ನನ್ನ ಪ್ರಕಾರ ತಂಡದಲ್ಲಿರಲು ಆತ ಅರ್ಹನೇ ಅಲ್ಲ! ಅಚ್ಚರಿಯ ಹೇಳಿಕೆ ನೀಡಿದ​ ಡೇವಿಡ್​ ವಾರ್ನರ್​ | David Warner

David Warner

David Warner : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ತಮ್ಮ ತಂಡದ ಸಹ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮ್ಯಾಕ್ಸ್‌ವೆಲ್ ಟೆಸ್ಟ್ ತಂಡದಲ್ಲಿರಲು ಅರ್ಹರಲ್ಲ ಎಂದಿದ್ದಾರೆ. ಅಂದಹಾಗೆ ಮ್ಯಾಕ್ಸಿ, ಆಸ್ಟ್ರೇಲಿಯಾ ಪರ ಟೆಸ್ಟ್ ರಿಂಗ್‌ನಲ್ಲಿ ಕಾಣಿಸಿಕೊಂಡು ಸುಮಾರು ಏಳು ವರ್ಷಗಳು ಕಳೆದಿವೆ.

2017 ರಲ್ಲಿ ಬಾಂಗ್ಲಾದೇಶ ಪ್ರವಾಸದ ಭಾಗವಾಗಿ ಮಾಕ್ಸಿ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಚಿತ್ತಗಾಂಗ್​ನಲ್ಲಿ ನಡೆದ ಪಂದ್ಯದಲ್ಲಿ, 36 ವರ್ಷದ ಮ್ಯಾಕ್ಸಿ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 28 ಮತ್ತು 25* ರನ್ ಗಳಿಸಿದರು. 2013ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಮ್ಯಾಕ್ಸಿ​​, ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ ಒಟ್ಟು ಏಳು ಟೆಸ್ಟ್‌ಗಳನ್ನು ಆಡಿದ್ದಾರೆ. ಇದರಲ್ಲಿ ಟೀಮ್​ ಇಂಡಿಯಾ ವಿರುದ್ಧ ನಾಲ್ಕು ಪಂದ್ಯಗಳು, ಪಾಕಿಸ್ತಾನ ವಿರುದ್ಧ ಒಂದು ಮತ್ತು ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳು ಸೇರಿವೆ. ಒಟ್ಟಾರೆಯಾಗಿ, ಮ್ಯಾಕ್ಸಿ 339 ರನ್ ಗಳಿಸಿ ಎಂಟು ವಿಕೆಟ್​​ಗಳನ್ನು ಮಾತ್ರ ಪಡೆದಿದ್ದಾರೆ. ಇದೀಗ ಏಕದಿನ ಹಾಗೂ ಟಿ20ಯಲ್ಲಿ ಮಿಂಚುತ್ತಿರುವ ಈ ಆಲ್ ರೌಂಡರ್, ಟೆಸ್ಟ್​ನಲ್ಲೂ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಮುಂದಿನ ವರ್ಷ ಜನವರಿಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾದ ಟೆಸ್ಟ್ ತಂಡದಲ್ಲಿ ಸೇರ್ಪಡೆಗೊಳ್ಳುವ ಬಯಕೆಯನ್ನು ಮ್ಯಾಕ್ಸಿ ಇತ್ತೀಚೆಗೆ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ದೇಶೀಯ ಟೂರ್ನಿಯ ತಂಡದಲ್ಲಿ ಸ್ಥಾನ ಸಿಗದಿದ್ದಾಗ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ನಿರೀಕ್ಷಿಸುವುದು ಸರಿಯಲ್ಲ! ಕ್ಲಬ್ ಕ್ರಿಕೆಟ್ ಆಡಿದರೆ ಮತ್ತು ಅಲ್ಲಿ ತನ್ನನ್ನು ತಾನು ಸಾಬೀತುಪಡಿಸಿದರೆ ಮಾತ್ರ ಅವನಿಗೆ (ಮ್ಯಾಕ್ಸ್​ವೆಲ್​) ಖಂಡಿತವಾಗಿಯೂ ಟೆಸ್ಟ್ ಕ್ರಿಕೆಟ್ ತಂಡದಿಂದ ಕರೆ ಬರುತ್ತದೆ. ಆದರೆ, ಮ್ಯಾಕ್ಸಿ ಆ ರೀತಿ ಏನನ್ನೂ ಮಾಡುತ್ತಿಲ್ಲ. ಹಾಗಾಗಿ ನನ್ನ ಅಭಿಪ್ರಾಯದಲ್ಲಿ ಮ್ಯಾಕ್ಸಿಗೆ ಟೆಸ್ಟ್​ ತಂಡದಲ್ಲಿ ಸ್ಥಾನ ಸಿಗುವ ಅರ್ಹತೆ ಇಲ್ಲ ಎಂದು ವಾರ್ನರ್​ ಹೇಳಿದರು.

ಇದನ್ನೂ ಓದಿ: Divorce ನೀಡದೆ ಎರಡನೇ ಮದುವೆಗೆ ಸಜ್ಜಾದ ಭೂಪ; ವಿಚಾರ ತಿಳಿದು ಮೊದಲ ಪತ್ನಿ ಮಾಡಿದ್ದೇನು ಗೊತ್ತಾ?

ಅಂದಹಾಗೆ ಮ್ಯಾಕ್ಸ್‌ವೆಲ್ ಕಳೆದ ವರ್ಷ ಇಂಗ್ಲಿಷ್ ಕೌಂಟಿಗಳ ಭಾಗವಾಗಿ ವಾರ್ವಿಕ್‌ಷೈರ್‌ಗಾಗಿ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ನಂತರ, ಅವರು ದೇಶೀಯ ಪಂದ್ಯಾವಳಿ ಶೆಫೀಲ್ಡ್ ಶೀಲ್ಡ್​ನಲ್ಲಿ ವಿಕ್ಟೋರಿಯಾ ಪರ ಆಡಬೇಕಿತ್ತು. ಆದಾಗ್ಯೂ, ಪಾಕಿಸ್ತಾನ ವಿರುದ್ಧದ ಇತ್ತೀಚಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯ ಸಂದರ್ಭದಲ್ಲಿ, ಮ್ಯಾಕ್ಸ್‌ವೆಲ್ ತೊಡೆಯ ಸ್ನಾಯುವಿನ ಗಾಯದಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಅವರು ದೇಶೀಯ ಪಂದ್ಯಾವಳಿಯಿಂದ ಹಿಂದೆ ಸರಿದರು. ಈ ಹಿನ್ನೆಲೆಯಲ್ಲಿ ಡೇವಿಡ್ ವಾರ್ನರ್ ಅವರು ಕೋಡ್ ಸ್ಫೋರ್ಟ್ಸ್ ಶೋನಲ್ಲಿ ಈ ಕಾಮೆಂಟ್ ಮಾಡಿದ್ದಾರೆ.

ಇದೇ ಸಂದರರ್ಭದಲ್ಲಿ ಟೀಮ್​​ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಬಿಜಿಯಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂಗವಾಗಿ ಭಾರತ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ಕಾಂಗರೂ ತಂಡ ಪ್ರಸ್ತುತ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಮ್​ ಇಂಡಿಯಾ ವಿರುದ್ಧ ಸೋತಿದ್ದ ಆಸೀಸ್, ಅಡಿಲೇಡ್‌ನಲ್ಲಿ ನಡೆದ ಪಿಂಕ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದೆ. ಡಿಸೆಂಬರ್ 14 ರಿಂದ ಉಭಯ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕೆ ಬ್ರಿಸ್ಬೇನ್‌ನ ‘ದಿ ಗಬ್ಬಾ’ ಮೈದಾನ ವೇದಿಕೆಯಾಗಿದೆ. (ಏಜೆನ್ಸೀಸ್​)

ಬೇಕರಿಗಳಲ್ಲಿ ಈ ಸ್ವೀಟ್​ಗಳನ್ನು ಖರೀದಿಸುವ ಮುನ್ನ ಎಚ್ಚರ! ಕ್ಯಾನ್ಸರ್​ ಕೂಡ ಬರಬಹುದು | Bakery Sweets

ಮಾಜಿ ಪತಿ ನಾಗಚೈತನ್ಯ ಬೆನ್ನಲ್ಲೇ 2ನೇ ಮದುವೆಗೆ ರೆಡಿಯಾದ ಸಮಂತಾ! ಸುಳಿವು ಬಿಟ್ಟುಕೊಟ್ಟ ಸೌತ್​ ಬ್ಯೂಟಿ | Samantha

ತಡವಾಗಿ ಮದುವೆಯಾಗುವುದರಿಂದ ಎಷ್ಟೆಲ್ಲ ಲಾಭಗಳಿವೆ ಅನ್ನೋದು ನಿಮಗೆ ಗೊತ್ತಾ? Late Marriage

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …