ನವದೆಹಲಿ: ಇರಾನಿನ ಚೆಸ್ ಆಟಗಾರ್ತಿ ಜನವರಿಯಲ್ಲಿ ಹಿಜಾಬ್ ಇಲ್ಲದೆ ಸ್ಪರ್ಧಿಸಿದ ನಂತರ ಅವರ ವಿರುದ್ಧ ಅವರದ್ದೇ ದೇಶದಲ್ಲಿ ವಾರೆಂಟ್ ಜಾರಿ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಪೇನ್‌ಗೆ ತೆರಳಿದ್ದ ಅವರಿಗೆ ಇದೀಗ ಪೌರತ್ವವನ್ನು ನೀಡಲಾಗಿದೆ ಎಂದು ಸ್ಪೇನ್ ಬುಧವಾರ ಅಧಿಕೃತವಾಗಿ ತಿಳಿಸಿದೆ.
ಇದನ್ನೂ ಓದಿ: ರೋಚಕ ಕಾದಾಟದಲ್ಲಿ ಇರಾನ್ಗೆ ಸೋಲುಣಿಸಿದ ಭಾರತ: 8ನೇ ಬಾರಿ ಚಾಂಪಿಯನ್ ಆದ ಕಬಡ್ಡಿ ತಂಡ
ಸಾರಾ ಖಾಡೆಮ್ ಎಂದು ಪ್ರಸಿದ್ಧರಾಗಿರುವ ಸಾರಾ ಸಾದತ್ ಖಡೆಮಲ್ಶರೀಹ್ ಅವರು ಡಿಸೆಂಬರ್ ಅಂತ್ಯದಲ್ಲಿ ಕಝಾಕಿಸ್ತಾನ್‌ನಲ್ಲಿ ನಡೆದ FIDE ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ಗಳಲ್ಲಿ ಇರಾನ್‌ನಲ್ಲಿ ಕಟ್ಟುನಿಟ್ಟಾಗಿರುವ ಹಿಜಾಬ್ ಧರಿಸದೇ ಭಾಗವಹಿಸಿದ್ದರು.
22 ವರ್ಷದ ಇರಾನ್-ಕುರ್ದಿಶ್ ಮಹಿಳೆ ಮಹ್ಸಾ ಅಮಿನಿ ಸೆಪ್ಟೆಂಬರ್ ಮಧ್ಯದಲ್ಲಿ ನೈತಿಕ ಪೋಲೀಸರ ವಶದಲ್ಲಿ ಸಾವಿಗೀಡಾದಾಗ ಇರಾನ್‌ನಲ್ಲಿ ಅಶಾಂತಯಿ ಉಂಟಾಗಿತ್ತು. ಈ ಸಮಯದಲ್ಲಿ ಕಡ್ಡಾಯ ಹಿಜಾಬ್-ಧರಿಸುವಿಕೆಯನ್ನು ಜಾರಿಗೊಳಿಸುವ ಕಾನೂನುಗಳು ಮುನ್ನೆಲೆಗೆ ಬಂದಿದ್ದವು.
ಇದನ್ನೂ ಓದಿ: ನೂತನ ಹೈಪರ್‌ಸಾನಿಕ್ ಕ್ಷಿಪಣಿ ಪ್ರದರ್ಶಿಸಿದ ಇರಾನ್: ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಳವಳ
26 ವರ್ಷದ ಆಟಘಾರ್ತಿ ಅಂತರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತನ್ನ ದೇಶದ ನಾಯಕತ್ವದ ವಿರುದ್ಧದ ಪ್ರತಿಭಟನಾ ಚಳವಳಿಯನ್ನು ಬೆಂಬಲಿಸಿದ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಸರ್ಕಾರ ರಚನೆ ಇಂದು?; ಅಖುಂಡ್ಝದಾ ಸುಪ್ರೀಂ ಲೀಡರ್, ಇರಾನ್ ಮಾದರಿ ಆಡಳಿತಕ್ಕೆ ಒಲವು
ಖಾಡೆಮ್ ಅವರ ಪ್ರಕರಣದ “ವಿಶೇಷ ಸಂದರ್ಭ”ಗಳನ್ನು ಗಣನೆಗೆ ತೆಗೆದುಕೊಂಡು ಮಂಗಳವಾರದಂದು ಪೌರತ್ವವನ್ನು ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಸ್ಪೇನ್‌ನ ಅಧಿಕೃತ ಗೆಜೆಟ್ ಹೇಳಿದೆ. (ಏಜೆನ್ಸೀಸ್)