ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!

Untitled-1
Published on

ನವದೆಹಲಿ: ಕೋವಿಡ್​ -19 ವೈರಸ್​ ರೂಪಾಂತರಗೊಂಡು ಅದರ ಬೇರೆ ಬೇರೆ ವೇರಿಯಂಟ್​ಗಳು ಆತಂಕವನ್ನು ಹೆಚ್ಚಿಸಿದಂತೆ ಇದೀಗ ಕರೊನಾದ ಮತ್ತೊಂದು ವೇರಿಯಂಟ್​ ಕುರಿತು ತಲೆ ಕೆಡಿಸಿಕೊಳ್ಳುವಂತಾಗಿದೆ. 'ಡೆಲ್ಟಾ ಪ್ಲಸ್'​ ಎನ್ನಲಾದ ಈ ವೇರಿಯಂಟ್​ ಈಗ ಗಂಭೀರಾಗಿ ಪರಿಣಮಿಸಿದ್ದು, ಈ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳುವಂತೆ ಮಾಡಿದೆ.

ಈಗಾಗಲೇ ಗುರುತಿಸಲಾಗಿರುವ ಗಾಮಾ ಹಾಗೂ ಬೀಟಾ ವೇರಿಯಂಟ್​ನ ಮುಂದುವರಿದ ರೂಪಾಂತರಿ ಇದಾಗಿದ್ದು, ಇದನ್ನು ಕೆ417ಎನ್​ ಎಂದು ಕರೆಯಲಾಗುತ್ತಿದೆ. ಕರೊನಾದ ಇತರ ವೇರಿಯಂಟ್​ಗಳಿಗಿಂತ ಇದು ಅಧಿಕ ಸೋಂಕುಕಾರಕವಾಗಿದ್ದು, ಲಸಿಕೆ ಹಾಕಿಸಿಕೊಂಡಿದ್ದರೂ ದುಷ್ಪರಿಣಾಮ ಬೀರಬಹುದು ಎಂಬ ಮಾಹಿತಿ ಹೊರಬಿದ್ದಿದೆ.

ಔಷಧ ಕಂಪನಿಗಳು ಲಸಿಕೆ ತಯಾರಿಕೆಗೆ ಬಳಸಿದ ಮಾದರಿಗಿಂತ ಇವು ವಿಭಿನ್ನವಾಗಿರುವುದರಿಂದ, ಲಸಿಕೆ ಈ ವೇರಿಯಂಟ್​ ಮೇಲೆ ಪರಿಣಾಮಕಾರಿ ಆಗಿರಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಈಗಿನ ಆ್ಯಂಟಿಬಾಡಿಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಈ ಹೊಸ ವೇರಿಯಂಟ್​ಗೆ ಇದೆ ಎನ್ನಲಾಗುತ್ತಿದೆ. ಮೇ ಅಂತ್ಯದ ಅವಧಿಯಲ್ಲಿ ಪರೀಕ್ಷಿಸಲಾದ ಮಾದರಿಗಳ ಪೈಕಿ ಶೇ. 31ರಷ್ಟರಲ್ಲಿ ಈ ವೇರಿಯಂಟ್ ಕಂಡುಬಂದಿದೆ. ಇನ್ನು ಇದರ ವಿರುದ್ಧ ಲಸಿಕೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net