More

    ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

    ಮೆಲ್ಬೋರ್ನ್​: ಆರು ವರ್ಷಗಳ ಹಿಂದೆ ನಡೆದಿದ್ದ ಕೊಲೆಯ ವಿಚಾರಣೆಗೆ ಮುಂದಾಗಿರುವ ಆಸ್ಟ್ರೇಲಿಯಾ ಸರ್ಕಾರ ಇದೀಗ ಸಾರ್ವಜನಿಕರಿಗೆ ಹೊಸ ಆಫರ್​ ಒಂದನ್ನು ನೀಡಿದೆ. ಭಾರತ-ಫಿಜಿಯಾ ಮೂಲದ ಮಹಿಳೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಯಾವುದಾದರೂ ಸುಳಿವು ನೀಡಿದರೆ, ಅವರಿಗೆ 2.7 ಕೋಟಿ ರೂಪಾಯಿ (5 ಲಕ್ಷ ಡಾಲರ್​) ಬಹುಮಾನ ನೀಡುವುದಾಗಿ ತಿಳಿಸಲಾಗಿದೆ.

    ಇದನ್ನೂ ಓದಿ: ಅಂದು ಗಾಂಧೀಜಿ ಹೇಳಿದ್ದನ್ನ ಇಂದು ಖರ್ಗೆ, ಡಿಕೆಸಿ, ಸಿದ್ದು ಪಾಲನೆ: ಸಚಿವ ಈಶ್ವರಪ್ಪ ವ್ಯಂಗ್ಯ

    ಭಾರತ-ಫಿಜಿಯಾ ಮೂಲದ ಮೋನಿಕ ಶೆಟ್ಟಿ (39) ಆಸ್ಟ್ರೇಲಿಯಾದ ವೆಸ್ಟ್​ ಹಾಕ್ಸ್ಟಾನ್​ನಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದರು. 2014ರ ಜನವರಿಯಲ್ಲಿ ಅವರ ಮೇಲೆ ಆ್ಯಸಿಡ್​ ದಾಳಿಯಾಗಿದೆ. ಆ್ಯಸಿಡ್​ ದಾಳಿಯಾಗಿ 10 ದಿನಗಳ ನಂತರ ಅವರು ಸಿಕ್ಕಿದ್ದಾರೆ. ಅದೃಷ್ಟವಶಾತ್​ ಆಗ ಆಕೆಯ ಉಸಿರು ನಿಂತಿರಲಿಲ್ಲ. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಆಕೆ ಸಾವನ್ನಪ್ಪಿದರು. ಈ ಪ್ರಕರಣ ನಡೆದು ಆರು ವರ್ಷಕ್ಕೂ ಹೆಚ್ಚಾಗಿದೆ. ಆದರೂ ಅಪರಾಧಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

    ಇದನ್ನೂ ಓದಿ: ಲವ್​ನಲ್ಲಿ ಜಿಹಾದ್​ಗೆ ಜಾಗವೇ ಇಲ್ಲ – ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ‘ಪ್ರೇಮ’ ಪಾಠ !

    ಈ ಪ್ರಕರಣದ ಅಪರಾಧಿಯನ್ನು ಹುಡುಕಲು ಲಿವರ್​ಪೂಲ್​ ನಗರ ಪೊಲೀಸರು ಎಲ್ಲ ರೀತಿಯ ಪ್ರಯತ್ನ ಮಾಡಲಾರಂಭಿಸಿದ್ದಾರೆ. ಒಂದು ವೇಳೆ ಯಾರಿಗಾದರೂ ಅಪರಾಧಿಯ ಸುಳಿವು ಗೊತ್ತಿದ್ದರೆ ಅವರು ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಮೋನಿಕಾ ಕುಟುಂಬಕ್ಕೆ ನ್ಯಾಯ ಒದಗಿಸುವ ಸಲುವಾಗಿ ಎಲ್ಲ ಪ್ರಯತ್ನಗಳನ್ನು ಮಾಡಲು ಸಿದ್ಧವಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮರದಲ್ಲಿ ನೇತಾಡುತ್ತಿತ್ತು 16 ವರ್ಷದ ಬಾಲಕಿ ದೇಹ; ಬೆಚ್ಚಿ ಬೀಳಿಸುತ್ತೆ ಈ ಹೈ ಸ್ಕೂಲ್​ ಲವ್​ ಸ್ಟೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts