More

    ಬ್ರೆಜಿಲ್‌ನಲ್ಲಿ ಭೀಕರ ಪ್ರವಾಹ: 78 ಮೃತ್ಯು- 105 ಮಂದಿ ನಾಪತ್ತೆ

    ರಿಯೊ ಗ್ರಾಂಡೆ ಡೊ ಸುಲ್: ರಿಯೊ ಗ್ರಾಂಡೆ ಡೊ ಸುಲ್: ದಕ್ಷಿಣ ಬ್ರೇಜಿಲ್​ನಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿದ್ದು, ಪ್ರವಾಹದ ತೀವ್ರತೆಗೆ ಈಗಾಗಲೇ 78 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹಕ್ಕೆ ಸಿಲುಕಿ ಸುಮಾರು 105 ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ‘ಲೈಂಗಿಕ ಕಿರುಕುಳ ಕೇಸ್​ನಲ್ಲಿ ಪೊಲೀಸರು ಸಮನ್ಸ್‌ ನೀಡಿದ್ರೆ ನಿರ್ಲಕ್ಷಿಸಿ’: ರಾಜ್ಯಪಾಲ ಆನಂದ್‌ ಬೋಸ್‌

    ಬ್ರೆಜಿಲ್‌ನ ದಕ್ಷಿಣ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಹಿಂದೆಂದೂ ಕಾಣದಂತ ಭೀಕರ ಪ್ರವಾಹ ಏರ್ಪಟ್ಟಿದ್ದು, ಇದರಿಂದಾಗಿ 1,15,000ಕ್ಕೂ ಹೆಚ್ಚು ಜನ ಸ್ಥಳಾಂತರಗೊಂಡಿದ್ದಾರೆ. ಅವರೆಲ್ಲರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ.

    ಪ್ರವಾಹದಿಂದಾಗಿ ಕುಸಿದ ಮನೆಗಳು, ಸೇತುವೆಗಳು ಮತ್ತು ರಸ್ತೆಗಳ ಅವಶೇಷಗಳ ಕೆಳಗೆ ಸಿಲುಕಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಕಾರ್ಯಾಚರಣೆಯಲ್ಲಿ 3ಸಾವಿರಕ್ಕೂ ಹೆಚ್ಚು ಸೈನಿಕರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ವಯಂ ಸೇವಕರು ತೊಡಗಿದ್ದಾರೆ.

    ನೀರು, ವಿದ್ಯುತ್ ಇಲ್ಲದೆ ಮನೆಗಳಲ್ಲಿ ಜನರ ಸಿಲುಕಿದ್ದು, ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ಇನ್ನು ಸಂತ್ರಸ್ತರಿಗಾಗಿ ಸೇನೆಯು ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಪ್ರವಾಹದ ಪರಿಣಾಮ ರಸ್ತೆಗಳು ಸಂಪರ್ಕ ಕಡಿತಗೊಂಡಿದೆ. ಭೂಕುಸಿತ, ಕೊಚ್ಚಿಹೋದ ರಸ್ತೆಗಳು ಮತ್ತು ಕುಸಿದ ಸೇತುವೆಗಳನ್ನು ಎಲ್ಲೆಲ್ಲೂ ಕಾಣಬಹುದಾಗಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದ ಪರಿಣಾಮ ಬಹುತೇಕ ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ. 8ಲಕ್ಷಕ್ಕೂ ಹೆಚ್ಚು ಜನ ನೀರಿನ ಪೂರೈಕೆಯಿಲ್ಲದೆ ಪರದಾಡುತ್ತಿದ್ದಾರೆ ಎಂದು ಸಿವಿಲ್ ಡಿಫೆನ್ಸ್ ಏಜೆನ್ಸಿ ತಿಳಿಸಿದೆ,

    ಕಳೆದ ಏಳು ದಿನಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಸರಿಸುಮಾರು 16,000 ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಪತ್ನಿ ಅಗತ್ಯತೆಗಾಗಿ ಬೆಳ್ಳಂಬೆಳಗ್ಗೆ ಹೀಗೊಂದು ಪತ್ರ..ಪತಿ ಕರಣ್ ಬಗ್ಗೆ ಸುರಭಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts