More

    ಅವಿಶ್ವಾಸ ಗೊತ್ತುವಳಿ ಅಂಗೀಕಾರ ಆಗಿದ್ದು ಪ್ರತಿಪಕ್ಷಗಳು ಕಲಾಪ ನಡೆಯಲು ಬಿಡಬೇಕು: ಅಸಾದುದ್ದೀನ್ ಓವೈಸಿ

    ನವದೆಹಲಿ: AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ಲೋಕಸಭೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಉದ್ದೇಶಿಸಿ ಮಾತನಾಡಿದ್ದು, “ಸಂಸತ್ತಿನಲ್ಲಿ ಸುವ್ಯವಸ್ಥೆಗೆ ಮರಳಲು ಕರೆ ನೀಡಿದರು. ಮಣಿಪುರದಲ್ಲಿ ಮೂರು ತಿಂಗಳ ಕಾಲ ನಡೆದ ಹಿಂಸಾಚಾರದ ಬಗ್ಗೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟಿನಿಂದಾಗಿ ಉಭಯ ಸದನಗಳ ಕಲಾಪವನ್ನು ಮುಂದೂಡಿದ ಸಂದರ್ಭದಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.

    ಇದನ್ನೂ ಓದಿ: ಬುಲ್ಡೋಜರ್ ಎದುರು ನಡೆಯದ ಆಟ; ಅಬ್ಬರಿಸಲು ಹೋಗಿ ಮಕಾಡೆ ಮಲಗಿದ ಓವೈಸಿ!

    ಅಸಾದುದ್ದೀನ್ ಓವೈಸಿ, “ಪ್ರತಿಪಕ್ಷಗಳು ಸಂಸತ್ತಿನ ಕಾರ್ಯನಿರ್ವಹಣೆಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ” ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು. ಒಂದು ದಿನದ ಹಿಂದೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯ ಅಂಗೀಕಾರದ ನಂತರ ಕ್ರಮಕ್ಕೆ ಮರಳಬೇಕು ಎಂದು ಅವರು ಪ್ರತಿಪಾದಿಸಿದರು.

    ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಓವೈಸಿ! ‘ನಮಗೆ ಕಾಂಗ್ರೆಸ್​ನ ಸರ್ಟಿಫಿಕೇಟ್​ ಬೇಡ’ ಎಂದ AIMIM ಅಧ್ಯಕ್ಷ…

    ಪ್ರತಿಪಕ್ಷಗಳ ತಂತ್ರವನ್ನು ಪ್ರಶ್ನಿಸಿದ ಅವರು, ಈಗ ಅವಿಶ್ವಾಸ ಅಂಗೀಕಾರವಾಗಿದ್ದು ನ್ಯಾಯಸಮ್ಮತವಾಗಿದೆ. ಅವಿಶ್ವಾಸ ಗೊತ್ತುವಳಿ ಅಂಗೀಕಾರ ಆದ ನಂತರ ಪ್ರತಿಪಕ್ಷದವರು ಸದನ ನಡೆಸಲು ಅವಕಾಶ ನೀಡಬೇಕು. ಅವರು ಯಾಕೆ ಹಾಗೆ ಮಾಡುತ್ತಿಲ್ಲ ಎನ್ನವ ಪ್ರಶ್ನೆಗೆ ವಿರೋಧ ಪಕ್ಷಗಳು ಉತ್ತರಿಸಬೇಕು.

    ಇದನ್ನೂ ಓದಿ: ‘ಮುಸ್ಲಿಂ ಮತದಾರರು ನಿಮ್ಮ ಆಸ್ತಿ ಅಲ್ಲ! ನಮ್ಮನ್ನು ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’ ದೀದೀಗೆ ಓವೈಸಿ ತಿರುಗೇಟು

    ನಡೆಯುತ್ತಿರುವ ಪ್ರತಿಭಟನೆಗಳಿಂದ ಸಂಸತ್ತಿನ ಅಮೂಲ್ಯ ಸಮಯ ವ್ಯರ್ಥವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಂಸದ, ‘‘ಅಧಿವೇಶನದ ಇಷ್ಟು ದಿನ ಕಳೆದು ಕೊಂಡಿರುವುದು ದುರದೃಷ್ಟಕರ, ಸರ್ಕಾರಕ್ಕೆ ಮೊನಚು ಪ್ರಶ್ನೆಗಳನ್ನು ಕೇಳಬೇಕು. ಅವರ ವೈಫಲ್ಯಗಳನ್ನು ಬಯಲಿಗೆಳೆಯಬೇಕು. ಆದರೆ ಸಮಯವನ್ನು ಸುಮ್ಮನೆ ವ್ಯರ್ಥ ಮಾಡಬಾರದು’’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಅವಧಿಯ ಮಹತ್ವವನ್ನು ಒತ್ತಿ ಹೇಳಿದ ಅವರು, ‘ನಾವು ಪ್ರಶ್ನೋತ್ತರ ಅವಧಿಯನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ’ ಎಂದರು.

    ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಓವೈಸಿ ಅಬ್ಬರ

    ಸಮಯ ವ್ಯರ್ಥ ಮಾಡುತ್ತಿರುವ ಬಗ್ಗೆ ಸಭಾಧ್ಯಕ್ಷರು ಕೋಪಗೊಂಡು, ಪ್ರತಿಭಟನಾನಿರತ ಸದಸ್ಯರಿಗೆ ಸದನದ ಮರ್ಯಾದೆಯನ್ನು ನೆನಪಿಸಿ, ಅವರು ಜನರ ಸಮಸ್ಯೆಗಳನ್ನು ಚರ್ಚಿಸಲು ಚುನಾಯಿತರಾಗಿದ್ದಾರೆ ಎಂದು ತಿಳಿ ಹೇಳಿದರು. ಕಳೆದ ಗುರುವಾರ ಮುಂಗಾರು ಅಧಿವೇಶನ ಪ್ರಾರಂಭವಾದಾಗಿದ್ದು ಅದು ಪದೇ ಪದೇ ಮುಂದೂಡಲ್ಪಟ್ಟಿದೆ. ಆದರೂ, ಪ್ರತಿಪಕ್ಷಗಳು ಮಣಿಪುರದ ಬಗ್ಗೆ ವಿವರವಾದ ಚರ್ಚೆಯನ್ನು ಪ್ರಧಾನಿ ಮೋದಿಯೇ ಶುರು ಮಾಡಬೇಕು ಎಂದು ಒತ್ತಾಯಿಸುತ್ತಲೇ ಇವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts