More

    ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

    ನವದೆಹಲಿ: ದಪ್ಪ ಇರೋ ಕಾರಣಕ್ಕೆ ಕಸರತ್ತು ಮಾಡಿ ಸಣ್ಣಗಾಗಲೆಂದೇ ಹಲವರು ಜಿಮ್​ಗೆ ಹೋಗುತ್ತಾರೆ. ಆದರೆ ಹಾಗೆ ದಪ್ಪ ಇರುವುದನ್ನೇ ಅವಹೇಳನ ಮಾಡಿದ ಜಿಮ್​ನವರು, ಆ ಭಾಗ ಸ್ವಲ್ಪ ಕಾಣಿಸುತ್ತದೆ ಎಂದು ಹೇಳಿ ಮಹಿಳೆಯೊಬ್ಬಳನ್ನು ಜಿಮ್​ನಿಂದ ಹೊರಗೆ ಕಳುಹಿಸಿದ್ದಾರೆ.

    ಇದರಿಂದ ಅವಮಾನ ಆಯಿತು ಎಂದು ಹೇಳಿ ಆಕೆ ವಿಡಿಯೋ ಮಾಡಿ ಅತ್ತು ತನ್ನ ನೋವು ತೋಡಿಕೊಂಡು, ಆ ಕ್ಲಿಪ್ಪಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಶೆಲ್​ಬಿ ಎಂಬಾಕೆ ತನ್ನ ಟಿಕ್​ಟಾಕ್​ ಖಾತೆ (@shelby.bellz)ಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ. ನಾನು ಜಿಮ್​ನಲ್ಲಿ ವರ್ಕ್​ಔಟ್ ಮಾಡುತ್ತಿದ್ದೆ, ಸುಮಾರು 15 ನಿಮಿಷಗಳ ಕಾಲ ಟ್ರೆಡ್​ಮಿಲ್​ನಲ್ಲಿದ್ದೆ, ಆಗ ಪ್ರೋಗ್ರಾಮ್​ ಕೋ ಆರ್ಡಿನೇಟರ್ ಬಂದು ಹೊರಗೆ ಹೋಗುವಂತೆ ಸೂಚಿಸಿದಳು ಎಂದು ಶೆಲ್​ಬಿ ನಡೆದಿದ್ದನ್ನು ವಿವರಿಸಿದ್ದಾಳೆ.

    ಇಷ್ಟಕ್ಕೆಲ್ಲ ಕಾರಣ ಆ ಭಾಗ ಒಂದು ಸ್ವಲ್ಪ ಕಾಣಿಸಿದ್ದು. ‘ಈ ಜಿಮ್​ನಲ್ಲಿ ಒಂದು ಪಾಲಿಸಿ ಇದೆ. ನೀವು ಇಲ್ಲಿ ಸ್ಪೋರ್ಟ್ಸ್​ ಬ್ರಾ ಧರಿಸುವ ಹಾಗಿಲ್ಲ. ಅದರಲ್ಲೂ ಹೊಟ್ಟೆ ಕಾಣಿಸುವಂತಿಲ್ಲ. ನಾನು ಸ್ಪೋರ್ಟ್ಸ್​ ಬ್ರಾ ಧರಿಸಿದ್ದು, ಹೈವೇಸ್ಟ್​ ಲೆಗ್ಗಿಂಗ್ಸ್​ ಹಾಕಿಕೊಂಡಿದ್ದು ಮಧ್ಯೆ ಒಂದು ಸ್ವಲ್ಪ ಹೊಟ್ಟೆಯ ಉಬ್ಬು ಹೊರಕ್ಕೆ ಕಾಣಿಸುತ್ತಿತ್ತು. ಅಷ್ಟಕ್ಕೇ ಅವರು ನನ್ನನ್ನು ಹೊರಕ್ಕೆ ಕಳುಹಿಸಿದ್ದಾರೆ. ಇದೇ ಒಬ್ಬಳು ಸಪೂರ ಇರುವವಳಾಗಿದ್ದರೆ ಅವರು ಹೀಗೆ ಹೇಳುತ್ತಿರಲಿಲ್ಲ. ನನ್ನನ್ನು ಫ್ಯಾಟ್​​ಶೇಮ್ ಮಾಡಿದ್ದಾರೆ’ ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಈ ಬಗ್ಗೆ ಹಲವು ನೆಟ್ಟಿಗರು ಶೆಲ್​ಬಿ ಪರವಾಗಿ ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು ಜಿಮ್​ನಲ್ಲಿ ಒಂದು ಡ್ರೆಸ್​ಕೋಡ್ ಇರುತ್ತದೆ, ಅದನ್ನು ಪಾಲಿಸಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!

    ಮಹಿಳಾ ಪೊಲೀಸರಿಗೇ ಲೈಂಗಿಕ ಕಿರುಕುಳ ಕೊಟ್ಟ; ಮಾಸ್ಕ್ ಹಾಕಿಲ್ಲ ಎಂದು ತಡೆದಿದ್ದಕ್ಕೆ ಪೀಡಿಸಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts