More

    ಹಿಜಾಬ್​ ಪೊಲೀಸರ ಮೇಲೆ ನಿಷೇಧ ಹೇರಿದ ಇರಾನ್​ ಸರ್ಕಾರ; ಕಡೆಗೂ ಸಿಕ್ತು ಮುಸ್ಲಿಂ ಮಹಿಳೆಗೆ ಜಯ

    ತೆಹ್ರಾನ್​: ಇರಾನ್​ನಲ್ಲಿ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಉಲ್ಲಂಘಿಸಿದ ಆರೋಪದ ಮೇಲೆ ಮಹ್ಸಾ ಅಮಿನಿರನ್ನು ಬಂಧಿಸಲಾಗಿತ್ತು. ನಂತರ ಇವರ ಸಾವಿನಿಂದ ಪ್ರಚೋದಿಸಲ್ಪಟ್ಟ ಪ್ರತಿಭಟನೆಗಳ ಪರಿಣಾಮ, ಇರಾನ್ ತನ್ನ ನೈತಿಕ ಪೊಲೀಸರನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

    ಪ್ರತಿಭಟನಾಕಾರರು ತಮ್ಮ ಹಿಜಾಬ್ ತಲೆಯ ಹೊದಿಕೆಗಳನ್ನು ಸುಟ್ಟುಹಾಕಿದ್ದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ವಿಶೇಷವಾಗಿ ತೆಹ್ರಾನ್‌ನ ಕೆಲವು ಭಾಗಗಳಲ್ಲಿ ಹಿಜಾಬ್ ಧರಿಸುವುದನ್ನೂ ನಿಲ್ಲಿಸಿದ್ದಾರೆ.

    ‘ನೈತಿಕತೆಯ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅವರನ್ನು ರದ್ದುಗೊಳಿಸಲಾಗಿದೆ’ ಎಂದು ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಹೇಳಿದ್ದಾರೆ. ಅವರ ಕಾಮೆಂಟ್ ಧಾರ್ಮಿಕ ಸಮ್ಮೇಳನದಲ್ಲಿ ಒಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಅಲ್ಲಿ ಅವರಲ್ಲಿ ‘ನೈತಿಕ ಪೊಲೀಸ್​ ಇಲಾಖೆಯನ್ನು ಏಕೆ ಮುಚ್ಚಲಾಗುತ್ತಿದೆ’ ಎಂಬ ಪ್ರಶ್ನೆಗೆ ಉತ್ತರಿಸುವಾಗ ಈ ಹೇಳಿಕೆ ನೀಡಿದ್ದಾರೆ.

    ‘ಗಲಭೆಗಳನ್ನು ಎದುರಿಸಲು ಉತ್ತಮ ಮಾರ್ಗವೆಂದರೆ ಜನರ ನೈಜ ಬೇಡಿಕೆಗಳಿಗೆ ಗಮನ ಕೊಡುವುದು’ ಎಂದು ಸಂಸತ್ತಿನ ಪ್ರೆಸಿಡಿಯಂ ಕೌನ್ಸಿಲ್ ವಕ್ತಾರ ಸೆಯ್ಯದ್ ನೆಜಾಮೊಲ್ಡಿನ್ ಮೌಸವಿ ಹೇಳಿದರು.

    ಇರಾನ್‌ನ ಅಮೆರಿಕ ಬೆಂಬಲಿತ ರಾಜಪ್ರಭುತ್ವವನ್ನು ಉರುಳಿಸಿದ 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ, ಅಧಿಕಾರಿಗಳು ಮಹಿಳೆಯರು ಮತ್ತು ಪುರುಷರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಪಾಲಿಸುತ್ತಾ ಬಂದಿದ್ದಾರೆ. ಈಗ ದಶಕಗಳ ನಂತರ ಅಲ್ಲಿನ ಮುಸ್ಲಿಂ ಮಹಿಳೆಯರಿಗೆ ಹಿಜಾಬ್​ ಬಿಟ್ಟು ಓಡಾಡುವ ಅವಕಾಶ ಲಭಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts