More

    ‘ಮುಸ್ಲಿಂ ಮತದಾರರು ನಿಮ್ಮ ಆಸ್ತಿ ಅಲ್ಲ! ನಮ್ಮನ್ನು ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’ ದೀದೀಗೆ ಓವೈಸಿ ತಿರುಗೇಟು

    ಹೈದರಾಬಾದ್​: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಮಾತಿನ ತಿರುಗೇಟು ನೀಡಿದ್ದಾರೆ. ನನ್ನನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ. ಮುಸ್ಲಿಂ ಮತದಾರರೇನು ನಿಮ್ಮ ಆಸ್ತಿ ಅಲ್ಲ ಎಂದು ಓವೈಸಿ ಮಮತಾ ಬ್ಯಾನರ್ಜಿ ಅವರಿಗೆ ಹೇಳಿದ್ದಾರೆ.

    ಇದನ್ನೂ ಓದಿ: ಮದುವೆಯಾದ ಸ್ನೇಹಿತ ಪಾರ್ಟಿಗೆ ಕಡಿಮೆ ಹೆಂಡ ತಂದ! ನೀ ಬದುಕಲು ಯೋಗ್ಯನಲ್ಲ ಎಂದು ಕೊಂದೇ ಬಿಟ್ಟರು ಸ್ನೇಹಿತರು

    ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು, ಬಿಜೆಪಿಗೆ ಹೈದರಾಬಾದ್ ಮೂಲದ ಪಕ್ಷವೊಂದು ಸಹಾಯ ಮಾಡುತ್ತದೆ. ಬಿಜೆಪಿ ಆ ಪಕ್ಷಕ್ಕೆ ಹಣದ ಹೊಳೆಯನ್ನೇ ಹರಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಹೇಳಿದ್ದರು. ಈ ಮಾತಿನಿಂದಾಗಿ ಸಿಟ್ಟಿಗೆದ್ದಿರುವ ಓವೈಸಿ, ಮಮತಾ ಅವರ ವಿರುದ್ಧ ಕಿಡಿ ಕಾರಿದ್ದಾರೆ. ‘ನನ್ನನ್ನು ಮತ್ತು ನನ್ನ ಪಕ್ಷವನ್ನು ಹಣದಿಂದ ಖರೀದಿ ಮಾಡಲು ಪೂರ್ತಿ ವಿಶ್ವದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಅಂತಹ ವ್ಯಕ್ತಿ ಈವರೆಗೂ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಮಮತಾ ಅವರು ಇದುವರೆಗೆ ಮಿರ್​ ಜಾಫರ್ಸ್ ಮತ್ತು ಸಾದಿಕ್‌ಗಳೊಂದಿಗೆ ಮಾತ್ರ ವ್ಯವಹರಿಸಿದ್ದಾರೆ. ತಮಗಾಗಿ ಯೋಚಿಸುವ ಮತ್ತು ಮಾತನಾಡುವ ಮುಸ್ಲಿಮರನ್ನು ಅವರು ಇಷ್ಟಪಡುವುದಿಲ್ಲ. ಅವರು ಬಿಹಾರದ ಮತದಾರರನ್ನು ಅವಮಾನಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಖತರ್​ನಾಕ್​ ಲೇಡಿಯಿಂದ ವಂಚನೆ; 34 ವಾಹನ ಜಪ್ತಿ, ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲು…

    ಮುಸ್ಲಿಂ ಮತದಾರರು ನಿಮ್ಮ ಆಸ್ತಿಯಲ್ಲ. ಈ ರೀತಿ ಮತ ವಿಭಜಿಸಲು ಬಂದವರಿಗೆ ಯಾವ ಪರಿಸ್ಥಿತಿ ಬಂದಿದೆ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಮೊದಲು ನಿಮ್ಮ ಪಕ್ಷವನ್ನು ಭದ್ರವಾಗಿಟ್ಟುಕೊಳ್ಳಿ ಎಂದು ಓವೈಸಿ, ಮಮತಾ ಅವರಿಗೆ ಹೇಳಿದ್ದಾರೆ. (ಏಜೆನ್ಸೀಸ್​)

    ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

    ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts