ತಡವಾಗಿ ಮದುವೆಯಾಗುವುದರಿಂದ ಎಷ್ಟೆಲ್ಲ ಲಾಭಗಳಿವೆ ಅನ್ನೋದು ನಿಮಗೆ ಗೊತ್ತಾ? Late Marriage

Late Marriage
Published on

Late Marriage : ಯಾವಾಗ ಮದುವೆಯಾಗಬೇಕು ಎಂಬುದು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರ. ಆದರೆ, ಒಂದು ವಯಸ್ಸಿಗೆ ಬಂದ ಮೇಲೆ ಮನೆಯವರು, ಸಂಬಂಧಿಕರು, ಸ್ನೇಹಿತರು ಮದುವೆಯಾಗುವಂತೆ ಒತ್ತಡ ಹೇರುತ್ತಾರೆ. ಇದು ಸಾಮಾನ್ಯವಾದ ವಿಷಯವೂ ಹೌದು. ಈ ಒತ್ತಡದಿಂದ ಅನೇಕರು ಬೇಗನೆ ಮದುವೆಯಾಗುತ್ತಾರೆ. ಇನ್ನು ಕೆಲವರು ತಡವಾಗಿ ಮದುವೆಯಾಗುವುದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು ಎಂಬ ಭಯದಿಂದಲೇ ಬೇಗನೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಆದರೆ, ತಡವಾಗಿ ಮದುವೆಯಾಗುವುದರಿಂದಲೂ ಅನೇಕ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

ಮದುವೆ ಎಂಬುದು ಸಾಮಾನ್ಯ ಸಂಗತಿಯೇನಲ್ಲ. ಇದು ಜೀವನದ ಮಹತ್ವದ ಘಟ್ಟ. ಮದುವೆಯಾದ ನಂತರ ನಿಭಾಯಿಸಲು ಅನೇಕ ಜವಾಬ್ದಾರಿಗಳಿವೆ. ಆದರೆ, ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವುದರಿಂದ ಜವಾಬ್ದಾರಿ ಹೆಚ್ಚುತ್ತದೆ. ಬೇಗ ಮದುವೆಯಾದಾಗ ಒಬ್ಬ ವ್ಯಕ್ತಿಯು ತನ್ನ ಖರ್ಚಿಗಾಗಿ ಬೇರೆಯವರ ಮೇಲೆ ಆರ್ಥಿಕವಾಗಿ ಅವಲಂಬಿತನಾಗಬೇಕಾಗುತ್ತದೆ. ಹೀಗಾಗಿ ಮದುವೆಗೂ ಮುನ್ನ ಆರ್ಥಿಕವಾಗಿ ಸದೃಢವಾಗಿರುವುದು ಅತ್ಯಗತ್ಯ. ಮದುವೆಯಾದ ನಂತರ ಹಣಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗುವುದು ಒಳ್ಳೆಯದಲ್ಲ. ತಡವಾಗಿ ಮದುವೆಯಾದರೆ ಈ ಸಮಸ್ಯೆ ಬರುವುದಿಲ್ಲ.

Marriage Cancel

ಇನ್ನು ತಡವಾಗಿ ಮದುವೆಯಾಗುವುದರ ಲಾಭವೇನೆಂದರೆ ನಿಮ್ಮಲ್ಲಿ ಪ್ರಬುದ್ಧತೆ ಬೆಳೆದಿರುತ್ತದೆ. ಮೆಚ್ಯೂರಿಟಿಗೂ ವಯಸ್ಸಿಗೂ ಸಂಬಂಧವಿಲ್ಲವಾದರೂ ವರ್ಷದಿಂದ ವರ್ಷಕ್ಕೆ ವ್ಯಕ್ತಿಯಲ್ಲಿ ಪ್ರಬುದ್ಧತೆ ಹೆಚ್ಚಾಗುತ್ತದೆ. ಓದುವಾಗ ಇದ್ದ ನಿಮ್ಮ ವರ್ತನೆಗೂ ಉದ್ಯೋಗದ ನಂತರದ ನಿಮ್ಮ ನಡವಳಿಕೆಯಲ್ಲಿ ತುಂಬಾ ಭಿನ್ನವಾಗಿರುತ್ತದೆ. ಸಮಾಜ, ಜೀವನ ಮತ್ತು ಸಂಬಂಧಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಪಡೆದ ನಂತರ ನೀವು ಮದುವೆಯಾದರೆ, ವಾಸ್ತವಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಬಹುದು. ನಿಮ್ಮ ಮತ್ತು ನಿಮ್ಮ ಸಂಗಾತಿಯ ಅಗತ್ಯತೆಗಳು ಮತ್ತು ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಪತಿ ಪತ್ನಿಯರ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಇದು ಇಬ್ಬರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ.

ಚಿಕ್ಕವಯಸ್ಸಿನಲ್ಲಿ ಮದುವೆಯಾದ್ರೂ ಅಥವಾ ಮನೆಯವರ ಬಲವಂತಕ್ಕೆ ಮದುವೆಯಾದರೂ ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏನನ್ನಾದರೂ ಮಾಡಲು ಬಯಸಿರುತ್ತಾರೆ. ಕೆಲಸ, ಪ್ರವಾಸ, ಹೀಗೆ ಏನೇನೋ ಪ್ಲಾನ್ ಮಾಡಿಕೊಂಡಿರುತ್ತಾರೆ. ಮದುವೆ ತಡವಾಗಿ ನಡೆದರೆ ಈ ಆಸೆಗಳನ್ನು ಈಡೇರಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಏನೇ ಆಸೆ ಇದ್ದರೂ ಮದುವೆಗೆ ಮುಂಚಿತವಾಗಿ ಪೂರೈಸುವುದು ಉತ್ತಮ. ಏಕೆಂದೆರೆ, ಮದುವೆಯ ನಂತರ ಜೀವನ ಹೇಗಿರುತ್ತದೆ ಎಂಬುದು ತಿಳಿದಿರುವುದಿಲ್ಲ.

ಇನ್ನು ಮದುವೆಯ ನಂತರವೂ ಗಂಡ-ಹೆಂಡತಿ ಒಟ್ಟಿಗೆ ಪ್ರಯಾಣಿಸಬಹುದು. ಆದಾಗ್ಯೂ, ಮದುವೆಗೆ ಮೊದಲೇ ಪ್ರವಾಸಗಳನ್ನು ಮಾಡಲು ಬಯಸಿದ್ದರೆ, ಅದನ್ನು ಈಡೇರಿಸಿಕೊಳ್ಳಬೇಕು. ಏಕೆಂದರೆ, ಸಾಕಷ್ಟು ಸಮಯವಿರುತ್ತದೆ. ಮದುವೆಯಾದ ಮೇಲೆ ಗಂಡ ಹೆಂಡತಿ ಜೊತೆಯಾಗಿ ಹೋಗುತ್ತೇವೆ ಅಂದುಕೊಂಡು ಎಲ್ಲೋ ಹೋಗದೆ ಸುಮ್ಮನೇ ಇರಬಾರದು. ಏಕೆಂದರೆ, ಮದುವೆಯ ನಂತರ ಹೇಗಿರುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಮದುವೆಗೆ ಮುಂಚೆ ಎಷ್ಟು ಬೇಕೋ ಅಷ್ಟು ಎಂಜಾಯ್ ಮಾಡಿ.

Child marriage

ಇನ್ನು ತರಾತುರಿಯಲ್ಲಿ ಮದುವೆಯಾಗುವುದರಿಂದ ಉತ್ತಮ ವೃತ್ತಿಜೀವನ ಪಡೆಯಲು ಸಾಧ್ಯವಾಗದಿರಬಹುದು. ಏಕೆಂದರೆ, ನಿಮಗೆ ಹೆಚ್ಚಿನ ಜವಾಬ್ದಾರಿಗಳಿರುತ್ತವೆ. ಆದ್ದರಿಂದ ನೀವು ಆರ್ಥಿಕವಾಗಿ ಸದೃಢವಾದಾಗ ಮದುವೆಯಾಗಿ. ಹೀಗೆ ಮಾಡಿದರೆ ಮದುವೆಯ ನಂತರ ನಿಮಗೆ ಹಣದ ಸಮಸ್ಯೆಗಳು ಬರುವುದಿಲ್ಲ. ಇನ್ನು ನಿರ್ದಿಷ್ಟ ವಯಸ್ಸಿನ ನಂತರ ಮದುವೆಯಾದರೆ, ಪ್ರಬುದ್ಧತೆ ಹೆಚ್ಚಾಗುತ್ತದೆ. ಧನಾತ್ಮಕವಾಗಿ ಯೋಚಿಸುವುದು ಹೇಗೆ ಎಂದು ನಿಮಗೆ ತಿಳಿದಿರುತ್ತದೆ. ಏನು ಮಾಡಬಾರದು ಮತ್ತು ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರುತ್ತದೆ. ಇದು ಸಂಬಂಧದಲ್ಲಿ ಪರಸ್ಪರ ತಿಳುವಳಿಕೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಅಲ್ಲದೆ, ಇಬ್ಬರ ನಡುವಿನ ಘರ್ಷಣೆಯನ್ನು ತಡೆಯುತ್ತದೆ.

ತಡವಾದ ಮದುವೆಯು ಅನೇಕ ಅಂಶಗಳಲ್ಲಿ ತಿಳುವಳಿಕೆಗೆ ಕಾರಣವಾಗುತ್ತದೆ. ಇದು ಪ್ರಬುದ್ಧತೆ ಮತ್ತು ಆರ್ಥಿಕ ಸ್ಥಿರತೆಯನ್ನು ಸಹ ತರುತ್ತದೆ. ಅಂತಹವರು ತಂದೆ ತಾಯಿಯಾದರೆ ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಲು ಸಾಧ್ಯವಾಗುತ್ತದೆ. ಮಗುವಿನ ಪ್ರತಿಯೊಂದು ಅಗತ್ಯವನ್ನು ಪೂರೈಸುವುದು ಸುಲಭವಾಗುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net