More

  ಜನರಲ್ಲಿ ಮೂಡಿದೆ ಜಾಗೃತಿ

  ದೇವದುರ್ಗ: ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಮಕ್ಕಳನ್ನು ಮಾರಕವಾಗಿ ಕಾಡುವ ಪೋಲಿಯೋ ರೋಗದಿಂದ ರಕ್ಷಿಸಬೇಕು ಎಂದು ನಾಗಡದಿನ್ನಿ ಗ್ರಾಪಂ ಅಧ್ಯಕ್ಷೆ ಮೈತ್ರಾವತಿ ವೈ.ಬಸವರಾಜ ತಿಪ್ಪಲದಿನ್ನಿ ಹೇಳಿದರು.

  ನಾಗಡದಿನ್ನಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಪೋಲಿಯೋ ವೈರಸ್‌ನಿಂದ ಮಕ್ಕಳನ್ನು ರಕ್ಷಿಸಲು ಕೇಂದ್ರ ಸರ್ಕಾರ 1995ರಿಂದ ಪ್ರತಿವರ್ಷ ಲಸಿಕಾ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಈ ಹಿಂದೆ ಪೋಲಿಯೋ ಲಸಿಕೆ ಹಾಕಿಸಲು ಪಾಲಕರು ಹಿಂಜರಿಯುತ್ತಿದ್ದರು. ಇದೀಗ ಜನರು ಜಾಗೃತರಾಗಿದ್ದಾರೆ ಎಂದರು.

  ಸಮುದಾಯ ಆರೋಗ್ಯ ಅಧಿಕಾರಿ ಪ್ರಶಾಂತ ಸೂರ್ಯವಂತಿ, ಪಿಡಿಒ ಬಸಯ್ಯ ಸ್ವಾಮಿ, ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಪಾಟೀಲ್, ದುರುಗಮ್ಮ ನಾಯಕ, ಸಲೀಮಾ, ಆಶಾ ಕಾರ್ಯಕರ್ತೆಯರಾದ ಕವಿತಾ, ಸರಸ್ವತಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts