blank

ಮಾಜಿ ಪತಿ ನಾಗಚೈತನ್ಯ ಬೆನ್ನಲ್ಲೇ 2ನೇ ಮದುವೆಗೆ ರೆಡಿಯಾದ ಸಮಂತಾ! ಸುಳಿವು ಬಿಟ್ಟುಕೊಟ್ಟ ಸೌತ್​ ಬ್ಯೂಟಿ | Samantha

Samantha

Samantha : ನಟಿ ಸಮಂತಾ ಬಗ್ಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಸಮಂತಾ ಓರ್ವ ಸ್ಟಾರ್​ ನಟಿ. ಘಟಾನುಘಟಿ ನಟರೊಂದಿಗೆ ನಟಿಸಿ, ಅನೇಕ ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಇದಿಷ್ಟೇ ಅಲ್ಲದೆ, ವೈಯಕ್ತಿಕ ಜೀವನದ ವಿಚಾರದಲ್ಲಿಯೂ ಸಾಕಷ್ಟು ಸುದ್ದಿಯಾಗಿದ್ದಾರೆ. ಸಮಂತಾ ಅವರು ನಟ ನಾಗಚೈತನ್ಯರನ್ನು ಪ್ರೀತಿಸಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಡಿವೋರ್ಸ್​ ಘೋಷಣೆ ಮಾಡುವ ಮೂಲಕ ಭಾರಿ ಸುದ್ದಿಯಾದರು.

ತಾಜಾ ಸಂಗತಿ ಏನೆಂದರೆ, ಸಮಂತಾ ಅವರು ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗಷ್ಟೇ ಮಾಜಿ ಪತಿ ನಾಗಚೈತನ್ಯ ಅವರು ನಟಿ ಶೋಭಿತಾ ಧೂಳಿಪಲ ಅವರನ್ನು ವರಿಸಿದರು. ಇಬ್ಬರ ಮದುವೆಗೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಇದರ ನಡುವೆ ಸಮಂತಾ ಅವರು ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿರುವ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದ್ದು, ಎರಡನೇ ಮದುವೆಯಾಗುವ ಸುಳಿವನ್ನು ಸಮಂತಾ ನೀಡಿದ್ದಾರೆ ಎನ್ನುತ್ತಿದ್ದಾರೆ.

ಅಂದಹಾಗೆ ಸಮಂತಾ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಾಶಿಚಕ್ರ ಚಿಹ್ನೆಗಳಾದ ವೃಷಭ, ಕನ್ಯಾ ಮತ್ತು ಮಕರ ರಾಶಿಯ 2025ನೇ ವರ್ಷದ ಭವಿಷ್ಯವಿದೆ. ಅದರ ಪ್ರಕಾರ, ಈ ಮೂರು ರಾಶಿಯವರಿಗೆ 2025 ಉತ್ತಮ ವರ್ಷವಾಗಲಿದೆ. ಕಲೆಯಲ್ಲಿ ಪ್ರಗತಿ, ಆರ್ಥಿಕವಾಗಿ ಸ್ಥಿರತೆ, ಪ್ರೀತಿಯ ಪಾಲುದಾರ ಅಂದರೆ, ಒಳ್ಳೆಯ ಸಂಗಾತಿ ಮತ್ತು ದೊಡ್ಡ ಗುರಿಗಳ ಪೂರ್ಣಗೊಳಿಸುವಿಕೆ, ಬಹು ಆದಾಯದ ಮೂಲಗಳನ್ನು ಈ ರಾಶಿಯವರು ನಿರೀಕ್ಷೆ ಮಾಡಬಹುದಾಗಿದೆ. ಅಲ್ಲದೆ, ಗರ್ಭಿಣಿಯಾಗಲು ಪ್ರಯತ್ನಿಸುವವರಿಗೂ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದಾಗಿದೆ.

Samantha 1

ಪೋಸ್ಟ್​ ಹಂಚಿಕೊಂಡಿರುವ ಸಮಂತಾ ಮೇಲೆ ‘AMEN’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಭವಿಷ್ಯವಾಣಿಗಳು ತನ್ನ ಜೀವನದಲ್ಲಿ ನಿಜವಾಗಲಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇದರ ಮುಂದಿನ ಸ್ಟೋರಿಯಲ್ಲಿ, ಕೆಲವು ವರ್ಷಗಳು ಗೆಲ್ಲತ್ತೀರಿ, ಕೆಲವು ವರ್ಷಗಳು ವ್ಯಕ್ತಿತ್ವವನ್ನು ನಿರ್ಮಿಸುತ್ತೀರಿ ಎಂಬ ಸ್ಟೀವ್​ ಜಾಬ್ಸ್​ ಅವರ ಕೋಟ್ಸ್​ ಅನ್ನು ಪೋಸ್ಟ್​ ಮಾಡಿದ್ದಾರೆ. ತನ್ನ ಮಾಜಿ ಪತಿ ನಾಗಚೈತನ್ಯ, ನಟಿ ಶೋಭಿತಾ ಅವರನ್ನು ಮದುವೆಯಾದ ಬಳಿಕ ಸಮಂತಾ ಅವರು ಈ ನಿಗೂಢ ಸಂದೇಶಗಳನ್ನು ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಡಬಲ್​​ ಚಿನ್​ ಸಮಸ್ಯೆ ಕಾಡುತ್ತಿದೆಯೇ? ಅಧಿಕತೂಕವೊಂದೇ ಕಾರಣವಲ್ಲ, ತಪ್ಪದೇ ಈ ಸಲಹೆಗಳನ್ನು ಪಾಲಿಸಿ… Double Chin

Samantha 2

ಇನ್ನು ಸಮಂತಾ ಅವರು ತಾಯಿಯಾಗುವ ಕನಸನ್ನು ಹೊಂದಿದ್ದಾರೆಂದು ಹೇಳಲಾಗಿದೆ. ನಾಗಚೈತನ್ಯರಿಂದ ಬೇರ್ಪಡುವ ಮೂರು ತಿಂಗಳ ಮುಂಚೆಯೇ, ಮಗು ಮಾಡಿಕೊಳ್ಳುವ ಯೋಚನೆ ಮಾಡಿದ್ದರು. ಅಷ್ಟರಲ್ಲಿ ಅವರ ಜೀವನ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ವೈವಾಹಿಕ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ವಿಚ್ಛೇದನ ಪದೆದರೂ ತಾಯಿಯಾಗಬೇಕೆಂಬ ಅವಳ ಆಸೆ ಬಲವಾಗಿ ಉಳಿದಿದೆ. ಹೀಗಾಗಿ ಎರಡನೇ ಮದುವೆಗೆ ಸಮಂತಾ ರೆಡಿಯಾಗಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಸುದೀರ್ಘ ಡೇಟಿಂಗ್​ ಬಳಿಕ 2017ರಲ್ಲಿ ಸಮಂತಾ ಮತ್ತು ನಾಗಚೈತನ್ಯ ವಿವಾಹವಾದರು. ಸಮಂತಾ ಕೂಡ ಪತಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಅಭಿಮಾನಿಗಳಿಂದ ಆದರ್ಶ ದಂಪತಿಗಳೆಂದು ಪರಿಗಣಿಸಲ್ಪಟ್ಟ ಸಮಂತಾ ಮತ್ತು ನಾಗಚೈತನ್ಯ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಡಿವೋರ್ಸ್​ ಘೋಷಣೆ ಮಾಡಿದರು. 2021ರಲ್ಲಿ ವಿಚ್ಛೇದನ ಪಡೆದ ನಂತರ, ಸಮಂತಾ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತ ನಾಗಚೈತನ್ಯ ಡಿಸೆಂಬರ್​ 4ರಂದು ಶೋಭಿತಾ ಅವರನ್ನು ಮದುವೆಯಾಗಿದ್ದಾರೆ. (ಏಜೆನ್ಸೀಸ್​)

ಕೊನೆಗೂ ಬಯಲಾಯ್ತು ಡಿವೋರ್ಸ್​ ಕಾರಣ: ನಾಗಚೈತನ್ಯ 2ನೇ ಮದ್ವೆ ಬೆನ್ನಲ್ಲೇ ವರ್ಷಗಳ ಪ್ರಶ್ನೆಗೆ ಸಿಕ್ತು ಉತ್ತರ! Naga Chaitanya

30 ವರ್ಷಗಳ ಬಳಿಕ ಶನಿ-ಬುಧ ಗ್ರಹ ಸಂಯೋಗ… ಈ 3 ರಾಶಿಯವರಿಗೆ 2025ರಲ್ಲಿ ಅದೃಷ್ಟವೋ ಅದೃಷ್ಟ! HOROSCOPE 2025

ತಡವಾಗಿ ಮದುವೆಯಾಗುವುದರಿಂದ ಎಷ್ಟೆಲ್ಲ ಲಾಭಗಳಿವೆ ಅನ್ನೋದು ನಿಮಗೆ ಗೊತ್ತಾ? Late Marriage

Share This Article

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…

ಹಾಗಲಕಾಯಿಯಲ್ಲಿನ ಕಹಿ ತೆಗೆಯುವುದೇಗೆ ಎಂದು ಆಲೋಚಿಸುತ್ತಿದ್ದೀರಾ; ನಿಮಗಾಗಿ ಈ ಸಿಂಪಲ್​ ಟ್ರಿಕ್ಸ್​ ​ | Health Tips

ಚಳಿಗಾಲದಲ್ಲಿ ಮಂಜಿನಿಂದಾಗಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಇದರಿಂದ ಜನರು ಹಾಗಲಕಾಯಿಯ ರುಚಿ ನೋಡುವುದಿಲ್ಲ. ಏಕೆಂದರೆ…