ಒಂದೇ ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು!; ಅಚ್ಚರಿ ಮೂಡಿಸುತ್ತಿದೆ 15 ವರ್ಷಗಳ ಈ ಮರ..

Mango
Published on

ನವದೆಹಲಿ: ಒಂದು ಮಾವಿನ ಮರದಲ್ಲಿ ಒಂದೇ ತಳಿಯ ಮಾವಿನ ಹಣ್ಣುಗಳು ಕಾಣಿಸಿಕೊಳ್ಳುವುದು ಸಹಜ ಹಾಗೂ ಸರ್ವೇಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ಮಾವಿನ ಮರದಲ್ಲಿ 121 ಬಗೆಯ ಹಣ್ಣುಗಳು ಕಾಣಸಿಗುತ್ತವೆ. ಆದ್ದರಿಂದ ಈ ಮಾವಿನ ಮರ ಅಚ್ಚರಿಯ ಹಾಗೂ ಆಕರ್ಷಣೆಯ ಕೇಂದ್ರವಾಗಿದೆ.

ಹದಿನೈದು ವರ್ಷಗಳ ಈ ಮಾವಿನ ಮರದಲ್ಲಿ ತೋಟಗಾರಿಕಾ ಪರಿಣತರು ಕಳೆದ ಐದು ವರ್ಷಗಳಿಂದ ಇಂಥದ್ದೊಂದು ಪ್ರಯೋಗ ನಡೆಸಿದ್ದು, ಇದೀಗ 121 ಬಗೆಯ ಹಣ್ಣುಗಳನ್ನು ಒಂದೇ ಮರದಲ್ಲಿ ಕಾಣಲು ಸಾಧ್ಯವಾಗುವಂತಾಗಿದೆ. ಉತ್ತರಪ್ರದೇಶದ ಸಹರನ್​ಪುರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಯೋಗ ನಡೆದಿದೆ.

ತೋಟಗಾರಿಕಾ ಪ್ರಯೋಗ ಹಾಗೂ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ರಾಜೇಶ್ ಪ್ರಸಾದ್ ಅವರು 121 ಬಗೆಯ ಮಾವಿನ ಗಿಡದ ರೆಂಬೆಗಳನ್ನು ಒಂದೇ ಮರಕ್ಕೆ ಕಸಿ ಮಾಡುವ ಮೂಲಕ ಹೀಗೊಂದು ಅಚ್ಚರಿಗೆ ಕಾರಣವಾಗಿದ್ದಾರೆ. ಈ ರೀತಿಯ ಕಸಿ ಮಾಡಿ ಆ ಮರದ ಆರೈಕೆಗೆ ವಿಶೇಷ ಗಮನ ನೀಡಲಾಗಿದೆ. ಪರಿಣಾಮವಾಗಿ ನೂರಕ್ಕೂ ಅಧಿಕ ಬಗೆಯ ಮಾವಿನಹಣ್ಣುಗಳು ಒಂದೇ ತಳಿಯ ಮಾವಿನ ಮರದಲ್ಲಿ ಸಿಗುವಂತಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net