ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

rape
Published on

ನವದೆಹಲಿ: ಕೆಥೊಲಿಕ್ ಪಾದ್ರಿಗಳು ದೊಡ್ಡದೊಂದು ಸೆಕ್ಸ್ ಸ್ಕ್ಯಾಂಡಲ್​ನಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಕಳೆದ 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ದೂರುಗಳು ಕೇಳಿಬಂದಿವೆ.

2018ರ ಜುಲೈ 1ರಿಂದ 2020ರ ಡಿಸೆಂಬರ್ 31ರ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ನಡೆದಿರುವುದು ವರದಿಯಾಗಿದೆ. ಪೋಲಂಡ್​ನಲ್ಲಿ ಕೆಥೊಲಿಕ್ ಪಾದ್ರಿಗಳಿಂದ ಇಷ್ಟೊಂದು ಲೈಂಗಿಕ ಅನಾಚರಗಳು ನಡೆದಿರುವ ಕುರಿತು ಇನ್​ಸ್ಟಿಟ್ಯೂಟ್ ಆಫ್​ ಕೆಥೊಲಿಕ್ ಚರ್ಚ್ ಸ್ಟ್ಯಾಟಿಸ್ಟಿಕ್ಸ್ ಸೋಮವಾರ ಪ್ರಕಟಿಸಿದೆ. ದುರಂತವೆಂದರೆ ಕೆಥೊಲಿಕ್ ಪಾದ್ರಿಗಳು ದಿನಕ್ಕೊಂದು ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಲೈಂಗಿಕ ಅನಾಚರ ನಡೆಸಿರುವುದು ಈ ವರದಿಯಿಂದ ಬಹಿರಂಗಗೊಂಡಿದೆ.

ಹೀಗೆ ಪ್ರಕಟವಾದ ವರದಿಯ ಪೈಕಿ ಇದು ಎರಡನೆಯದು. ಈ ಮೊದಲು ಇಂಥ ಪ್ರಥಮ ವರದಿ 2019ರಲ್ಲಿ ಪ್ರಕಟಗೊಂಡಿದ್ದು, ಅದರಲ್ಲಿ 1990ರ ಜನವರಿಯಿಂದ 2018ರ ಜೂನ್​ವರೆಗೆ 382 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಎರಡೂ ವರದಿಯಲ್ಲಿ ಅರ್ಧಕ್ಕರ್ಧದಷ್ಟು ಪ್ರಕರಣಗಳಲ್ಲಿ ಸಂತ್ರಸ್ತೆಯರು 15 ವರ್ಷಕ್ಕಿಂತ ಕಿರಿಯರು ಎಂಬ ಆತಂಕಕಾರಿ ಅಂಶವೂ ಬೆಳಕಿಗೆ ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net