ಎಸ್ಸೆಸ್ಸೆಲ್ಸಿ ಫಲಿತಾಂಶ:- ಶಿರಸಿಯ ನಾಲ್ವರು ರಾಜ್ಯಕ್ಕೆ ಟಾಪರು

SSLC topers
Published on

ಕಾರವಾರ: ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರು ರಾಜ್ಯಕ್ಕೆ ಎರಡನೇ ಸ್ಥಾನ, ಒಬ್ಬ ವಿದ್ಯಾರ್ಥಿನಿ ಮೂರನೇ ಸ್ಥಾನ ಪಡೆದಿದ್ದಾರೆ.
ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿ, ಹುತ್ತಗಾರಿನ ದರ್ಶನ ಸುಬ್ರಾಯ ಭಟ್, ಗೋಳಿ ಪ್ರೌಢಶಾಲೆಯ ಚಿನ್ಮಯಿ ಶ್ರೀಪಾದ ಹೆಗಡೆ ಹಾಗೂ ಭೈರುಂಬೆ ಪ್ರೌಢಶಾಲೆಯ ಶ್ರೀರಾಮ ಕೆ.ಎಂ. 625 ಕ್ಕೆ 624 ಅಂಕ ಪಡೆದು, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೇ ಗೋಳಿ ಪ್ರೌಢಶಾಲೆಯ ತೃಪ್ತಿ ಗೌಡ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನದಲ್ಲಿದ್ದಾರೆ. ಎಲ್ಲರೂ ಗ್ರಾಮೀಣ ಭಾಗದ ಕೃಷಿಕರ ಮಕ್ಕಳು ಎಂಬುದು ವಿಶೇಷ.

ನಿಯಮಿತವಾದ ಓದಿನಿಂದ ನಾನು ಎಲ್ಲರ ಗಮನ ಸೆಳೆಯುವ ಅಂಕ ಪಡೆಯಲು ಸಾಧ್ಯವಾಯಿತು. ದಿನಕ್ಕೆ 3 ರಿಂದ ನಾಲ್ಕು ತಾಸು ಓದುತ್ತಿದ್ದೆ. ಓದುವಾರ ಮೊಬೈಲ್ ಅಥವಾ ಅನ್ಯ ವಿಚಾರಗಳ ಬಗ್ಗೆ ಗಮನಹರಿಸದೇ ಏಕಾಗ್ರತೆ ವಹಿಸಿರುವುದು ಉತ್ತಮ ಅಂಕ ಪಡೆಯಲು ಸಹಕಾರಿಯಾಗಿದೆ. ಈ ಸಾಧನೆಗೆ ಪಾಲಕರ , ಶಿಕ್ಷಕರ ಸಹಕಾರ ಕಾರಣ.ದರ್ಶನ್ ಸುಬ್ರಾಯ ಭಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net