More

    ವಿದ್ಯಾಕಾಶಿ ಧಾರವಾಡಕ್ಕೆ 22ನೇ ಸ್ಥಾನ

    ಧಾರವಾಡ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯು ರಾಜ್ಯಕ್ಕೆ ೨೨ನೇ ಸ್ಥಾನ ಪಡೆದಿದೆ. ರಾಜ್ಯ ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ ಫಲಿತಾಂಶದಲ್ಲಿ ಶೇ. ೭೨.೬೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ರೆಗ್ಯುಲರ್ ಫ್ರೆಶ್, ರೆಗ್ಯುಲರ್ ರಿಪಿಟರ್ಸ್, ಪ್ರೆÊವೇಟ್ ಫ್ರೆಶ್, ಪ್ರೆÊವೇಟ್ ರಿಪಿಟರ್ಸ್ ಸೇರಿ ೨೯,೧೪೮ ವಿದ್ಯಾರ್ಥಿಗಳಲ್ಲಿ ೨೨,೧೮೨ ಜನ ಉತ್ತೀರ್ಣರಾಗಿದ್ದಾರೆ. ೨೦೨೨- ೨೩ನೇ ಸಾಲಿನಲ್ಲಿ ೨೪ನೇ ಸ್ಥಾನದಲ್ಲಿದ್ದ ಜಿಲ್ಲೆ, ೨ ಸ್ಥಾನಗಳ ಏರಿಕೆ ಕಂಡಿದೆ.

    ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಶೇ. ೯೮.೮೮ ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಧಾರವಾಡದ ಪ್ರೆಸೆಂಟೇಶನ್ ಗರ್ಲ್ಸ್ ಸ್ಕೂಲ್‌ನ ಅನುಷಾ ನುಗ್ಗಿಕೇರಿ ಶೇ. ೯೮.೮೮, ಇದೇ ಶಾಲೆಯ ಪಲ್ಲವಿ ಸುಣಗಾರ ಶೇ. ೯೮.೮೮ ಹಾಗೂ ಹುಬ್ಬಳ್ಳಿಯ ಕೆಎಲ್‌ಇ ಎಂ.ಆರ್. ಸಾಖರೆ ಹೈಸ್ಕೂಲ್‌ನ ಕೃತಿಕಾ ಎಚ್.ಬಿ. ಶೇ. ೯೮.೮೮ ಅಂಕಗಳೊAದಿಗೆ ಜಿಲ್ಲೆಯ ಟಾಪರ್‌ಗಳಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts