More

    ಖತರ್​ನಾಕ್​ ಲೇಡಿಯಿಂದ ವಂಚನೆ; 34 ವಾಹನ ಜಪ್ತಿ, ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲು…

    ಬೆಂಗಳೂರು: ಟ್ರಸ್ಟ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಕಾರು, ಬೈಕ್ ಕೊಡಿಸುವುದಾಗಿ ಆಮಿಷವೊಡ್ಡಿ ವಂಚಿಸುತ್ತಿದ್ದ ಖತರ್‌ನಾಕ್ ಕಳ್ಳಿಯನ್ನು ವೈಟ್‌ಫೀಲ್ಡ್ ವಿಭಾಗ ಪೊಲೀಸರು ಬಂಧಿಸಿ 34 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ರಾಮಮೂರ್ತಿನಗರದ ಭಗವತಿ ಅಲಿಯಾಸ್ ಪ್ರೇಮಾ (35) ಬಂಧಿತ ವಂಚಕಿ. ಬೆಳಗಾವಿ, ಧಾರವಾಡ, ಬೆಂಗಳೂರಿನ ಬಾಣಸವಾಡಿ, ಎಚ್‌ಎಎಲ್, ಜಯನಗರ ಠಾಣೆಗಳಲ್ಲಿ 10ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅಂದಾಜು 7 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ತನಿಖೆ ವೇಳೆ ಇನ್ನೋವಾ ಕ್ರಿಸ್ಟಾ, ಫಾರ್ಚೂನರ್, 8 ರಾಯಲ್ ಎನ್​ಫೀಲ್ಡ್​, 22 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ಜಾಮೀನು ಸಹ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಆಂಧ್ರಪ್ರದೇಶ ಮೂಲದ ಭಗವತಿ, ಕಾರು ಮತ್ತು ಬೈಕ್‌ಗಳ ಮಾರಾಟ ಮಳಿಗೆಗಳ ಏಜೆಂಟ್‌ಗಳನ್ನು ಪರಿಚಯ ಮಾಡಿಕೊಂಡು ಕಮಿಷನ್ ಆಮಿಷವೊಡ್ಡಿ ವಾಹನ ಖರೀದಿಗೆ ಬರುವ ಗ್ರಾಹಕರ ಮೊಬೈಲ್ ನಂಬರ್ ಸಂಗ್ರಹಿಸುತ್ತಿದ್ದಳು. ಆನಂತರ ಗ್ರಾಹಕರಿಗೆ ಕರೆ ಮಾಡಿ ಟ್ರಸ್ಟ್ ಮೂಲಕ ಮಾರುಕಟ್ಟೆ ಬೆಲೆಗಿತ್ತ ಕಡಿಮೆ ಬೆಲೆಗೆ ವಾಹನ ಕೊಡಿಸುವುದಾಗಿ ಪುಸಲಾಯಿಸುತ್ತಿದ್ದಳು. ಅದಕ್ಕೆ ಒಪ್ಪಿದ ಗ್ರಾಹಕರಿಗೆ ಮೊದಲು ಮುಂಗಡ ಹಣ ಪಾವತಿ ಮಾಡಬೇಕು. ಟ್ರಸ್ಟ್ ದಾಖಲೆಗಳನ್ನು ಕ್ರೋಢಿಕರಿಸಲು 1 ತಿಂಗಳು ಸಮಯ ಅವಕಾಶ ಬೇಕೆಂದು ಹೇಳುತ್ತಿದ್ದಳು. ವಂಚಕಿ ಮಾತು ನಂಬುತ್ತಿದ್ದ ಅಮಾಯಕರು, ಲಕ್ಷಾಂತರ ರೂ. ಮುಂಗಡ ಹಣ ಕೊಡುತ್ತಿದ್ದರು.

    ಆನಂತರ ಒಂದೇ ಬಾರಿಗೆ ಹೆಚ್ಚಿನ ವಾಹನ ಖರೀದಿಸಿದರೆ ಇನ್ನೂ ಬೆಲೆ ಕಡಿಮೆ ಆಗುತ್ತದೆ. ಬೇರೆ ಯಾರಾದರು ಇದ್ದರೆ ಒಟ್ಟಿಗೆ ಹೇಳಿ ಎಂದು ಸಬೂಬು ಹೇಳಿ ಹಣ ಕೊಟ್ಟವರ ಕಡೆಯಿಂದಲೇ ಚೈನ್ ಲಿಂಕ್ ಮಾದರಿ ಇನ್ನಷ್ಟು ಜನರಿಂದ ಹಣ ಪಡೆಯುತ್ತಿದ್ದಳು. ಆ ಗುಂಪಿನಲ್ಲಿ ಯಾರು ಒತ್ತಡ ಹೇರುತ್ತಾರೋ ಅವರಿಗೆ ಮಾತ್ರ ಒಂದೆರೆಡು ತಿಂಗಳು ಬಿಟ್ಟು ಕೇಳಿದ ವಾಹನವನ್ನು ಕಡಿಮೆ ಬೆಲೆಗೆ ಕೊಡಿಸಿ ಅವರ ಮೂಲಕ ಪ್ರಚಾರ ಪಡೆದುಕೊಂಡು ಮತ್ತಷ್ಟು ಜನರಿಗೆ ಬಲೆ ಬೀಸುತ್ತಿದ್ದಳು. ಇದೇ ರೀತಿ ಉದ್ಯಮಿಗಳು, ಗಣ್ಯರು, ರಾಜಕಾರಣಿ ಮಕ್ಕಳಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿಯೇ 2 ಪ್ರಕರಣಗಳು ದಾಖಲಾಗಿವೆ. ಭಗವತಿ ಮೂಲಕ ಕಡಿಮೆ ಬೆಲೆಗೆ ವಾಹನ ಖರೀದಿಸಿದ್ದವರ ಕಡೆಯಿಂದ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    1 ಕೋಟಿ ವಂಚನೆ

    ಕಾರು ಮಾರಾಟ ಮಳಿಗೆಯ ಸಹಾಯಕ ವ್ಯವಸ್ಥಾಪಕ, ಆರೋಪಿ ಭಗವತಿ ಜತೆ ಸೇರಿ 2018 ರಿಂದ ಪ್ರಕರಣ ಬೆಳಕಿಗೆ ಬರುವಷ್ಟರಲ್ಲಿ 1 ಕೋಟಿ ರೂ. ವಂಚನೆ ಮಾಡಿದ್ದರು. ಮಳಿಗೆಗಳಿಗೆ ಕಾರು ಖರೀದಿಗೆ ಬರುತ್ತಿದ್ದ ಗ್ರಾಹಕರ ಹೆಸರಿನಲ್ಲಿ ದಾಖಲೆಗಳನ್ನು ತಿದ್ದಿ ನಕಲಿ ಮಾಡಿ ಭಗವತಿಗೆ ಕೊಟ್ಟು ವಂಚನೆಗೆ ಸಹಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಕೋವಿಡ್​ನಿಂದ ಗುಣವಾದ ಅಪ್ಪ, ಕೇಕ್​ ಕತ್ತರಿಸಿ ಸಂತಸಪಟ್ಟ ಮಗಳು; ಎಡಿಜಿಪಿ@ಲೋಕಾಭಿರಾಮ!

    ಅಂಗೈಯಲ್ಲೇ ಎಲ್ಲ: ಅನಾರೋಗ್ಯಗೊಂಡಾಗಲೂ ನೆರವಿಗೆ ಬರಲಿದೆ ವಾಟ್ಸ್​​ಆ್ಯಪ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts