Bakery Sweets : ಇಂದು ಬೇಕರಿ ತಿನಿಸುಗಳಿಗೆ ಭಾರಿ ಬೇಡಿಕೆ ಇದೆ. ಕೆಲ ಬೇಕರಿ ತಿನಿಸುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವಿಚಾರ ಗೊತ್ತಿದ್ದರೂ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಆಹಾರ ಸುರಕ್ಷತಾ ಇಲಾಖೆ, ಕೃತಕ ಬಣ್ಣವನ್ನು ನಿಷೇಧಿಸಿ, ಬಳಸುವವರಿಗೆ ಭಾರಿ ದಂಡ ವಿಧಿಸಿದ್ದರೂ ಅಂಗಡಿಗಳಲ್ಲಿ ಸರಿಯಾಗಿ ತಪಾಸಣೆ ನಡೆಯದ ಕಾರಣ ಅವುಗಳ ಬಳಕೆ ಬೇಕರಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಟಾರ್ಟ್ರಜಿನ್ ( Tartrazine ), ಸನ್ಸೆಟ್ ಯಲ್ಲೋ ( Sunset Yellow ) , ಅಮರಂಥ್ ( Amaranth ), ಅಲ್ಲುರಾ ರೆಡ್ ( Allura Red ), ಕ್ವಿನೋಲೈನ್ ಯಲ್ಲೋ ( Quinoline Yellow ), ಬ್ರಿಲ್ಲಿಯಂಟ್ ಬ್ಲೂ ( Brilliant Blue ) ಮತ್ತು ಇಂಡಿಗೋ ಕಾರ್ಮೈನ್ ( Indigo Carmine ) ಎಂಬುದು ಸಾಮಾನ್ಯ ಆಹಾರ ಬಣ್ಣಗಳು. ಇವುಗಳನ್ನು ಅನುಮತಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಈ ಕೃತಕ ಬಣ್ಣಗಳನ್ನು ಹೊಂದಿರುವ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಮಕ್ಕಳಲ್ಲಿ ವರ್ತನೆಯ ಅಸ್ವಸ್ಥತೆಗಳು, ಖಿನ್ನತೆ, ಆತಂಕ, ಅಸ್ತಮಾ ಮತ್ತು ಕ್ಯಾನ್ಸರ್ಗೆ ಕಾರಣವಾಗಬಹುದು.
ಇನ್ನು ಬೇಕರಿಗಳಲ್ಲಿ ವ್ಯಾಪಕವಾಗಿ ಮಾರಾಟವಾಗುವ ಆಹಾರ ಪದಾರ್ಥಗಳಲ್ಲಿ ಅನಧಿಕೃತ ಬಣ್ಣಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಈ ಸಂಬಂಧ ಆಹಾರ ಸುರಕ್ಷತಾ ಇಲಾಖೆ ನಡೆಸಿದ ತಪಾಸಣೆಯಲ್ಲಿ ಗಂಭೀರ ಆರೋಗ್ಯ ಪರಿಣಾಮ ಬೀರುವ ಟಾರ್ಟ್ರಜಿನ್ ಅನ್ನು ಹೆಚ್ಚಿನ ಬೇಕರಿಗಳಲ್ಲಿ ಬಳಸುತ್ತಿರುವುದು ಕಂಡುಬಂದಿದೆ. ಇದನ್ನು ಮಿಶ್ರಣಗಳಲ್ಲಿ ಹಳದಿ ಬಣ್ಣವಾಗಿ ಬಳಸಲಾಗುತ್ತದೆ.
ಶೇ. 88 ರಷ್ಟು ಸ್ಯಾಂಪಲ್ಗಳಲ್ಲಿ ಸಮಸ್ಯೆ
ಆಹಾರ ಸುರಕ್ಷತೆ ಇಲಾಖೆ ನಡೆಸಿದ ಅಧ್ಯಯನದಲ್ಲಿ 88 ಪ್ರತಿಶತದಷ್ಟು ಆಹಾರದ ಸ್ಯಾಂಪಲ್ಗಳಲ್ಲಿ ಅನುಮತಿ ನೀಡಿದ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸಿಂಥೆಟಿಕ್ ಬಣ್ಣಗಳನ್ನು ಬಳಸಿರುವುದನ್ನು ಪತ್ತೆಯಾಗಿದೆ. ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಭಾರತದಲ್ಲಿ ಎಂಟು ಕೃತಕ ಬಣ್ಣಗಳನ್ನು ಬಳಸಲು ಅನುಮತಿಸಲಾಗಿದೆ. ಆದರೆ, ಬಣ್ಣದೊಂದಿಗೆ ರುಚಿ ಹೆಚ್ಚಿಸಲು ಇತರೆ ರಾಸಾಯನಿಕಗಳನ್ನು ಸೇರಿಸಿರುವುದು ಕಂಡುಬಂದಿದೆ.
ಕೃತಕ ಬಣ್ಣವನ್ನು ಸಾಮಾನ್ಯವಾಗಿ ಬಳಸುವ ಆಹಾರ ಪದಾರ್ಥಗಳು
ಬಿರಿಯಾನಿ, ಕುಜಿಮಂತಿ, ಶವಯಾ, ಶವರ್ಮಾ, ಅಲ್ ಫಹಮ್, ಚಿಕನ್ ಫ್ರೈ, ಚಿಲ್ಲಿ ಚಿಕನ್, ಬೀಫ್ ಫ್ರೈ, ಫಿಶ್ ಫ್ರೈ, ಚಿಪ್ಸ್, ರಸ್ಕ್, ಬೇಬಿ ರಸ್ಕ್ ಮುಂತಾದ ಬೇಕರಿ ಉತ್ಪನ್ನಗಳು. ಟಾರ್ಟ್ರಾಜಿನ್ ಮತ್ತು ಕಾರ್ಮೋಸಿನ್‌ನಂತಹ ಕೃತಕ ಬಣ್ಣಗಳನ್ನು ಮಿಶ್ರಣ ಆಹಾರಗಳಿಗೆ ವ್ಯಾಪಕವಾಗಿ ಸೇರಿಸಲಾಗುತ್ತದೆ. ಲಡ್ಡು, ಜಿಲೇಬಿಯಂತಹ ವಸ್ತುಗಳಲ್ಲಿ 10 ಕೆಜಿಗೆ ಕೇವಲ ಒಂದು ಗ್ರಾಂ ಕೃತಕ ಬಣ್ಣ ಬಳಸಲು ಅವಕಾಶವಿದೆ. ಆದರೆ, ಅದಕ್ಕಿಂತಲೂ ಹೆಚ್ಚು ಬಣ್ಣವನ್ನು ಬಳಸಲಾಗುತ್ತಿದೆ. ಹೀಗಾಗಿ ಬೇಕರಿಗಳಲ್ಲಿ ಇಂತಹ ಸಿಹಿ ತಿನಿಸುಗಳನ್ನು ಖರೀದಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಲು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)
ಹಾವಿನ ಮೊಟ್ಟೆಗಳನ್ನು ತಿನ್ನಬಹುದೇ? ತಿಂದರೆ ಏನಾಗುತ್ತದೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ! Snake Eggs
ಡಬಲ್ ಚಿನ್ ಸಮಸ್ಯೆ ಕಾಡುತ್ತಿದೆಯೇ? ಅಧಿಕತೂಕವೊಂದೇ ಕಾರಣವಲ್ಲ, ತಪ್ಪದೇ ಈ ಸಲಹೆಗಳನ್ನು ಪಾಲಿಸಿ… Double Chin