದುವೆಯಾದ ಮೊದಲ ವಾರವೇ ನನ್ನ ಗಂಡ ಸರಿ ಇಲ್ಲ ಎಂಬುದು ಗೊತ್ತಾಯ್ತು. ಆಗಲೂ ಆತನಿಗೆ ಮತ್ತೊಂದು ಹುಡುಗಿಯ ಸಹವಾಸ ಇತ್ತು. ಆದರೂ ನಾನೂ ಸಹಿಸಿಕೊಂಡೇ ಬಂದೆ. ಕಳೆದ ಜುಲೈ 7ರಂದು ರೇಖಾ ಎಂಬಾಕೆ ನಿನ್ನ ಗಂಡ ವಿಡಿಯೋ ಇಟ್ಟುಕೊಂಡು ಹಿಂಸಿಸುತ್ತಿದ್ದಾನೆ ಎಂದು ಅಳಲುತೋಡಿಕೊಂಡರು. ಆಗಲೇ ನನಗೆ ಗೊತ್ತಾಗಿದ್ದು ಅವನೊಬ್ಬ ಕಾಮುಕ ಎಂದು. ಗಂಡನ ಮೊಬೈಲ್ ಚೆಕ್ ಮಾಡಿದೆ. ಲೆಕ್ಕವಿಲ್ಲದಷ್ಟು ಯುವತಿಯರಿಗೆ ಅಶ್ಲೀಲ ಫೋಟೋ ಕಳುಹಿಸಿದ್ದ. ನನ್ನ ಸಂಬಂಧಿಕರ ಹುಡುಗಿಯೊಬ್ಬಳಿಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ. ನಾನು ಇಲ್ಲದ ವೇಳೆ ಹಲವು ಯುವತಿಯರು ಮನೆಗೆ ಬಂದು ಹೋಗಿದ್ದಾರೆ. ಅನುಮಾನ ಬಂದು ಪಕ್ಕದ ಮನೆಯವರನ್ನ ಕೇಳಿದೆ. ಅವರು ಹೇಳಿದರು ಈ ಮನೆಗೆ ''ಸೂ.. ಮನೆ'' ಎಂದೇ ಕರೀತಾರೆ ಅಂತ. ನನಗೆ ಶಾಕ್ ಆಯ್ತು' ಎಂದು ರೋಷಿಣಿ ಕಣ್ಣೀರಿಟ್ಟರು.
'ರೇಖಾ ಮೈಯನ್ನ ಸಿಗರೇಟ್ನಿಂದ ದಿನಕರ್ ಸುಟ್ಟಿ ಹಿಂಸಿಸಿದ್ದಾನೆ. ಆಕೆಗೆ ಚಿತ್ರಹಿಂಸೆ ಕೊಟ್ಟಿದ್ದಾನೆ. ಎಲ್ಲರಿಂದರೂ ದೂರ ಮಾಡಿದ್ದಾನೆ. ಇವನಿಂದ ಅದೆಷ್ಟು ಹೆಣ್ಮಕ್ಳ ಜೀವನ ಹಾಳಾಗಿದೆಯೋ ಗೊತ್ತಿಲ್ಲ ರೋಷಿಣಿ, ನಾನು ಮತ್ತು ರೇಖಾ ಇಬ್ಬರೂ ದಿನಕರ್ ವಿರುದ್ಧ ಪ್ರತ್ಯೇಕ ದೂರು ನೀಡಿದ್ದೇವೆ. ದೂರು ಕೊಟ್ಟು ನಾಲ್ಕು ತಿಂಗಳು ಆಯ್ತು. ಯಾಕೆ ಅವನು ಇನ್ನೂ ಅರೆಸ್ಟ್ ಆಗ್ತಿಲ್ಲ?' ಎಂದರು. ಇದನ್ನೂ ಓದಿರಿ ಸೆಕ್ಸ್ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ಸಿನಿಮಾ ನಟನೆಯ ಹುಚ್ಚಿರುವ ಹುಡುಗಿಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮೂವಿಯಲ್ಲಿ ಚಾನ್ಸ್ ಕೊಡಿಸ್ತೀನಿ ಅಂತ ಹೇಳುವ ಈತನ ಮಾತಿಗೆ ಮರುಳಾಗಬೇಡಿ. ಇವನ ಪರಿಚಯ ಈಗಾಗಲೇ ನಿಮಗಿದ್ದರೆ ಜಾಗ್ರತೆ. ಇವನ ಫ್ರೆಂಡ್ಶಿಪ್ ಕಟ್ ಮಾಡಿಕೊಳ್ಳೋದು ಒಳಿತು.
ದಿನಕರ್ ಮೂಲತಃ ಮಲಯಾಳಿ ಆದರೂ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ರೋಷಿಣಿ ಕೊಡಗಿನವರು. 2006ರಲ್ಲಿ ದಿನಕರ್ ಹಾಗೂ ರೋಷಿಣಿ ಮದುವೆ ಆಗಿದ್ದರು. ಮದುವೆ ನಂತರ ದಂಪತಿ ಬೆಂಗಳೂರಿನಲ್ಲೇ ವಾಸವಿದ್ದರು. ಇಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿನಕರ್ ಮಲಯಾಳಂನ 'ಮೈ ಸ್ಟೋರಿ' ಚಿತ್ರ ನಿರ್ಮಾಣ ಮಾಡಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಹಾಗೂ ಪಾರ್ವತಿ ಮೆನನ್ ಅಭಿನಯದ ಚಿತ್ರ 2018ರಲ್ಲಿ ತೆರೆ ಕಂಡಿತ್ತು. ರೋಷಿಣಿ 'ಮೈ ಸ್ಟೋರಿ' ಚಿತ್ರ ನಿರ್ದೇಶನ ಮಾಡಿದ್ದರು. ಕನ್ನಡ, ತಮಿಳು, ಮಲಯಾಳಂ ಸೇರಿ ಸೌತ್ ಇಂಡಿಯಾದ 70ಕ್ಕೂ ಹೆಚ್ಚು ಸಿನಿಮಾಗಳಿಗೆ ರೋಷಿಣಿ ವಸ್ತ್ರ ವಿನ್ಯಾಸಕಿ ಆಗಿದ್ದಾರೆ.
ಕನ್ನಡದ ಕಲ್ಲರಳಿ ಹೂವಾಗಿ, ಮುಂಗಾರು ಮಳೆ-2 ಹಾಗೂ ದರ್ಶನ್ ಅಭಿನಯದ ರಾಜವೀರ, ಮದಕರಿ ನಾಯಕ ಸಿನಿಮಾಗಳಿಗೂ ವಸ್ತ್ರ ವಿನ್ಯಾಸಕಿ ರೋಷಿಣಿ. ದಿನಕರ್-ರೋಷಿಣಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. (ದಿಗ್ವಿಜಯ ನ್ಯೂಸ್)