'ನಾನು ಆ ಬಾಲಿವುಡ್‌ ಸ್ಟಾರ್‌ನ ಅಭಿಮಾನಿ': ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನದಾಳದ ಮಾತು!

darshan
Published on

ಬೆಂಗಳೂರು: ಅಭಿಮಾನಿಗಳ ಅಭಿಮಾನಕ್ಕೆ ಮೊದಲಿನಿಂದಲೂ ದಾಸ ನಂತೆ ತಲೆ ಬಾಗುತ್ತಾ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಶನ್ ಅವರಲ್ಲಿ ಕೂಡ ಒಬ್ಬ ಅಭಿಮಾನಿ ಇದ್ದಾನೆ. ಆ ಅಭಿಮಾನಿಗೆ ಆ ಸೂಪರ್ ಸ್ಟಾರ್‌ನನ್ನು ಭೇಟಿಯಾಗುವ ಆಸೆ. ಆ ಸ್ಟಾರ್ ಬೇರೆ ಯಾರು ಅಲ್ಲ, ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್.

ಖುದ್ದು ದರ್ಶನ್ ಹಿಂದೊಮ್ಮೆ 'ನಾನು ಅಮಿತಾಭ್​ ಬಚ್ಚನ್​ ಅಭಿಮಾನಿ' ಎಂದು ಹೇಳಿದ್ದರು. ಅವರ ಈ ಮಾತು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.

ದರ್ಶನ್​ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ ಅಷ್ಟೇಕೆ ಹಿಂದಿ ಭಾಷಿಕ ರಾಜ್ಯಗಳಲ್ಲೂ ಚಿರಪರಿಚಿತ. ದರ್ಶನ್ ಸಿನಿಮಾಗಳನ್ನು ಉತ್ತರ ಭಾರತದವರು ಯುಟ್ಯೂಬ್ ನಲ್ಲಿ ಮುಗಿ ಬಿದ್ದು ನೋಡಿದ ಉದಾಹರಣೆಗಳಿವೆ. ಹೀಗಾಗಿ ಅಮಿತಾಭ್ ಬಚ್ಚನ್ ಅವರನ್ನ ಭೇಟಿಯಾಗುವುದು ದರ್ಶನ್ ಅವರ ಪಾಲಿಗೆ ಅಸಾಧ್ಯ ಏನಲ್ಲ, ಆದರೆ ದರ್ಶನ್ ಗೆ ಅಮಿತಾಭ್ ಬಚ್ಚನ್ ಅವರ ಬಳಿ ತಾನೊಬ್ಬ ಸೂಪರ್ ಸ್ಟಾರ್ ಎಂದು ಹೋಗುವ ಮನಸ್ಸಿಲ್ಲ. ಬದಲಿಗೆ ಸಾಮಾನ್ಯ ಅಭಿಮಾನಿಯಾಗಿ ಹೋಗಿ ಭೇಟಿ ಮಾಡುವ ಕನಸು ಇದೆ.

ಇದೇ ಕಾರಣಕ್ಕೆ ಈ ಹಿಂದೆ ಸಂದರ್ಶನವೊಂದರಲ್ಲಿ ದರ್ಶನ್ ಈ ವಿಚಾರವನ್ನು ಹೇಳಿದ್ದರು. ಇನ್ನು ದರ್ಶನ್​ ಸ್ನೇಹಿತರು 'ನೀವೊಬ್ಬ ಸೌತ್ ಇಂಡಿಯಾದ ಸೂಪರ್​ ಸ್ಟಾರ್​..ನಿಮಗೆ ಅಮಿತಾಭ್ ಬಚ್ಚನ್ ರ ಪರಿಚಯ ಮಾಡಿಸುತ್ತೇವೆ. ಅವರು ವೆಲ್​ಕಮ್ ಮಾಡಿಯೇ ಮಾಡುತ್ತಾರೆ' ಎಂದು ಹೇಳಿದರೂ, ದರ್ಶನ್​ ಒಪ್ಪುತ್ತಿಲ್ಲ.

'ಜನರ ಮಧ್ಯೆ ನಿಂತು ಅವರನ್ನು ನೋಡಬೇಕು' ಎಂದು ದರ್ಶನ್ ತನ್ನ ಸ್ನೇಹಿತರಿಗೆ ಹೇತ್ತಿದ್ದಾರೆ ಎನ್ನಲಾಗಿದೆ. ದರ್ಶನ್​ ಈ ಹಿಂದೆ ಆಡಿದ ಮನದ ಮಾತು ಈಗ ಮತ್ತೊಮ್ಮೆ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದರ್ಶನ್ ಅವರ ಈ ಸಂದರ್ಶನದ ತುಣುಕು ಅವರ ಅಭಿಮಾನಿಗಳಲ್ಲಿದ್ದ ಅಭಿಮಾನವನ್ನು ಇನ್ನೂ ಹೆಚ್ಚಿಸುತ್ತಿದೆ. ಅಭಿಮಾನಿಗಳಿಂದ ನಾನಾ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net