ವಿಶ್ವದಾದ್ಯಂತ ಕೋವಿಡ್ -19 ಲಸಿಕೆ ಹಿಂಪಡೆದ ಅಸ್ಟ್ರಾಜೆನೆಕಾ

covid
Published on

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ತನ್ನ ಲಸಿಕೆಯನ್ನು ವಿಶ್ವಾದ್ಯಂತ ಹಿಂಪಡೆದಿರುವುದಾಗಿ ಕೋವಿಶೀಲ್ಡ್ ಲಸಿಕೆ ತಯಾರಿಕಾ ಕಂಪೆನಿ ಅಸ್ಟ್ರಾಜೆನೆಕಾ ಹೇಳಿದೆ.

ಕರೋನಾ ಬಳಿಕ ಲಭ್ಯವಿರುವ ನವೀಕರಿಸಿದ ಲಸಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಕೋವಿಡ್ -19ರ ತನ್ನ ಲಸಿಕೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅಸ್ಟ್ರಾಜೆನೆಕಾ ಕಂಪನಿ ಹೇಳಿದೆ.

ಕೋವಿಡ್ ನ ವಿವಿಧ ತಳಿಗಳು ಕಂಡು ಬರುತ್ತಿರುವುದರಿಂದ ಅಸ್ಟ್ರಾಜೆನೆಕಾ ಉತ್ಪಾದಿಸುತ್ತಿರುವ ವ್ಯಾಕ್ಸ್ಝೆವ್ರಿಯಾ ಲಸಿಕೆಗೆ ಬೇಡಿಕೆ ಕಡಿಮೆಯಾಗಿ ಕುಸಿತಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಇನ್ನು ಮುಂದೆ ಆ ಲಸಿಕೆಯನ್ನು ತಯಾರಿಸುವುದಿಲ್ಲ ಅಥವಾ ಸರಬರಾಜು ಮಾಡುವುದಿಲ್ಲ ಎಂದು ಕಂಪೆನಿ ಹೇಳಿದೆ.

ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್ಲೆಟ್ ಎಣಿಕೆಗಳಂತಹ ಅಡ್ಡ-ಪರಿಣಾಮಗಳನ್ನು ತಮ್ಮ ಲಸಿಕೆ ಉಂಟುಮಾಡುತ್ತದೆ ಎಂದು ಆಂಗ್ಲೋ-ಸ್ವೀಡಿಷ್ ಔಷಧಿ ತಯಾರಕ ಕಂಪೆನಿ ಅಸ್ಟ್ರಾಜೆನೆಕಾ ಲಂಡನ್ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಒಪ್ಪಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net