blank

ಹಣದ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವೇ? ಹೌದು ಎಂದಾದರೆ ಹೀಗೆ ಮಾಡಿ… Money Problems

Money Problems

Money Problems : ಪತಿ ಮತ್ತು ಪತ್ನಿ ಪರಸ್ಪರ ಅರ್ಥ ಮಾಡಿಕೊಂಡು ಒಟ್ಟಿಗೆ ಸಾಗಿದರೆ ಜೀವನ ಪೂರ್ತಿ ನೆಮ್ಮದಿಯಿಂದ ಇರಬಹುದು. ಆದರೆ, ಇಬ್ಬರು ಕೆಲ ಸಣ್ಣ ವಿಷಯಗಳಿಗೂ ಆಗಾಗ ಜಗಳವಾಡುತ್ತಾರೆ. ಇವು ದೊಡ್ಡ ಸಮಸ್ಯೆಗಳಾಗುವ ಮುನ್ನವೇ ಕಾಲಕಾಲಕ್ಕೆ ಪರಿಹರಿಸಬೇಕು.

ಅನೇಕ ಗಂಡ-ಹೆಂಡತಿಯರು ಹಣದ ವಿಚಾರಕ್ಕೆ ಹೆಚ್ಚು ಜಗಳವಾಡುತ್ತಾರೆ. ಬಹುತೇಕರ ಕುಟುಂಬಗಳಲ್ಲಿನ ಜಗಳದ ಮೂಲ ಹಣವೇ ಆಗಿರುತ್ತದೆ. ಹೀಗಾಗಿ ಹಣದ ವಿಚಾರದಲ್ಲಿ ದಂಪತಿ ನಡುವೆ ಜಗಳ ಬಾರದಿರಲು ಇಬ್ಬರೂ ಶಾಂತವಾಗಿ ಹಣದ ಬಗ್ಗೆ ಮಾತನಾಡಬೇಕು. ಎಷ್ಟು ಆದಾಯ ಬರುತ್ತದೆ? ಯಾವುದಕ್ಕೆ ಬಳಸಬೇಕು? ಸಾಲದಂತಹ ವಿಷಯಗಳ ಬಗ್ಗೆ ಪರಸ್ಪರ ಮುಕ್ತವಾಗಿ ಮಾತನಾಡಬೇಕು. ಆಗ ಯಾವುದೇ ಜಗಳಗಳು ಉದ್ಭವಿಸುವುದಿಲ್ಲ.

ಇದನ್ನೂ ಓದಿ: ನನ್ನ ಪ್ರಕಾರ ತಂಡದಲ್ಲಿರಲು ಆತ ಅರ್ಹನೇ ಅಲ್ಲ! ಅಚ್ಚರಿಯ ಹೇಳಿಕೆ ನೀಡಿದ​ ಡೇವಿಡ್​ ವಾರ್ನರ್​ | David Warner

Husband and Wife

ಇನ್ನು ದಂಪತಿಗಳು ಪ್ರತಿ ತಿಂಗಳು, ಹಣದ ಬಗ್ಗೆ ಒಂದು ಬಜೆಟ್ ಮಾಡಿಕೊಳ್ಳಬೇಕು. ಎಷ್ಟು ಖರ್ಚಾಗುತ್ತದೆ? ಎಷ್ಟು ಉಳಿದಿದೆ? ಇನ್ನೇನು ಕೊಡಬೇಕು? ಈ ಎಲ್ಲ ವಿಷಯಗಳನ್ನು ಒಟ್ಟಾಗಿ ಯೋಜಿಸಬೇಕು. ಇದರಿಂದ ಪತಿ-ಪತ್ನಿಯ ನಡುವೆ ಯಾವುದೇ ಕಲಹಗಳು ಉಂಟಾಗುವುದಿಲ್ಲ.

ದಂಪತಿಗಳು ಬಜೆಟ್‌ನಲ್ಲಿ ತಮಗಾಗಿ ಸ್ವಲ್ಪ ಹಣವನ್ನು ಇಟ್ಟುಕೊಳ್ಳಬೇಕು. ನಿಮ್ಮ ಇಚ್ಛೆಯಂತೆ ನಿಮ್ಮ ಪ್ರತಿಯೊಂದು ಮಾಸಿಕ ವೆಚ್ಚಗಳಿಗೆ ಸ್ವಲ್ಪ ಮೊತ್ತವನ್ನು ಮೀಸಲಿಡಬೇಕು. ಆದರೆ, ಮೀಸಲಿಟ್ಟದ್ದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ನಷ್ಟ ಎದುರಿಸಬೇಕಾಗುತ್ತದೆ ಎಂಬುದು ನೆನಪಿನಲ್ಲಿರಲಿ.

ಪ್ರತಿ ತಿಂಗಳು ಸ್ವಲ್ಪ ಹಣವನ್ನು ಉಳಿಸಬೇಕು. ಹಣವನ್ನು ಉಳಿಸುವುದು ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವುದನ್ನು ತಡೆಯುತ್ತದೆ. ಹಣವು ನಿಮ್ಮನ್ನು ಭವಿಷ್ಯದ ಅಪಾಯಗಳಿಂದ ರಕ್ಷಿಸುತ್ತದೆ. ಹೀಗಾಗಿ ಜಂಟಿ ಖಾತೆಯನ್ನು ತೆರೆಯಿರಿ ಮತ್ತು ಅದರಲ್ಲಿ ಸ್ವಲ್ಪ ಹಣವನ್ನು ಹಾಕಿ. ಆರು ತಿಂಗಳು ಸಂಬಳ ಇಲ್ಲದಿದ್ದರೂ ನಿರ್ವಹಣೆ ಮಾಡುವಂತಿರಬೇಕು.

ಇದನ್ನೂ ಓದಿ: ವರದಕ್ಷಿಣೆ ಕಾಯ್ದೆ ದುರ್ಬಳಕೆ; ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಹಿನ್ನೆಲ, ಸುಪ್ರೀಂಕೋರ್ಟ್ ಕಳವಳ

Husband and Wife

ಇನ್ನು ನಿವೃತ್ತಿಯ ನಂತರ ಯಾರ ಮೇಲೂ ಅವಲಂಬಿತವಾಗದಂತೆ ಒಂದಿಷ್ಟು ಯೋಜನೆ ರೂಪಿಸಿಕೊಳ್ಳಬೇಕು. ನೀವು ಇಲ್ಲಿಯವರೆಗೆ ಎಷ್ಟು ಸಂಗ್ರಹಿಸಿದ್ದೀರಿ ಎಂಬುದನ್ನು ನೀವು ನಿಯಮಿತವಾಗಿ ಪರಿಶೀಲಿಸಬೇಕು. ಅದಕ್ಕೆ ಏನು ಮಾಡಬೇಕು ಎಂಬ ನಿರ್ಧಾರಕ್ಕೂ ಬರಬೇಕು. ಗಂಡ-ಹೆಂಡತಿ ಇಬ್ಬರೂ ಹಣದ ವಿಚಾರದಲ್ಲಿ ಕೂತು ಮಾತನಾಡಿದರೆ ಯಾವುದೇ ಸಮಸ್ಯೆಯೂ ಇರುವುದಿಲ್ಲ ಮತ್ತು ಜಗಳವೂ ಇರುವುದಿಲ್ಲ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ.

ಮಾಜಿ ಪತಿ ನಾಗಚೈತನ್ಯ ಬೆನ್ನಲ್ಲೇ 2ನೇ ಮದುವೆಗೆ ರೆಡಿಯಾದ ಸಮಂತಾ! ಸುಳಿವು ಬಿಟ್ಟುಕೊಟ್ಟ ಸೌತ್​ ಬ್ಯೂಟಿ | Samantha

ಬೇಕರಿಗಳಲ್ಲಿ ಈ ಸ್ವೀಟ್​ಗಳನ್ನು ಖರೀದಿಸುವ ಮುನ್ನ ಎಚ್ಚರ! ಕ್ಯಾನ್ಸರ್​ ಕೂಡ ಬರಬಹುದು | Bakery Sweets

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಸ್ಪೈಸಿ ಬಟರ್ ಕಿಚಡಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಪ್ರತಿ ಬಾರಿ ಮನೆಯಲ್ಲಿ ಸಿಂಪಲ್ ಕಿಚಡಿ ತಿಂದು ಬೇಜಾರಾಗಿದ್ಯಾ. ವಿಶೇಷ ರೀತಿಯ ಹೋಟೆಲ್​ ಸ್ಟೈಲ್​ ಟೇಸ್ಟಿ…

ತುಪ್ಪ ಸೇವಿಸಿದರೆ ಪಿರಿಯಡ್ಸ್​ ನೋವು ಇರುವುದಿಲ್ಲವೇ; ತಜ್ಞರು ಹೇಳೋದೇನು? | Health Tips

ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ನೋವು, ಉಬ್ಬುವುದು ಮತ್ತು ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು…

ಜಿಮ್​​ಗೆ ಹೋಗದೆ ಮನೆಯಲ್ಲೆ ಮಾಡಿ ಈ 3 ವ್ಯಾಯಾಮ; ಸ್ಲಿಮ್​ ಆಗಲು ಈ ಟಿಪ್ಸ್​​​ | Health Tips

ಸಿನಿಮಾ ನಟಿಯರನ್ನು ನೋಡಿ ನನಗೂ ಅವರಂತಹ ದೇಹಾಕೃತಿ ಇದ್ದಿದ್ದರೆ ಚೆನ್ನಾಗಿರುತಿತ್ತು ಎಂದು ಅನಿಸುತ್ತದೆಯೇ? ಹೌದು ಎಂದಾದರೆ…