More

    ಚಾರಣದಿಂದ ಆತ್ಮವಿಶ್ವಾಸ ವೃದ್ಧಿ

    ಶಿವಮೊಗ್ಗ: ಚಾರಣ ಸಾಹಸ ಚಟುವಟಿಕೆಯ ಭಾಗವಾಗಿದೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಹೇಳಿದರು.

    ಯೂತ್ ಹಾಸ್ಟೆಲ್ ತರುಣೋದಯ ಘಟಕ, ಕ್ರೀಡಾ ಭಾರತಿ, ಯೋಗ ಶಿಕ್ಷಣ ಕೇಂದ್ರದಿಂದ ಮಧುಕೃಪಾದಲ್ಲಿ ಆಯೋಜಿಸಿದ್ದ ಯೋಗಪಟುಗಳ ಹಿಮಾಲಯ ಚಾರಣ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರ ಮಟ್ಟದಲ್ಲಿ ಪ್ರಾರಂಭವಾದ ಸಂಸ್ಥೆ ಯುವಕರನ್ನು ಹುರಿದುಂಬಿಸಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದರು.
    ತರುಣೋದಯ ಘಟಕದ ಚೇರ್ಮನ್ ಎಸ್.ವಾಗೀಶ್ ಮಾತನಾಡಿ, ಅದೃಷ್ಟವಂತರಿಗೆ ಮಾತ್ರ ಹಿಮಾಲಯ ಚಾರಣ ಮಾಡಲು ಅವಕಾಶ ದೊರಕುತ್ತದೆ. ಈ ಬಾರಿ ಯೋಗ ಪಟುಗಳಿಗೆ ಚಾರಣ ಆಯೋಜಿಸಿದ್ದು, ಪ್ರತಿ ವರ್ಷ ಯೂತ್ ಹಾಸ್ಟೆಲ್ಸ್‌ನಿಂದ ನೂರಾರು ಸಾಹಸಿಗಳಿಗೆ ಹಿಮಾಲಯ ಚಾರಣ ಏರ್ಪಡಿಸಲಾಗುತ್ತದೆ ಎಂದು ಹೇಳಿದರು.
    ಕ್ರೀಡಾ ಭಾರತಿ ಜಿಲ್ಲಾಧ್ಯಕ್ಷ ಡಾ. ನಾಗರಾಜ್, ಪ್ರಮುಖರಾದ ಪವಿತ್ರಾ, ಅ.ನಾ.ವಿಜಯೇಂದ್ರ, ಕ್ರೀಡಾಭಾರತಿ ಶಿವಮೊಗ್ಗ ವಿಭಾಗ ಸಂಯೋಜಕ ರಾಘವೇಂದ್ರ, ಯೋಗ ಶಿಕ್ಷಣ ಸಮಿತಿ ಸದಸ್ಯ ರವೀಂದ್ರ, ರಮೇಶ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ನಾಗಭೂಷಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts